ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರಿನ ಲಕ್ಷ್ಮಿಂಪುರಂ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿ ಐದು ತಿಂಗಳು ಕಳೆದಿದ್ದರೂ ಇನ್ನು ತನಿಖೆ ಆರಂಭವಾಗಿಲ್ಲ. ಸಿದ್ದರಾಮಯ್ಯ ಮತ್ತು ಇತರ ಮೂವರ ವಿರುದ್ಧ ಜೂನ್ 23 ರಂದು ಕೇಸ್ ದಾಖಲಾಗಿತ್ತು.
ತನಿಖೆ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ಜಿ,. ಗಂಗರಾಜು ಪೊಲೀಸ್ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ. ಪ್ರಕರಣವನ್ನು ತನಿಖಾ ಏಜೆನ್ಸಿ ಅಥವಾ ಡಿಸಿಪಿ ಮಟ್ಟದ ಅಧಿಕಾರಿಗಳು ನಡೆಸುವಂತೆ ಮನವಿ ಮಾಡಿದ್ದಾರೆ.
ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನು ಪ್ರಮುಖ ಆರೋಪಿಯನ್ನಾಗಿಸಲಾಗಿದೆ, ಸಿದ್ದರಾಮಯ್ಯ ಹಿನಕಲ್ ಗ್ರಾಮದ ಸಣ್ಣೇಗೌಡ ಅವರ ಪತ್ನಿ ಸಣ್ಣಮ್ಮ ಅವರಿಂದ 1997ರ ಡಿಸೆಂಬರ್ 15 ರಂದು 10 ಕುಂಟೆ ಜಮೀನು ಖರೀದಿಸಿದ್ದರು.
ಆದರೆ ಸಿದ್ದರಾಮಯ್ಯ ಅವರು ಮುಡಾ ನಿಯಮಗಳನ್ನು ಉಲ್ಲಂಘಿಸಿ ಮನೆ ನಿರ್ಮಿಸಿದ್ದರು, ನಂತರ ಸೆಪ್ಚಂಬರ್ 29, 2003 ರಲ್ಲಿ ಅದೇ ಮನೆಯನ್ನು 1 ಕೋಟಿ ರು ಗೆ ಮಾರಾಟ ಮಾಡಿದ್ದರು.