ಮೈಸೂರು ಮೇಯರ್ ಚುನಾವಣೆ: ಮೈತ್ರಿ ಪಕ್ಷಗಳಿಗೆ ಮತ್ತೊಂದು ಸತ್ವ ಪರೀಕ್ಷೆ!

ರಾಜ್ಯದಲ್ಲಿ ಮೈತ್ರಿ ಮೂಲಕ ಸರ್ಕಾರ ರಚಿಸಿರುವ ಕಾಂಗ್ರೆಸ್​-ಜೆಡಿಎಸ್​ ತಮ್ಮ ದೋಸ್ತಿಯನ್ನು ಮೈಸೂರು ಮಹಾನಗರ ಪಾಲಿಕೆಗೂ ಮುಂದುವರೆಸಲು ಯೋಚಿಸುತ್ತಿದೆ
ಮೈಸೂರು ಮಹಾನಗರ ಪಾಲಿಕೆ
ಮೈಸೂರು ಮಹಾನಗರ ಪಾಲಿಕೆ
ಮೈಸೂರು: ರಾಜ್ಯದಲ್ಲಿ ಮೈತ್ರಿ ಮೂಲಕ ಸರ್ಕಾರ ರಚಿಸಿರುವ ಕಾಂಗ್ರೆಸ್​-ಜೆಡಿಎಸ್​ ತಮ್ಮ ದೋಸ್ತಿಯನ್ನು ಮೈಸೂರು ಮಹಾನಗರ ಪಾಲಿಕೆಗೂ ಮುಂದುವರೆಸಲು ಯೋಚಿಸುತ್ತಿದೆ
ನವೆಂಬರ್ 17 ರಂದು ಮೇಯರ್ ಚುನಾವಣೆ ನಡೆಯಲಿದ್ದು,  ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರೆತಿಲ್ಲ, ಹೀಗಾಗಿ ಮೇಯರ್​, ಉಪಮೇಯರ್​ ಪಟ್ಟಕ್ಕಾಗಿ  ಈ ದೋಸ್ತಿಗಳಲ್ಲಿ ಗುದ್ದಾಟ ಆರಂಭವಾಗಿದೆ.
ಈಗಾಗಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು ಎರಡು ತಿಂಗಳು ಕಳೆದಿದ್ದರೂ, ದೋಸ್ತಿಗಳ ನಡುವೆ ಯಾರಿಗೆ ಪಟ್ಟ ಕಟ್ಟಬೇಕು ಎಂಬ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ. ಈ ಹಿನ್ನೆಲೆಯಲ್ಲಿ ಜೆಡಿಎಸ್​ ಹಾಗೂ ಕಾಂಗ್ರೆಸ್​ನ ಇಬ್ಬರು ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಇದ್ದಕ್ಕಾಗಿ ಇದೇ ನ.17ರಂದು ಚುನಾವಣೆ ನಡೆಸಲು ನಿರ್ಧಾರವಾಗಿದೆ.
ಜೆಡಿಎಸ್​ ಮೇಯರ್​ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದು, ಸಿದ್ದರಾಮಯ್ಯ ಮಾತ್ರ ನಮಗೆ ಮೇಯರ್​ ಸ್ಥಾನ ಬೇಕು ಎಂದು ಪಟ್ಟ ಹಿಡಿದಿದ್ದಾರೆ. ಕಣದಲ್ಲಿ ಶಾಂತ ಕುಮಾರಿ ಹಾಗೂ ಲಕ್ಷ್ಮೀ ಶಿವಣ್ಣ ಅಭ್ಯರ್ಥಿಗಳಾಗಿದ್ದು, ತಮ್ಮ ಅಭ್ಯರ್ಥಿ ಶಾಂತಗೆ ಮೇಯರ್​ ಪಟ್ಟ ಕಟ್ಟಬೇಕು ಎಂದು ಮಾಜಿ ಸಿಎಂ ಪಣ ತೊಟ್ಟಿದ್ದಾರೆ.
ಇತ್ತೀಚೆಗೆ ಮಹಾನಗರ ಪಾಲಿಕೆ 65 ಸ್ಥಾನಗಳಿಗೆ ಚುನಾವಣೆಯಲ್ಲಿ ಬಿಜೆಪಿ 22, ಕಾಂಗ್ರೆಸ್ 19, ಜೆಡಿಎಸ್ 18 ಹಾಗೂ ಬಿಎಸ್ ಪಿ 1 ಸ್ಥಾನ ಮತ್ತು ಐದು ಸ್ವತಂತ್ರ್ಯ ಸದಸ್ಯರು ಆಯ್ಕೆಯಾಗಿದ್ದಾರೆ, ಜೆಡಿಎಸ್ನ ಕೆಲವು ಬಂಡಾಯ ಸದಸ್ಯದರು ಹಾಗೂ ಸ್ವತಂತ್ರ್ಯ ಅಭ್ಯರ್ಥಿಗಳನ್ನು ತನ್ನಡೆಗೆ ಸೆಳೆದು ಮತ ಹಾಕಿಸಿಕೊಳ್ಳಲು ಕಾಂಗ್ರೆಸ್ ಹುನ್ನಾರ ನಡೆಸುತ್ತಿದೆ. 
ಆದರೆ ಬಿಬಿಎಂಪಿಯಲ್ಲೂ ಮೇಯರ್ ಸ್ಥಾನವನ್ನು ಕಾಂಗ್ರೆಸ್ ಗೆ ನೀಡಿದ್ದು ಮೈಸೂರು ಮಹಾನಗರ ಪಾಲಿಕೆ ಮೇಯರ್ ಹುದ್ದೆಯನ್ನು ಜೆಡಿಎಸ್ ಗೆ ನೀಡಬೇಕೆಂದು ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್ ಹೇಳಿದ್ದಾರೆ, 
ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿರುವ ಬಿಜೆಪಿ ಮೈಸೂರು ಮಹಾನಗರ ಪಾಲಿಕೆ ಅಧಿಕಾರವನ್ನು ಹೇಗೆ ಪಡೆಯಬೇಕೆಂಬ ಬಗ್ಗೆ ತಂತ್ರ ರೂಪಿಸುತ್ತಿದೆ., ರಾಜ್ಯದಲ್ಲಿ ಮೈತ್ರಿ ಪಕ್ಷ ಅಧಿಕಾರದಲ್ಲಿದ್ದು, ಮಹಾನಗರ ಪಾಲಿಕೆ ಮತ್ತು ಜಿಲ್ಲಾ ಪಂಚಾಯತ್ ಗಳಲ್ಲೂ ಇದೇ ಮೈತ್ರಿ ಮುಂದುವರಿಸಲಿದ್ದಾರಾ ಕಾದು ನೋಡಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com