
ಶಿವಮೊಗ್ಗ: ಬಾಕಿ ಹಣ ನೀಡುವಂತೆ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸೂಚನೆ ನೀಡಿ ಕಬ್ಬು ಬೆಳೆಗಾರರನ್ನು ಸಂತೈಸಲು ರಾಜ್ಯ ಸರ್ಕಾರ ಒಂದೆಡೆ ಪ್ರಯತ್ನಿಸುತ್ತಿದ್ದರೆ, ಇನ್ನೊಂದೆಡೆ ಕಳೆದ 8 ವರ್ಷಗಳಿಂದ ಶಿವಮೊಗ್ಗ ಮತ್ತು ಭದ್ರಾವತಿ ತಾಲ್ಲೂಕುಗಳ ಕಬ್ಬು ಬೆಳೆಗಾರರ ಬಾಕಿ 2.92 ಕೋಟಿ ರೂಪಾಯಿಗಳನ್ನು ಸರ್ಕಾರ ಇನ್ನೂ ಪಾವತಿ ಮಾಡಿಲ್ಲ.
ಭದ್ರಾವತಿಯಲ್ಲಿರುವ ಸರ್ಕಾರದ ಒಡೆತನದ ಮೈಸೂರು ಸಕ್ಕರೆ ಕಾರ್ಖಾನೆ ಶಿವಮೊಗ್ಗ ಜಿಲ್ಲೆಯ ಕಬ್ಬು ಬೆಳೆಗಾರರಿಂದ ಹಲವು ದಶಕಗಳಿಂದ ಕಬ್ಬನ್ನು ಖರೀದಿಸುತ್ತಿದೆ. ಆದರೆ ಕಳೆದ ಮೂರು ವರ್ಷಗಳ ಹಿಂದೆ ಕಾರ್ಖಾನೆ ಮುಚ್ಚಿಹೋಗಿದೆ.
2010-11ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಕಬ್ಬು ಬೆಳೆಗಾರರಿಗೆ 100 ರೂಪಾಯಿ ಹೆಚ್ಚುವರಿ ಪ್ರೋತ್ಸಾಹ ಧನ ಮಾತ್ರವಲ್ಲದೆ ಕನಿಷ್ಠ 1800 ರೂಪಾಯಿ ಬೆಂಬಲ ಬೆಲೆಯನ್ನು ಕೂಡ ಘೋಷಿಸಿತ್ತು. ಅಂದಿನಿಂದ ರೈತರು ಈ ಪ್ರೋತ್ಸಾಹ ಧನಕ್ಕಾಗಿ ಕಾಯುತ್ತಿದ್ದಾರೆ. 2011ರಿಂದ ಸರ್ಕಾರ ಕಬ್ಬು ಬೆಳೆಗಾರರಿಗೆ ಬಾಕಿ ಹಣ ಬಿಡುಗಡೆ ಮಾಡಿಲ್ಲ.
Advertisement