ಆಯುಧದೊಂದಿಗೆ ಲೋಕಾಯುಕ್ತ ಕಚೇರಿಗೆ ನುಗ್ಗಲು ಯತ್ನಿಸಿದ ವ್ಯಕ್ತಿ ಬಂಧನ, ನಂತರ ಬಿಡುಗಡೆ

ಹರಿತವಾದ ಆಯುಧದಂತಹ ಸಂಶಯಾಸ್ಪದ ವಸ್ತುವನ್ನು ತೆಗೆದುಕೊಂಡು ಅಪರಿಚಿತ ವ್ಯಕ್ತಿಯೊಬ್ಬ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು; ಹರಿತವಾದ ಆಯುಧದಂತಹ ಸಂಶಯಾಸ್ಪದ ವಸ್ತುವನ್ನು ತೆಗೆದುಕೊಂಡು ಅಪರಿಚಿತ ವ್ಯಕ್ತಿಯೊಬ್ಬ ಲೋಕಾಯುಕ್ತ ಕಚೇರಿಯೊಳಗೆ ನುಗ್ಗಲು ಯತ್ನಿಸಿದಾಗ ಆತಂಕದ ವಾತಾವರಣ ನಿನ್ನೆ ಲೋಕಾಯುಕ್ತ ಕಚೇರಿ ಆವರಣದಲ್ಲಿ ಮತ್ತೆ ಉಂಟಾಯಿತು.

ಮುಖ್ಯ ದ್ವಾರದ ಹತ್ತಿರ ವ್ಯಕ್ತಿ ಬರುತ್ತಿದ್ದಂತೆ ಭದ್ರತಾ ಸಿಬ್ಬಂದಿ ಆತನನ್ನು ತಡೆದು ನಿಲ್ಲಿಸಿ ವಿಧಾನಸೌಧ ಪೊಲೀಸರಿಗೆ ಒಪ್ಪಿಸಿದರು.

ನಿನ್ನೆ ಬೆಳಗ್ಗೆ ಸುಮಾರು 9 ಗಂಟೆಗೆ ಈ ಘಟನೆ ನಡೆದಿದ್ದು ಸಂಶಯಾಸ್ಪದ ವ್ಯಕ್ತಿ ಸುಮಾರು 35ರಿಂದ 40 ವರ್ಷದವನಾಗಿದ್ದನು. ಈತ ಲೋಕಾಯುಕ್ತ ಕಚೇರಿ ಆವರಣದಲ್ಲಿ ಭದ್ರತಾ ಸಿಬ್ಬಂದಿ ಬಳಿ ಬಂದು ತಾನು ಸಚಿವರೊಬ್ಬರನ್ನು ಭೇಟಿಯಾಗಲು ಬಂದಿದ್ದೇನೆ ಎಂದು ತನ್ನ ಹೆಸರು, ವಿವರ ಹೇಳದೆ ಒಳನುಗ್ಗಲು ಯತ್ನಿಸಿದನು. ಆತನನ್ನು ಸಿಬ್ಬಂದಿ ತಡೆದು ನಿಲ್ಲಿಸಿ ತಪಾಸಣೆ ನಡೆಸಿದರು.

ನಂತರ ಪೊಲೀಸರಿಗೆ ಆತನ ಬಳಿ ಹರಿತ ಕತ್ತಿಯಂತಹ ಆಯುಧ ಸಿಕ್ಕಿದೆ. ವಿಧಾನಸೌಧ ಸಿಬ್ಬಂದಿ ಆತನನ್ನು ಪೊಲೀಸ್ ಠಾಣೆಗೆ ಕರೆತಂದು ಪ್ರಶ್ನೆ ಮಾಡಿದಾಗ ಸರಿಯಾಗಿ ಮಾತನಾಡಲು ಅವನಿಗೆ ಸಾಧ್ಯವಾಗುತ್ತಿರಲಿಲ್ಲ.

ಆತನ ವರ್ತನೆ ನೋಡಿ ಮಾನಸಿಕ ಅಸ್ವಸ್ಥ ಎಂದು ತಿಳಿದು ಬಿಟ್ಟುಬಿಟ್ಟೆವು. ಪದೇ ಪದೇ ಸಚಿವರು, ಸಚಿವರು ಎಂದು ಹೇಳುತ್ತಿದ್ದನು. ಆದರೆ ಯಾವ ಸಚಿವರ ಹೆಸರನ್ನೂ ಹೇಳುತ್ತಿರಲಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕೆಲ ವಾರಗಳ ಹಿಂದೆ ಮಹಿಳೆಯೊಬ್ಬಳು ಚೂರಿ ಹಿಡಿದುಕೊಂಡು ಬಂದು ಲೋಕಾಯುಕ್ತ ಕಚೇರಿಯೊಳಗೆ ನುಗ್ಗಿದ್ದಳು. ಆಕೆಯನ್ನು ಪೊಲೀಸರು ಬಂಧಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com