ಅಧಿಕಾರಿಗಳಿಗೂ ತಪ್ಪದ ಸಂಕಷ್ಟ: ಬೆಂಗಳೂರು ಗ್ರಾಮಾಂತರ ಡಿಸಿ ಕಚೇರಿಯಲ್ಲಿ ಟೆಲಿಫೋನ್, ಇಂಟರ್ನೆಟ್ ಸೌಲಭ್ಯವೇ ಇಲ್ಲ!

ಸರ್ಕಾರದಿಂದ ಸೌಲಭ್ಯಗಳನ್ನು ಪಡೆಯಲು ಕೇವಲ ನಾಗರೀಕರಷ್ಟೇ ಅಲ್ಲ, ಅಧಿಕಾರಿಗಳೂ ಕೂಡ ಪರದಾಡುವಂತಹ ಪರಿಸ್ಥಿತಿಗಳು ಎದುರಾಗಿದೆ. ಸಾರ್ವಜನಿಕ ಆಡಳಿತದಲ್ಲಿ ಇಂಟರ್ನೆಟ್ ವ್ಯವಸ್ಥೆ ಎಂಬುದು ಅತ್ಯಂತ ಮುಖ್ಯವಾಗಿರುತ್ತದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ದೇವನಹಳ್ಳಿ: ಸರ್ಕಾರದಿಂದ ಸೌಲಭ್ಯಗಳನ್ನು ಪಡೆಯಲು ಕೇವಲ ನಾಗರೀಕರಷ್ಟೇ ಅಲ್ಲ, ಅಧಿಕಾರಿಗಳೂ ಕೂಡ ಪರದಾಡುವಂತಹ ಪರಿಸ್ಥಿತಿಗಳು ಎದುರಾಗಿದೆ. ಸಾರ್ವಜನಿಕ ಆಡಳಿತದಲ್ಲಿ ಇಂಟರ್ನೆಟ್ ವ್ಯವಸ್ಥೆ ಎಂಬುದು ಅತ್ಯಂತ ಮುಖ್ಯವಾಗಿರುತ್ತದೆ. ಆದರೆ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ಟೆಲಿಫೋನ್ ಸಂಪರ್ಕವಾಗಲೀ ಅಥವಾ ಇಂಟರ್ನೆಟ್ ವ್ಯವಸ್ಥೆಗಳಾಗಲೀ ಇಲ್ಲದೇ ಇರುವುದು ಇದೀಗ ಬೆಳಕಿಗೆ ಬಂದಿದೆ. 
ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಮದಲ್ಲಿ ಕಾಂಪ್ಲೆಕ್ಸ್ ವೊಂದನ್ನು ನಿರ್ಮಾಣ ಮಾಡಲಾಗಿದ್ದು, ಬೆಂಗಳೂರಿನಲ್ಲಿದ್ದ ಕೆಲ ಕಚೇರಿಗಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದೆ. ಆದರೆ, ಸ್ಥಳಾಂತರಗೊಂಡಿರುವ ಈ ಕಚೇರಿಗಳಿಗೆ ಅಧಿಕಾರಿಗಳು ಇನ್ನೂ ಟೆಲಿಫೋನ್ ಸಂಪರ್ಕವಾಗಲೀ, ಇಂಟರ್ನೆಟ್ ಸೌಲಭ್ಯಗಳನ್ನಾಗಲೀ ನೀಡಿಲ್ಲ. ಹೀಗಾಗಿ ಕರ್ತವ್ಯ ನಿರ್ವಹಿಸಲು ಅಧಿಕಾರಿಗಳು ಸಂಕಷ್ಟಕರ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ. 
ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರು ತಮ್ಮ ಅವ್ಯವಸ್ಥೆಗಳ ಕುರಿತಂತೆ ಮಾತನಾಡಿದ್ದು, ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. 
ಕಚೇರಿಯಲ್ಲಿ ಟೆಲಿಫೋನ್ ಸಂಪರ್ಕವಾಗಲೀ, ಇಂಟರ್ನೆಟ್ ಸೌಲಭ್ಯವಾಗಲೀ ಇಲ್ಲ. ನಮ್ಮ ಖಾಸಗಿ ಮೊಬೈಲ್ ಗಳಲ್ಲಿರುವ ಇಂಟರ್ನೆಟ್ ಗಳನ್ನು ಬಳಸಿಕೊಂಡು ಸರ್ಕಾರ ಯೋಜನೆಗಳ ಕುರಿತ ಮಾಹಿತಿಗಳನ್ನು ಅಪ್ ಲೋಡ್ ಮಾಡಬೇಕಾಗಿದೆ. ಟೆಲಿಫೋನ್ ಸಂಪರ್ಕಗಳಿಲ್ಲದಿರುವುದರಿಂದ ಇತರೆ ಕಚೇರಿಗಳೊಂದಿಗೆ ಮಾತುಕತೆ ನಡೆಸುವುದೂ ಕೂಡ ಕಷ್ಟಕರವಾಗಿದೆ ಎಂದು ಹೇಳಿದ್ದಾರೆ. 
