ಹಾಸನ: ಮನೆಬಿಟ್ಟು ನಾಪತ್ತೆಯಾಗಿದ್ದ ಬಾಲಕಿ ಏಳು ವರ್ಷದ ನಂತರ ಮರಳಿ ಗೂಡಿಗೆ!

ಬೇಲೂರು ತಾಲೂಕಿನ ದೇವಿಹಳ್ಳಿ ಗ್ರಾಮದಿಂದ ನಾಪತ್ತೆಯಾಗಿದ್ದ ಬಾಲಕಿಯನ್ನು ಏಳುವರ್ಷದ ನಂತರ ಅವರ ಕುಟುಂಬ ಪತ್ತೆ ಹಚ್ಚಿದೆ. ಹನುಮಂತ ಬೋವಿ ಪುತ್ರಿ ರೇಣುಕಾ 8 ನೇ ವಯಸ್ಸಿನಲ್ಲಿ ದೇವಿಹಳ್ಳಿಯಿಂದ ನಾಪತ್ತೆಯಾಗಿದ್ದರು.
ಕುಟುಂಬ ಸದಸ್ಯರೊಡನೆ ರೇಣುಕಾ
ಕುಟುಂಬ ಸದಸ್ಯರೊಡನೆ ರೇಣುಕಾ

ಹಾಸನ: ಬೇಲೂರು ತಾಲೂಕಿನ ದೇವಿಹಳ್ಳಿ ಗ್ರಾಮದಿಂದ ನಾಪತ್ತೆಯಾಗಿದ್ದ ಬಾಲಕಿಯನ್ನು ಏಳುವರ್ಷದ ನಂತರ ಅವರ ಕುಟುಂಬ ಪತ್ತೆ ಹಚ್ಚಿದೆ. ಹನುಮಂತ ಬೋವಿ ಪುತ್ರಿ ರೇಣುಕಾ 8 ನೇ ವಯಸ್ಸಿನಲ್ಲಿ  ದೇವಿಹಳ್ಳಿಯಿಂದ ನಾಪತ್ತೆಯಾಗಿದ್ದರು.

ಆಕೆಯ ಕುಟುಂಬ ಸದಸ್ಯರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಹಾಸನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರಂತರವಾಗಿ ಹುಡುಕಾಟ ನಡೆಸಿ ಸುಸ್ತಾದ  ಕುಟುಂಬ ಸದಸ್ಯರು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಲ್ಲಿ ದೂರು ದಾಖಲಿಸಿದ್ದರು.

ನಾಪತ್ತೆಯಾಗಿರುವ ಮಕ್ಕಳ ಕಲ್ಯಾಣದಲ್ಲಿ ತೊಡಗಿಸಿಕೊಂಡಿರುವ  ಸಂಯೋಜಿತ ಬಾಲಕರ ರಕ್ಷಣಾ ಕೇಂದ್ರ ಸತತ ಪ್ರಯತ್ನದಿಂದ ಬಾಲಕಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ರೇಣುಕಾ ಮನೆಬಿಟ್ಟು ಬಂದ ನಂತರ ರೇಕಾ ಎಂಬ ಹೆಸರಿನಲ್ಲಿ ಮಂಡ್ಯ ಮಕ್ಕಳ ಕಲ್ಯಾಣ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಳು. ಮಂಡ್ಯದ ಸಮಿತಿಯ ಸದಸ್ಯರಿಗೆ ಸರಿಯಾದ ಮಾಹಿತಿಯನ್ನು ರೇಣುಕಾ ನೀಡಿರಲಿಲ್ಲ. ಇತ್ತೀಚಿಗೆ ಸಮಿತಿ ಆಕೆಯನ್ನು ವಿಚಾರಣೆ ನಡೆಸಿ ಜಿಲ್ಲಾ ಮಕ್ಕಳ ಕಲ್ಯಾಣ ನಿರ್ದೇಶನದ ಮೇರೆಗೆ ಆಕೆಯನ್ನು ಅವರ ಕುಟುಂಬ ಸದಸ್ಯರ ವಶಕ್ಕೆ ನೀಡಲಾಗಿದೆ.

ರೇಣುಕಾ 14 ವರ್ಷ ದಾಟಿದ ನಂತರ ಮಂಡ್ಯ ಮಕ್ಕಳ ಕಲ್ಯಾಣ ಸಮಿತಿ ಆ ಬಾಲಕಿಯನ್ನು ಮೈಸೂರು ಕೇಂದ್ರಕ್ಕೆ ಸೇರಿಸಲಾಗಿತ್ತು, ಆಕೆ ಮರಳಿ ಮನೆಗೆ ಬರುತ್ತಾಳೆ ಎಂಬ ನಂಬಿಕೆ ಇರಲಿಲ್ಲ, ಸಂಪರ್ಕ ಹಾಗೂ ಜ್ಞಾನದ ಕೊರತೆಯಿಂದಾಗಿ ಆಕೆಯನ್ನು ಸಂಪರ್ಕಿಸಲು ಆಗಿರಲಿಲ್ಲ ಎಂದು ರೇಣುಕಾ ತಂದೆ  ಹನುಮಂತಪ್ಪ ಹೇಳಿದ್ದಾರೆ.

ಆಕೆಯ ಪೋಷಕರಿಗೆ ಸರಿಯಾದ ಮಾಹಿತಿ ಇಲ್ಲದಿದ್ದರಿಂದ ಏಳು ವರ್ಷಗಳಿಂದ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಹೆಸರು ಕೂಡಾ ಬದಲಾಗಿದ್ದರಿಂದ ಆಕೆಯನ್ನು ಪತ್ತೆ ಹಚ್ಚಲು ಪ್ರಮುಖ ತೊಡಕಾಗಿತ್ತು ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಕೋಮಲಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com