
ಮಂಗಳೂರು: ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆ ಕಂಬಳ ಮತ್ತೆ ಬಂದಿದೆ. ತನ್ನ ಸಾಂಪ್ರದಾಯಿಕ ವೈಭವಗಳಿಂದ ಬಂಟ್ವಾಳ ತಾಲ್ಲೂಕಿನ ಕಕ್ಯಪದವಿನಲ್ಲಿ ಶನಿವಾರದಿಂದ ಕಂಬಳ ಆರಂಭವಾಗುತ್ತಿದೆ.
ಪ್ರತಿವರ್ಷ ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ನಡೆಯುವ ಕಂಬಳಗಳಲ್ಲಿ ಸುಮಾರು 150 ಜೋಡಿ ಕೋಣಗಳು ಭಾಗವಹಿಸುತ್ತವೆ. ಈ ವರ್ಷ ಮಾರ್ಚ್ ವರೆಗೆ ಈ ಜಿಲ್ಲೆಗಳಲ್ಲಿ ಸುಮಾರು 18 ಕಂಬಳಗಳು ನಡೆಯಲಿವೆ.
ಕರಾವಳಿ ಜಿಲ್ಲೆಯಲ್ಲಿ ಹಿಂದಿನ ಕಾಲದಲ್ಲಿ ತಮ್ಮ ಹೊಲವನ್ನು ಉತ್ತಿ, ಬಿತ್ತಲು ಕೋಣ, ಎತ್ತುಗಳನ್ನು ಬಳಸುತ್ತಿದ್ದರು, ವಿನೋದ, ಮನರಂಜನೆಗಾಗಿ ಆರಂಭವಾದ ಕ್ರೀಡೆಯಿದು. ಆದರೆ ವಿನೋದದ ಹೆಸರಿನಲ್ಲಿ ಪ್ರಾಣಿಗಳಿಗೆ ಹಿಂಸೆ ನೀಡಲಾಗುತ್ತಿದೆ, ಕಂಬಳ ಕ್ರೀಡೆಯನ್ನು ನಿಷೇಧಿಸಬೇಕೆಂದು ಪ್ರಾಣಿದಯಾ ಸಂಘಟನೆಗಳು ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ವಿವಾದವೆದ್ದಿತ್ತು.
ಇವೆಲ್ಲವನ್ನೂ ಮೀರಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಪಿಲಿಕುಳ ಕಂಬಳ ಕ್ರೀಡೆಯಲ್ಲಿ ಭಾಗಿಯಾಗಿದೆ ಎಂದು ವಿಜಯ ವಿಕ್ರಮ ಜೋಡುಕೆರೆ ಕಂಬಳದ ಶಶಿಕುಮಾರ್ ರೈ ಹೇಳುತ್ತಾರೆ.
ಕಂಬಳಕ್ಕೆ ಸಿದ್ದತೆ ಭರದಿಂದ ಸಾಗುತ್ತಿದ್ದು ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆಯಿದೆ. ಭೂಮಿಯನ್ನು ಗುರುತಿಸಲಾಗಿದ್ದು ವೇದಿಕೆ ಸಿದ್ದವಾಗಿದೆ. ಡ್ರೋನ್ ಕ್ಯಾಮರಾಗಳನ್ನು ಬಳಸಿ ನೇರ ವೀಕ್ಷಣೆಗೆ ಸಹಾಯ ಮಾಡುವುದು ಈ ಬಾರಿಯ ಕಂಬಳದ ವಿಶೇಷವಾಗಿದೆ.
ಕಂಬಳದಲ್ಲಿ ಭಾಗವಹಿಸುವ ಸ್ಪರ್ಧಿಗಳು ಕಳೆದೊಂದು ತಿಂಗಳಿನಿಂದ ತರಬೇತಿಯಲ್ಲಿ ತೊಡಗಿದ್ದಾರೆ. ಕೋಣಗಳಲ್ಲಿ ಹೆಚ್ಚು ಶಕ್ತಿ ವರ್ಧಿಸಲು ನೆಲದ ಮೇಲೆ ಅಭ್ಯಾಸ ನೀಡಲಾಗುತ್ತದೆ ಎಂದು ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಬಿ ಆರ್ ಶೆಟ್ಟಿ ತಿಳಿಸಿದ್ದಾರೆ.
Advertisement