ಮಿದುಳು ಕ್ಯಾನ್ಸರ್ ನಿಂದ ಬಳಲುತ್ತಿದ್ದ 46 ವರ್ಷ ಸಂಗಪ್ಪ ಖೇತಗೌಡ ಎಂಬುವರಿಗೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೀರಜ್ ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ನವೆಂಬರ್ 18ರಂದು ಸಂಗಪ್ಪ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದರಿಂದ ಮೃತದೇಹವನ್ನು ಆ್ಯಂಬುಲೆನ್ಸ್ ಮೂಲಕ ಸ್ವಗ್ರಾಮಕ್ಕೆ ತರಲಾಗುತ್ತಿತ್ತು. ನಿನ್ನೆ ತಡರಾತ್ರಿ ಮುಗಳಖೋಡ ಪಟ್ಟಣಕ್ಕೆ ಕರೆತರುವಾಗ ಸಂಗಪ್ಪ ಉಸಿರಾಡತೊಡಗಿದ್ದಾನೆ.