ಬಿಡಬ್ಲ್ಯೂಎಸ್ಎಸ್ ಬಿ ಮೊದಲ ಮಹಿಳಾ ಮುಖ್ಯ ಇಂಜಿನಿಯರ್ ಆಗಿ ಚಂದ್ರಪ್ರಭಾ ನೇಮಕ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲ್ಯೂಎಸ್ಎಸ್ ಬಿ)ಯ 54 ವರ್ಷಗಳ ಇತಿಹಾಸದಲ್ಲೇ...
ಎವಿ ಚಂದ್ರಪ್ರಭಾ
ಎವಿ ಚಂದ್ರಪ್ರಭಾ
ಬೆಂಗಳರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(ಬಿಡಬ್ಲ್ಯೂಎಸ್ಎಸ್ ಬಿ)ಯ 54 ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಮುಖ್ಯ ಇಂಜಿನಿಯರ್ ಆಗಿ ನೇಮಕಗೊಂಡಿದ್ದಾರೆ.
ಬಿಡಬ್ಲ್ಯೂಎಸ್ಎಸ್ ಬಿಯ ಮೊದಲ ಮಹಿಳಾ ಮುಖ್ಯ ಇಂಜಿನಿಯರ್ ಆಗಿ 59 ವರ್ಷದ ಎವಿ ಚಂದ್ರಪ್ರಭಾ ಅವರು ಮೇ 2ರಂದು ಅಧಿಕಾರ ವಹಿಸಿಕೊಂಡಿದ್ದು, ಬಡ್ತಿ ಮೀಸಲು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ಆದೇಶಕ್ಕೆ ಧನ್ಯವಾದ ಹೇಳಿದ್ದಾರೆ.
ಬಿಡಬ್ಲ್ಯೂಎಸ್ಎಸ್ ಬಿಯಲ್ಲಿರುವ ಇಂಜಿನಿಯರ್ ಗಳ ಪಟ್ಟಿಯಲ್ಲಿ ಬರೀ ಪುರುಷರ ಹೆಸರುಗಳೇ ಇದ್ದು, ಕೊನೆಯಲ್ಲಿ ಚಂದ್ರಪ್ರಭಾ ಅವರ ಹೆಸರು ಸೇರಿಕೊಂಡಿದೆ. ಅವರು ಸಹ ಮೇ 30 ನಿವೃತ್ತಿಯಾಗುತ್ತಿದ್ದು, ಕೇವಲ ಅಲ್ಪ ಅವಧಿಗಾಗಿ ಮಾತ್ರ ಮುಖ್ಯ ಇಂಜಿನಿಯರ್ ಆಗಿ ಸೇವೆ ಸಲ್ಲಿಸಲಿದ್ದಾರೆ.
1981ರಲ್ಲಿ ಸಹಾಯಕ ಇಂಜಿನಿಯರ್ ಆಗಿ ಬಿಡಬ್ಲ್ಯೂಎಸ್ಎಸ್ ಬಿಗೆ ಸೇರಿದ್ದ ಚಂದ್ರಪ್ರಭಾ ಅವರು, ಮುಖ್ಯ ಕಚೇರಿಯಲ್ಲಿ ಕೆಲ ಕಾಲ ತರಬೇತಿ ಪಡೆದ ನಂತರ ತಾತಗುಣಿ ಪಂಪಿಂಗ್ ಸ್ಟೇಷನ್ ಗೆ ನಿಯೋಜಿಸಲಾಗಿತ್ತು. ಅಲ್ಲಿ 150 ಸಿಬ್ಬಂದಿ ಪೈಕಿ ಇವರೊಬ್ಬರೆ ಮಹಿಳೆಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com