ಹೊಸನಗರ: ಪ್ರತಿಭಟನಾನಿರತ ರೈತ ನಿಧನ, ಆರ್ ಎಫ್ ಓ ವಿರುದ್ಧ ಪ್ರಕರಣ ದಾಖಲು

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನಲ್ಲಿ ಪ್ರತಿಭಟನಾನಿರತ ರೈತ ನಿಧನ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ವಲಯ ಅರಣ್ಯಾಧಿಕಾರಿ ಜಿ ಹನುಮಂತಯ್ಯ ವಿರುದ್ಧ ರಿಪ್ಪನ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರ್ ಎಫ್ ಓ ಕಚೇರಿ ಬಳಿಪೊಲೀಸರು
ಆರ್ ಎಫ್ ಓ ಕಚೇರಿ ಬಳಿಪೊಲೀಸರು

ಮಾಸಾರೂರು:  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನಲ್ಲಿ ಪ್ರತಿಭಟನಾನಿರತ  ರೈತ ನಿಧನ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ವಲಯ ಅರಣ್ಯಾಧಿಕಾರಿ ಜಿ ಹನುಮಂತಯ್ಯ ವಿರುದ್ಧ ರಿಪ್ಪನ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾಸಾರೂರು ಬಳಿ 300 ಎಕರೆ ಅರಣ್ಯ ಪ್ರದೇಶದಲ್ಲಿ 170 ಎಕರೆಯಷ್ಟು ಪ್ರದೇಶವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಮಾಸಾರೂರಿನಲ್ಲಿ  ಅರಣ್ಯ ಒತ್ತುವರಿಯನ್ನು ತೆರವುಗೊಳಿಸಲಾಗುತ್ತಿದೆ. ಒತ್ತುವರಿದಾರರ ಹೆಸರಿನಲ್ಲಿ ಮೃತ ರೈತನ ಹೆಸರಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

300 ಅರಣ್ಯ ಇಲಾಖೆ ಸಿಬ್ಬಂದಿಗಳು , 250 ಪೊಲೀಸರೊಂದಿಗೆ ತಮ್ಮ ಊರಿನ ಕಡೆ ಬರುತ್ತಿರುವ ಸುದ್ದಿ ತಿಳಿದು ಮೃತ ಲಕ್ಷ್ಮಣಪ್ಪ ಶುಕ್ರವಾರ ಬೆಳಗ್ಗೆ 10 ಗಂಟೆ ವೇಳೆ ಧರಣಿ ಆರಂಭಿಸಿದ್ದಾರೆ. ನಂತರ ಅವರು ಕುಸಿದು ಬಿದಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ  ಕುಸಿದು ಬಿದು ಮೃತಪಟ್ಟಿದ್ದಾರೆ. ಇದಕ್ಕೆ ಕಾರಣವಾದ ವಲಯ ಅರಣ್ಯ ಅಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೃತ ಲಕ್ಷ್ಮಣಪ್ಪನ ಪುತ್ರ ನಾಗೇಶ್ ನೀಡಿರುವ ದೂರಿನಲ್ಲಿ ತಿಳಿಸಿದ್ದಾನೆ.

 ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಮಾಸಾರೂರು ಹಾಗೂ ಆರ್ ಎಫ್  ಒ ಸಿಬ್ಬಂದಿ ಕಚೇರಿಗೆ ಭೇಟಿ ನೀಡಿದಾಗ, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಹಾಕಿರುವುದು ಕಂಡುಬಂದಿತ್ತು.
ಒತ್ತುವರಿ ತೆರವಿಗಾಗಿ ತಹಸೀಲ್ದಾರ್, ಪೊಲೀಸರು  ಮಾಸಾರೂರು ಗ್ರಾಮಕ್ಕೆ ತೆರಳಿದ್ದರು. ಆದರೆ. ಈ ತಂಡ ಭೇಟಿಗೆ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರು. ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸರ್ವೇ ನಡೆಸುವುದಾಗಿ ತಹಸೀಲ್ದಾರ್ ಭರವಸೆ ನೀಡಿದ ನಂತರ ತಂಡ ಹಿಂದಕ್ಕೆ ಮರಳಿತು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಥೋನಿ ಎಸ್ ಮರಿಯಪ್ಪ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com