ಭಟ್ಕಳದಲ್ಲಿ ಹಾನಿಗೀಡಾದ ಟ್ರಕ್
ರಾಜ್ಯ
ಭಟ್ಕಳ: ಹಸುಗಳನ್ನು ಸಾಗಿಸುತ್ತಿದ್ದ ಟ್ರಕ್ ಚಾಲಕ, ಕ್ಲೀನರ್ ಗಳ ಮೇಲೆ ಹಲ್ಲೆ, 13 ಮಂದಿ ಬಂಧನ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಬಸ್ತಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಭಾನುವಾರ ...
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಬಸ್ತಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಭಾನುವಾರ ರಾತ್ರಿ ಎರಡು ಟ್ರಕ್ ನಲ್ಲಿ ಅಕ್ರಮವಾಗಿ ಹಸುಗಳನ್ನು ಸಾಗಣೆ ಮಾಡುತ್ತಿದ್ದ ಚಾಲಕನನ್ನು ಮತ್ತು ಕ್ಲೀನರ್ ಗಳ ಮೇಲೆ ಹಲ್ಲೆ ನಡೆಸಿದ 13 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಸಾಯಿಖಾನೆಗೆ ಹಸುಗಳನ್ನು ಅಕ್ರಮವಾಗಿ ಕದ್ದೊಯ್ಯಲಾಗುತ್ತಿದೆ ಎಂದು ತಪ್ಪಾಗಿ ಭಾವಿಸಿದ್ದ ಜನರ ಗುಂಪು ಟ್ರಕ್ ನ ಇಬ್ಬರು ಚಾಲಕರು ಮತ್ತು ಇಬ್ಬರು ಕ್ಲೀನರ್ ಗಳನ್ನು ಹೆದ್ದಾರಿಯಲ್ಲಿ ತಡೆದು ನಿಲ್ಲಿಸಿ ಹಲ್ಲೆ ನಡೆಸಿತ್ತು. ಟ್ರಕ್ ನ್ನು ಕೂಡ ಹಾನಿಗೊಳಿಸಿದ್ದರು. ಪೊಲೀಸರು 13 ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನಂತರ ಅವರನ್ನು ಕಾರವಾರ ಜೈಲಿಗೆ ಕಳುಹಿಸಲಾಯಿತು.
ಗಿರ್ ತಳಿಯ 14 ಹಸುಗಳು ಮತ್ತು 14 ಕರುಗಳನ್ನು ಗುಜರಾತ್ ನಿಂದ ಕೇರಳದ ತ್ರಿಶೂರಿನ ಡೈರಿಗೆ ಸಾಗಾಣಿಕೆ ಮಾಡಲಾಗುತ್ತಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