ಬೆಂಗಳೂರು ಗ್ರಾಮೀಣ ಉಪ ಆಯುಕ್ತ ಕರಿ ಗೌಡ ಅವರು ಮಾತನಾಡಿ, ಶೀಘ್ರದಲ್ಲಿಯೇ ಕಚೇರಿಗಳಿಗೆ ಇಂಟರ್ನೆಟ್ ಹಾಗೂ ಟೆಲಿಫೋನ್ ಸಂಪರ್ಕಗಳನ್ನು ಅಳವಡಿಸಲಾಗುತ್ತದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. 
ಕಟ್ಟಡಕ್ಕೆ ಭೇಟಿ ನೀಡಿದಾಗ ಕಟ್ಟಡದಲ್ಲಿ ಇನ್ನೂ ಬಹುತೇಕ ಕಾಮಗಾರಿಗಳು ಪೂರ್ಣಗೊಳ್ಳುವುದು ಬಾಕಿಯಿರುವುದು ಕಂಡು ಬಂದಿದೆ. ಕಟ್ಟಡದಲ್ಲಿ ಮಿನಿ ಆಡಿಟೋರಿಯಮ್ ನಿರ್ಮಾಣ ಮಾಡಲಾಗುತ್ತಿದ್ದು, ಇದರ ನಿರ್ಮಾಣ ಕಾರ್ಯ ಇನ್ನೂ ಪ್ರಗತಿಯಲ್ಲಿದೆ. ಇದಲ್ಲದೆ ಇನ್ನೂ ಕೆಲ ಕಚೇರಿಗಳಲ್ಲಿ ನಿರ್ಮಾಣ ಕಾರ್ಯಗಳು ಮುಂದುವರೆದಿವೆ. ಕಟ್ಟಡದಲ್ಲಿ ಕೇವಲ ಟೆಲಿಫೋನ್ ಹಾಗೂ ಇಂಟರ್ನೆಟ್ ಸೌಲಭ್ಯದ ವ್ಯವಸ್ಥೆಗಳಲ್ಲದೇ. ಬಹುತೇಕ ಸಮಸ್ಯೆಗಳಿರುವುದೂ ಕೂಡ ಕಂಡು ಬಂದಿದೆ. ಕಟ್ಟಡದಲ್ಲಿ ನೀರಿನ ವ್ಯವಸ್ಥೆ ಕೂಡ ಇಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 
ಕಚೇರಿಗಳು ಜಿಲ್ಲೆಗೆ ಸ್ಥಳಾಂತರಗೊಂಡು ಹಲವು ತಿಂಗಳುಗಳು ಕಳೆದಿವೆ ಆದರೂ, ಸೌಲಭ್ಯಗಳನ್ನು ನೀಡಿಲ್ಲ. ಇತರೆ ಇಲಾಖೆಗಳನ್ನು ಸಂಪರ್ಕಿಸಲು ಟೆಲಿಫೋನ್ ವ್ಯವಸ್ಥೆಗಳೂ ಕೂಡ ಇಲ್ಲ ಎಂದು ತಿಳಿಸಿದ್ದಾರೆ. 
ಮೊಬೈಲ್ ಗಳಲ್ಲಿ ಇಂಟರ್ನೆಟ್ ಸೌಲಭ್ಯಗಳು ವೇಗವಾಗಿಲ್ಲದಿರುವುದರಿಂದ ಯೋಜೆಗಳ ಮಾಹಿತಿಗಳನ್ನು ಅಪ್ ಲೋಡ್ ಮಾಡುವುದು ಸವಾಲಿನ ಕೆಲಸವಾಗಿರುತ್ತದೆ ಎಂದಿದ್ದಾರೆ. 
ಈ ಬಗ್ಗೆ ಕರೀ ಗೌಡ ಅವರನ್ನು ಸಂಪರ್ಕಿಸಿದಾಗ, ಸೌಲಭ್ಯ ಹಾಗೂ ವ್ಯವಸ್ಥೆ ಕಲ್ಪಿಸುವ ಕಾರ್ಯಗಳು ಪ್ರಗತಿಯಲ್ಲಿವೆಯ ಟೆಲಿಫೋನ್ ಸಂಪರ್ಕ ಕಲ್ಪಿಸಲು ಲೈನ್ ಇನ್ಸ್ಟಾಲ್ ಮಾಡಲಾಗುತ್ತಿದೆ. ಈ ಕಾರ್ಯ 2-3 ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com