ಬೆಂಗಳೂರು: ಖಾಸಗಿ ಸಂಸ್ಥೆ ನೌಕರನಿಂದ 3 ಲಕ್ಷ ದರೋಡೆ, ಡಿವೈಎಸ್ಪಿ ಸೇರಿ ನಾಲ್ವರ ಬಂಧನ

ಚಿಕ್ಕಬಳ್ಳಾಪುರ ಸಶಸ್ತ್ರ ಮೀಸಲು ಪಡೆ ಗೆ ಸೇರಿದ್ದ ಓರ್ವ ಡಿವೈಎಸ್ಪಿಮತ್ತು ಆತನ ಇಬ್ಬರು ಕೆಳ ಹಂತದ ಸಹಾಯಕರನ್ನು ದರೋಡೆ ಪ್ರಕರಣವೊಂದರಲ್ಲಿ ಬಂಧಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಚಿಕ್ಕಬಳ್ಳಾಪುರ ಸಶಸ್ತ್ರ ಮೀಸಲು ಪಡೆಗೆ ಸೇರಿದ್ದ ಓರ್ವ ಡಿವೈಎಸ್ಪಿಮತ್ತು ಆತನ ಇಬ್ಬರು ಕೆಳ ಹಂತದ ಸಹಾಯಕರನ್ನು ದರೋಡೆ ಪ್ರಕರಣವೊಂದರಲ್ಲಿ ಬಂಧಿಸಲಾಗಿದೆ.
ಪೋಲೀಸ್ ಅಧಿಕಾರಿಯು ತನ್ನ ಸಹಾಯಕರೊಡನೆ ಸೇರಿ ಗುರುವಾರ ಖಾಸಗಿ ಸಂಸ್ಥೆಯ ನೌಕರನಿಗೆ ಸೇರಿದ್ದ 3 ಲಕ್ಷ ರೂ.ದರೋಡೆ ನಡೆಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಭಾನುವಾರ ಗಂಗಮ್ಮ  ಗುಡಿ ಪೋಲೀಸರು ಡಿವೈಎಸ್ಪಿ ಹಾಗೂ ಇತರೆ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. 
ಆರೋಪಿಗಳನ್ನು ಡಿವೈಎಸ್ಪಿ ನಾಗೇಂದ್ರ ಕುಮಾರ್(40), ಸಹಾಯಕ ಹೆಡ್ ಕಾನ್ಸ್ಟೇಬಲ್ ವೆಂಕಟರಮಣ, ಸಹಾಯಕ ಪೊಲೀಸ್ ಕಾನ್ಸ್ಟೇಬಲ್ ಸಂತೋಷ್ ಮತ್ತು ಅವರ ಚಾಲಕ  ಶಂಶುದ್ದೀನ್ ಎಂದು ಗುರುತಿಸಲಾಗಿದೆ. ಪ್ರಕರಣ ದ ಇತರೆ ಆರೋಪಿಗಳಾದ ಪ್ರಸಾದ್, ಮಂಜು ಹಾಗೂ ಶಂಕರ್ ಇನ್ನೂ ತಲೆಮರೆಸಿಕೊಂಡಿದ್ದು ಪೋಲೀಸರು ಶೋಧಕಾರ್ಯ ನಡೆಸಿದ್ದಾರೆ.
ಪ್ರಮುಖ ಆರೋಪಿ ಶಂಶುದ್ದೀನ್ ಆಗಿದ್ದು ಶಿವಕುಮಾರ್ ಬಳಿ 10 ಲಕ್ಷ ರು ಹಣವಿರುವ ಮಾಹಿತಿ ಪಡೆದಿದ್ದಾನೆ. ಆತ ಶಿವಕುಮಾರ್ ಗೆ ತಾನು ಹಣವನ್ನು ಡಬಲ್ (ದ್ವಿಗುಣ) ಮಾಡಿಕೊಡುವುದಾಗಿ ಹೇಳಿದ್ದು 2,000 ರು. ಗಳ ಹತ್ತು ಲಕ್ಷದ ಬದಲು 500 ರು ನೋಟುಗಳಲ್ಲಿ 20  ಲಕ್ಷ ನೀಡುವುದಾಗಿ ಹೇಳಿದ್ದ.
ಶಿವಕುಮಾರ್ ಗೆ ಹಣದ ಅವಶ್ಯಕತೆ ಇದ್ದು ಆತ ಅದಕ್ಕೆ ಒಪ್ಪಿದ. ಅವನನ್ನು ವಿದ್ಯಾರಣ್ಯಪುರ ಸಮೀಪದ ತಿಂಡ್ಲುವಿಗೆ ಬರಲು ಹೇಳಲಾಗಿತ್ತು. ಅಲ್ಲಿ ಡಿವೈಎಸ್ಪಿ ನಾಗೇಂದ್ರ ಕುಮಾರ್ ಹಾಗೂ ಸಹಚರರು ಖಾಸಗಿ ಕ್ಯಾಬ್ ನಲ್ಲಿ ಆಗಮಿಸಿ ಶಿವಕುಮಾರ್ ಅವರಲ್ಲಿದ್ದ ಹಣವನ್ನು ದೋಚಿದ್ದಾರೆ. ಶಿವಕುಮಾರ್ ನಿವಾಸದ ಮೇಲೆ ದಾಳಿ ನಡೆಸಿದ ನಾಗೇಂದ್ರ ಕುಮಾರ್ ತಾವು ಪೋಲೀಸರೆಂದು ಹೇಳಿದ್ದಾರೆ. ಬಳಿಕ ತಮ್ಮ ಕಾರ್ ನಲ್ಲಿ ಶಿವಕುಮಾರ್ ನನ್ನು ಕೂರಿಸಿಕೊಂಡು ಹೋದ ನಾಗೇಂದ್ರ ಕುಮಾರ್ ಅವನ ಬಳಿ ಇದ್ದ 10  ಲಕ್ಷ ರು. ಕಸಿದುಕೊಂಡಿದ್ದು ಅವನನ್ನು ಪುನಃ ಬಿಡುಗಡೆ ಮಾಡುವ ಮುನ್ನ 3 ಲಕ್ಷ ಬಾಕಿ ಇರಿಸಿಕೊಂಡು  7 ಲಕ್ಷ ರು. ಹಿಂತಿರುಗಿಸಿದ್ದಾರೆ.ಅಲ್ಲದೆ ಅವರು ಪೋಲೀಸರಿಗೆ ಈ ಬಗ್ಗೆ ಹೇಳಿದ್ದಾದರೆ ತಾವು ಅವನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ.
ತಕ್ಷಣ ಗಂಗಮ್ಮ ಗುಡಿ ಪೋಲೀಸ್ ಠಾಣೆಗೆ ಧಾವಿಸಿದ ಶಿವಕುಮಾರ್ ಘಟನೆ ಸಂಬಂಧ ಪ್ರಕರಣ ದಾಖಲಿಸಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಪೋಲೀಸರು ಅಪರಾಧಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಿದ್ದರು. ಆರೋಪಿಗಳು ಬಳಸಿದ ವಾಹನವನ್ನು ಪತ್ತೆಹಚ್ಚಿದ ತಂಡ ಡಿವೈ ಎಸ್ಪಿ ಮತ್ತು ಅವನ ಅವರ ಅಧೀನದಲ್ಲಿದ್ದವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.. ವಿಚಾರಣೆ ನಂತರ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು ಶಿವಕುಮಾರ್ ಗೆ ಸೇರಬೇಕಾಗಿದ್ದ ಹಣವನ್ನು ಹಿಂತಿರುಗಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com