ವಿಧಾನ ಪರಿಷತ್ ಚುನಾವಣೆಗೆ 11 ಮಂದಿ ನಾಮಪತ್ರ ಸಲ್ಲಿಕೆ, ಅವಿರೋಧ ಆಯ್ಕೆ

ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್ ನ 11 ಸ್ಥಾನಗಳಿಗೆ ಜೂನ್ 11 ರಂದು ನಡೆಯುವ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಿಂದ 11 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿಯ ಅಭ್ಯರ್ಥಿಗಳು
ಬಿಜೆಪಿಯ ಅಭ್ಯರ್ಥಿಗಳು

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್ ನ 11ಸ್ಥಾನಗಳಿಗೆ ಜೂನ್ 11 ರಂದು ನಡೆಯುವ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಿಂದ 11 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಇಂದು ಬಿಜೆಪಿಯಿಂದ ಐವರು, ಕಾಂಗ್ರೆಸ್ ನಿಂದ ನಾಲ್ಕು ಮಂದಿ, ಜೆಡಿಎಸ್ ನಿಂದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.  

ಬಿಜೆಪಿಯಿಂದ ರುದ್ರೇಗೌಡ, ತೇಜಸ್ವಿನಿಗೌಡ, ಕೆ.ಪಿ. ನಂಜುಂಡಿ, ರಘುನಾಥ್ ಮಲ್ ಕಾಪುರೆ , ಮತ್ತು ಎನ್, ರವಿಕುಮಾರ್ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ಕಾಂಗ್ರೆಸ್ ಪಕ್ಷದಿಂದ  ಸಿ.ಎಂ. ಇಬ್ರಾಹೀಂ, ಕೆ. ಗೋವಿಂದರಾಜು, ಅರವಿಂದ ಅರಳಿ, ಮತ್ತು ಕೆ. ಹರೀಶ್ ಕುಮಾರ್ ನಾಮಪತ್ರ ಸಲ್ಲಿಸಿದರು. ಜೆಡಿಎಸ್ ನಿಂದ  ಬಿ. ಎಂ. ಫಾರೂಖ್ ಮತ್ತು ಧರ್ಮೇಗೌಡ ನಾಮಪತ್ರ ಸಲ್ಲಿಸಿದರು.

ವಿಧಾನಪರಿಷತ್ತಿನ 11 ಸ್ಥಾನಗಳಿಗೆ 11 ಅಭ್ಯರ್ಥಿಗಳು ಮಾತ್ರ ನಾಮಪತ್ರ ಸಲ್ಲಿಸಿರುವುದರಿಂದ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ. ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಂತರ ಇವರ ಅವಿರೋಧ ಆಯ್ಕೆ ಬಗ್ಗೆ ಪ್ರಕಟಣೆ ಹೊರಬೀಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com