ಬಿಬಿಎಂಪಿ ಉಪಮೇರ್, ಸ್ಥಾಯಿ ಸಮಿತಿಗೆ ಡಿಸೆಂಬರ್ 5 ರಂದು ಚುನಾವಣೆ

ಬಿಬಿಎಂಪಿ ಉಪ ಮೇಯರ್‌ ಮತ್ತು 12 ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಪಾಲಿಕೆಯ ಕೆಂಪೇಗೌಡ ಪೌರ ...
ಬಿಬಿಎಂಪಿ ಕಚೇರಿ
ಬಿಬಿಎಂಪಿ ಕಚೇರಿ
ಬೆಂಗಳೂರು: ಬಿಬಿಎಂಪಿ ಉಪ ಮೇಯರ್‌ ಮತ್ತು 12 ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದೆ. ಪಾಲಿಕೆಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಡಿ. 5ರಂದು ಬೆಳಗ್ಗೆ 11.30ಕ್ಕೆ ಚುನಾವಣೆ ನಡೆಯಲಿದೆ.
ಬಿಬಿಎಂಪಿಯು 12 ಸ್ಥಾಯಿ ಸಮಿತಿಗಳ 147 ಸದಸ್ಯ ಸ್ಥಾನಗಳಿಗೂ ಡಿ. 5ರಂದೇ ಚುನಾವಣೆ ನಡೆಯಲಿದೆ. ಹಾಲಿ ಸದಸ್ಯರ ಅವಧಿಯು ನ. 9ಕ್ಕೆ ಮುಗಿದಿದ್ದು, ಈವರೆಗೆ ಚುನಾವಣೆ ನಡೆಸಿರಲಿಲ್ಲ. ಸದ್ಯ ಚುನಾವಣಾ ದಿನಾಂಕ ನಿಗದಿಯಾಗಿದ್ದು, ಪ್ರಮುಖ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಗಳಿಗೆ ಹಣಾಹಣಿ ಏರ್ಪಟ್ಟಿದೆ. ಒಟ್ಟು 12 ಸ್ಥಾಯಿ ಸಮಿತಿಗಳ ಪೈಕಿ ತಲಾ 4 ಅಧ್ಯಕ್ಷ ಸ್ಥಾನಗಳನ್ನು ಕಾಂಗ್ರೆಸ್‌, ಜೆಡಿಎಸ್‌ ಮತ್ತು ಪಕ್ಷೇತರರು ಹಂಚಿಕೊಳ್ಳುವ ಸಾಧ್ಯತೆಗಳಿವೆ. 
ಜೆಡಿಎಸ್‌ನ ರಮೀಳಾ ಉಮಾಶಂಕರ್‌ ನಿಧನದ ಹಿನ್ನೆಲೆಯಲ್ಲಿ ತೆರವಾಗಿರುವ ಉಪ ಮೇಯರ್‌ ಸ್ಥಾನದ ಮೇಲೆ ನಾಗಪುರ ವಾರ್ಡ್‌ನ ಬಿ.ಭದ್ರೇಗೌಡ, ವಿಶ್ವನಾಥ ನಾಗೇನಹಳ್ಳಿ ವಾರ್ಡ್‌ನ ಎನ್‌.ರಾಜಶೇಖರ್‌ ಮತ್ತು ಕಾವಲ್‌ ಬೈರಸಂದ್ರ ವಾರ್ಡ್‌ನ ನೇತ್ರಾ ನಾರಾಯಣ್‌ ಕಣ್ಣಿಟ್ಟಿದ್ದು, ತೀವ್ರ ಲಾಬಿ ನಡೆಸುತ್ತಿದ್ದಾರೆ. 
ಕಳೆದ ಸೆಪ್ಟಂಬರ್ 28 ರಂದು ಮೇಯರ್ ಹಾಗೂ ಉಪಮೇಯರ್ ಸ್ಥಾನಗಳಿಗೆ ಚುನಾವಣೆ ನಡೆದಿತ್ತು, ಆದರೆ ಸ್ಥಾಯಿ ಸಮಿತಿ ಸ್ಥಾನಗಳ ಚುನಾವಣೆ ಮುಂದೂಡಲಾಗಿತ್ತು, ಗುರುವಾರ ಚುನಾವಣಾ ಆಯೋಗ ನೋಟೀಸ್ ಜಾರಿ ಮಾಡಿದೆ.
ಮೇಯರ್‌ ಚುನಾವಣೆ ಬಳಿಕ ಹಲವು ಬೆಳವಣಿಗೆಗಳು ನಡೆದಿದ್ದು, ಮತದಾರರ ಪಟ್ಟಿ ಸಹ ಪರಿಷ್ಕರಣೆಯಾಗಿದೆ. ಮೂವರು ಮತದಾರರ ಹೆಸರು ರದ್ದಾಗಿದ್ದು, ಹೊಸದಾಗಿ ನಾಲ್ಕು ಮಂದಿಯ ಹೆಸರು ಸೇರ್ಪಡೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com