ಜೂನ್ 5ಕ್ಕೆ ರಾಜ್ಯಕ್ಕೆ ನೈರುತ್ಯ ಮುಂಗಾರು ಆಗಮನ: ಹವಾಮಾನ ಇಲಾಖೆ ವರದಿ

ಕೇರಳ ರಾಜ್ಯಕ್ಕೆ ಈ ತಿಂಗಳ 29ಕ್ಕೆ ನೈರುತ್ಯ ಮುಂಗಾರು ಪ್ರವೇಶವಾದರೆ ಕರ್ನಾಟಕದಲ್ಲಿ ಜೂನ್ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೇರಳ ರಾಜ್ಯಕ್ಕೆ ಈ ತಿಂಗಳ 29ಕ್ಕೆ ನೈರುತ್ಯ ಮುಂಗಾರು ಪ್ರವೇಶವಾದರೆ ಕರ್ನಾಟಕದಲ್ಲಿ ಜೂನ್ 5ರಂದು ನೈರುತ್ಯ ಮುಂಗಾರು ಕಾಣಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ವರ್ಷ ರಾಜ್ಯದಲ್ಲಿ ನೈರುತ್ಯ ಮುಂಗಾರು ಸಹಜವಾಗಿ ಸುರಿಯಲಿದೆ, ಕಳೆದ ವರ್ಷ ಕರಾವಳಿಯಲ್ಲಿ ನೈರುತ್ಯ ಮುಂಗಾರಿನ ಕೊರತೆ ಮತ್ತು ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ತೀವ್ರವಾಗಿ ಕಾಣಿಸಿಕೊಂಡಿತ್ತು.

ಈ ವರ್ಷ ಸಾಕಷ್ಟು ಮಳೆ ಸುರಿಯುವುದರಿಂದ ರೈತರ ಮೊಗದಲ್ಲಿ ಸಂತಸ ಮೂಡಲಿದೆ. ಜೂನ್ ತಿಂಗಳಿನಿಂದ ಸೆಪ್ಟೆಂಬರ್ ವರೆಗೆ ಶೇಕಡಾ 97ರಷ್ಟು ಮಳೆ ಸುರಿಯಲಿದೆ ಎಂದು ಕೂಡ ಹವಾಮಾನ ಇಲಾಖೆ ತಿಳಿಸಿದೆ.

ಕಳೆದ 40 ವರ್ಷಗಳಲ್ಲಿ ರಾಜ್ಯಕ್ಕೆ ಜೂನ್ 5ರಂದು ಮುಂಗಾರು ಮಳೆ ಪ್ರವೇಶವಾಗುತ್ತಿತ್ತು. ಈ ವರ್ಷ ದಕ್ಷಿಣ ಒಳನಾಡಿಗೆ ನೈರುತ್ಯ ಮುಂಗಾರು ಸುರಿಯುವ ಸಾಧ್ಯತೆಯಿದೆ. ನಂತರ ಇಡೀ ರಾಜ್ಯಕ್ಕೆ ಪಸರಿಸಲಿದೆ ಎಂದು ಬೆಂಗಳೂರು ಹವಾಮಾನ ಇಲಾಖೆ ನಿರ್ದೇಶಕ ಸಿಎಸ್ ಪಾಟೀಲ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com