ಸ್ವಾತಂತ್ರ್ಯಾ ನಂತರದ ಎಲ್ಲಾ ಚುನಾವಣೆಯಲ್ಲಿ ಮತದಾನ: 111 ವರ್ಷದ ಸಿದ್ಧಗಂಗಾ ಶ್ರೀ ಎಲ್ಲರಿಗೂ ಮಾದರಿ

ನಡೆದಾಡುವ ದೇವರು, ಶತಾಯುಷಿ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಗಳು ತುಮಕೂರಿನಲ್ಲಿ ಶನಿವಾರ ಮತದಾನ ಮಾಡಿದರು...
ತುಮಕೂರು; ಮತಹಕ್ಕು ಚಲಾಯಿಸಿದ ನಡೆದಾಡುವ ದೇವರು ಸಿದ್ದಗಂಗಾ ಶ್ರೀ
ತುಮಕೂರು; ಮತಹಕ್ಕು ಚಲಾಯಿಸಿದ ನಡೆದಾಡುವ ದೇವರು ಸಿದ್ದಗಂಗಾ ಶ್ರೀ
ತುಮಕೂರು: ನಡೆದಾಡುವ ದೇವರು, ಶತಾಯುಷಿ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಗಳು ತುಮಕೂರಿನಲ್ಲಿ ಶನಿವಾರ ಮತದಾನ ಮಾಡಿದರು. 
ಸಿದ್ದಗಂಗಾ ಮಠದ ಆವರಣದಲ್ಲಿರುವ ಮತಗಟ್ಟೆ ಸಂಖ್ಯೆ 133ರಲ್ಲಿ ಶಿವಕುಮಾರ ಸ್ವಾಮೀಜಿಗಳು ಮತಹಕ್ಕು ಚಲಾಯಿಸಿದರು.
111ರ ಇಳಿಯವಯಸ್ಸಿನಲ್ಲಿಯೂ ಲವಲವಿಕೆಯಿಂದ ಬಂದು ಮತ ಚಲಾಯಿಸಿರುವುದು ವಿಶೇಷ ಹಾಗೂ ಇಂದಿನ ಯುವಕರಿಗೆ ಪ್ರೇರಣೆಯಾಗಿದೆ.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ನಡೆದ ಪ್ರತೀಯೊಂದು ಚುನಾವಣೆಯಲ್ಲಿಯೂ ಸಿದ್ದಗಂಗಾ ಶ್ರೀಗಳು ಮತಹಕ್ಕು ಚಲಾಯಿಸಿದ್ದಾರೆ, ಗ್ರಾಮ ಪಂಚಾಯಿತಿ ಚುನಾವಣೆ, ಲೋಕ ಚುನಾವಣೆಯಲ್ಲಿ ಪ್ರತೀ ಬಾರಿ ಮತದಾನ ಮಾಡುತ್ತಲೇ ಇದ್ದಾರೆ. 

ಪ್ರತೀ ಬಾರಿ ಚುನಾವಣೆ ಬಂದಾಗಲೂ ಉತ್ಸುಕತೆಯಿಂದಲೇ ಶ್ರೀಗಳು ಮತ ಚಲಾಯಿಸುತ್ತಿದ್ದಾರೆ. ಬೆಳಿಗ್ಗೆ ಎದ್ದ ಕೂಡಲೇ ತಮ್ಮ ಎಲ್ಲಾ ಸಾಂಪ್ರದಾಯಿಕ ಕಾರ್ಯಗಳನ್ನು ಮುಗಿಸಿಕೊಂಡು ಬಂದು, ಬೂತ್ ಬಂದು ಮೊದಲು ಮತದಾನ ಮಾಡುತ್ತಾರೆ. ಆದರೆ. ಈ ಬಾರಿ ವೃದ್ಧಾಪ್ಯ ಸಮಸ್ಯೆಗಳಿಂದಾಗಿ ಮೊದಲು ಮತಹಕ್ಕು ಚಲಾವಣೆ ಮಾಡಲು ಸಾಧ್ಯವಾಗಿಲ್ಲಿ. ಆದರೆ, ಸಿದ್ಧಗಂಗಾ ಮಠದ ಕಿರಿಯ ಶ್ರೀಗಳು ಬೆಳಿಗ್ಗೆಯೇ ಮಠದ ಆವರಣದಲ್ಲಿರುವ ಸಿದ್ದಲಿಂಗೇಶ್ವ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತ ಹಕ್ಕು ಚಲಾಯಿಸಿದ್ದಾರೆ. ಈ ಮೂಲಕ ಮೊದಲ ಮತದಾರರಾಗಿ ಹಕ್ಕಿ ಚಲಾಯಿಸಿ. ಇತರರು ಮತ ಹಾಕುವಂತೆ ಪ್ರೇರೇಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com