ಟಿಪ್ಪು ಜಯಂತಿ ವಿರೋಧಿಸುವ ಕಾರ್ಯಕ್ರಮದಲ್ಲಿ ಸಂತೋಷ್ ತಮ್ಮಯ್ಯ ಅವರು ಟಿಪ್ಪುವಿನ ಕ್ರೌರ್ಯಕ್ಕೆ ಪ್ರೇರಣೆಯಾದ ಅಂಶಗಳ ಬಗ್ಗೆ ಮಾತನಾಡಿದ್ದರು. ಟಿಪ್ಪುವಿನ ಮಾನಸಿಕತೆ ಸಂಬಂಧ ಆತ ಯಾವುದರಿಂದ ಸ್ಪೂರ್ತಿ ಪಡೆದಿದ್ದ ಎಂದು ವಿಮರ್ಶಿಸಿದ್ದರು. ಈ ವೇಳೆ ಮಧ್ಯಪ್ರಾಚ್ಯದಲ್ಲಿನ ಮನಸ್ಥಿತಿಯ ಬಗ್ಗೆಯೂ ಉಲ್ಲೇಖಿಸಿದ್ದ ಸಂತೋಷ್ ತಮ್ಮಯ್ಯ ಅವರ ವಿರುದ್ಧ ಕಾನೂನು ದುರುಪಯೋಗಪಡಿಸಿಕೊಂಡು ಬಂಧಿಸಲಾಗಿದೆ, ಇದರ ಹಿಂದೆ ರಾಜಕೀಯ ಷಡ್ಯಂತ್ರವಿದೆ. ವೇದಿಕೆಯಲ್ಲಿ ಇದ್ದ ಕಾರಣಕ್ಕೆ ನಮ್ಮ ಮೇಲೂ ಕೇಸು ದಾಖಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ರಾಬರ್ಟ್ ರೊಜಾರಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.