ಈಶಾನ್ಯ ಮುಂಗಾರು ವಿಳಂಬ: ಕರ್ನಾಟಕದಲ್ಲಿ ಮುಂದುವರಿದ ಒಣಹವೆ

ಈಶಾನ್ಯ ಮಳೆ ಮಾರುತ ಪ್ರವೇಶ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಒಣಹವೆ ಮುಂದುವರಿದಿದೆ, ಬೆಂಗಳೂರು ಸೇರಿದಂತೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಈಶಾನ್ಯ ಮಳೆ ಮಾರುತ ಪ್ರವೇಶ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಒಣಹವೆ ಮುಂದುವರಿದಿದೆ, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮುಂಬರುವ ವಾರಗಳಲ್ಲಿ ಒಣ ಹವೆ ಮುಂದುವರಿಯಲಿದೆ.
ಆದರೆ ದಕ್ಷಿಣ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಗಳಿದೆ ಎಂದು ಹೇಳಲಾಗಿದೆ. ಬೆಂಗಳೂರು ನಗರದಲ್ಲಿ ಸಾಧಾರಣ ತುಂತುರು ಮಳೆಯಾಗುವ ಸಾಧ್ಯತೆಯಿದೆ. ಮಳೆಯ ಕೊರತೆಯಿಂದಾಗಿ ಸಣ್ಣ ಸಣ್ಣ ನೀರಾವರಿ ಕೆರೆಗಳಲ್ಲಿ ನೀರು ಶೀಘ್ರವೇ ಆವಿಯಾಗಲಿದೆ, ಕರ್ನಾಟಕದ ಕೆಲ ಪ್ರದೇಶಗಳಿಗೆ ಮಳೆಯೇ ನೀರಿನ ಮೂಲವಾಗಿದೆ.
ದಕ್ಷಿಣ ಒಳನಾಡಿದ ಕೆಲವು ಕಡೆ ಆಗಾಗ್ಗೆ ತುಂತುರು ಮಳೆಯಾಗಲಿದ್ದು, ಉಳಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಒಣ ಹವೆ ಮುಂದುವರಿಯಲಿದೆ. ಇದು ರಾಬಿ ಸೀಸನ್ ನ ಕೃಷಿ ಮೇಲೆ ಪರಿಣಾಮ ಬೀರಲಿದೆ ಎಂದು ಭಾರತೀಯ  ಹವಾಮಾನ ಇಲಾಖೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com