ನಾಳೆ ಅಂಬರೀಶ್ ಅಂತ್ಯ ಸಂಸ್ಕಾರ: ಬೆಂಗಳೂರು ನಗರದಾದ್ಯಂತ ಬಿಗಿ ಬಂದೋಬಸ್ತ್

ಶನಿವಾರ ನಿಧನರಾದ ನಟ, ರಾಜಕಾರಣಿ ಅಂಬರೀಶ್ ಅವರ ಅಂತ್ಯ ಸಂಸ್ಕಾರ ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ಇದಕ್ಕೆ ಮುನ್ನ ಕಂಠೀರವ ಸ್ಟೇಡಿಯಂ.....
ಅಂಬರೀಶ್
ಅಂಬರೀಶ್
ಬೆಂಗಳೂರು: ಶನಿವಾರ ನಿಧನರಾದ ನಟ, ರಾಜಕಾರಣಿ ಅಂಬರೀಶ್ ಅವರ ಅಂತ್ಯ ಸಂಸ್ಕಾರ ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ಇದಕ್ಕೆ ಮುನ್ನ ಕಂಠೀರವ ಸ್ಟೇಡಿಯಂ ನಿಂದ ಪಾರ್ಥಿವ ಶರೀರದ ಮೆರವಣಿಗೆ ಸಾಗಲಿದೆ.ಈ ಸಂಬಂಧ ಬೆಂಗಳೂರು ನಗರಾದ್ಯಂತ ವಿಶೇಷ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಪೋಲೀಸ್ ಬಿಗಿ ಭದ್ರತೆ ಅಂಗವಾಗಿ 11,000 ಪೋಲೀಸ್ ಅಧಿಕಾರಿಗಳು, 4,000 ಸಂಚಾರಿ ಸಿಬ್ಬಂದಿ, 30 ಕೀಸ್ ಆರ್ ಪಿ ತುಕಡಿ, 34 ಸಿಎಆರ್ ತುಕಡಿ, 3 ಆರ್ ಎ ಎಫ್ ತುಕಡಿ, 5 ಆರ್ ಐ ವಿ ಮತ್ತು 15 ಡಿಸಿಪಿ ಗಳನ್ನು ನಿಯೋಜಿಸಲಾಗಿದೆ. ಅಲ್ಲದೆ ನಾಲ್ಕು ಹೆಚ್ಚುವರಿ ಪೋಲೀಸ್ ಆಯುಕ್ತರನ್ನು ಸಹ ನೇಮಿಸಲಾಗಿದೆ.
ಪಾರ್ಥಿವ ಶರೀರ ಸಾಗುವ ಮಾರ್ಗದಲ್ಲಿನ ರಸ್ತೆಗಳನ್ನು ವಿಭಾಗಗಳಾಗಿ ವಿಂಗಡಿಸಿದ್ದು ಪ್ರತಿ ವಿಭಾಗದ ಉಸ್ತುವಾರಿಯನ್ನು ಡಿಸಿಪಿ ನೇತೃತ್ವದ ತಂಡಕ್ಕೆ ವಹಿಸಲಾಗಿದೆ. ಅಂತಿಮ ಯಾತ್ರೆ ಸಾಗುವ ಮಾರ್ಗದಲ್ಲಿ ವಾಹನ ದಟ್ಟಣೆಯಾಗುವ ಸಂಭವವಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಪೋಲೀಸರು ಮನವಿ ಮಾಡಿದ್ದಾರೆ.
ಪಾರ್ಥಿವ ಶರೀರ ತೆರಳುವ ಮಾರ್ಗ ಹೀಗಿದೆ-
ಹಡ್ಸನ್ ರಸ್ತೆ, ಹಲಸೂರು ಗೇಟ್ ಪೋಲೀಸ್ ಠಾಣೆ, ಕೆಜಿ ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಸಿಐಡಿ ಜಂಕ್ಷನ್, ಬಸವೇಶ್ವರ ವೃತ್ತ, ವಿಂಡ್ಸರ್ ಮ್ಯಾನರ್, ಕಾವೇರಿ ಜಂಕ್ಷನ್, ಸ್ಯಾಂಕಿ ರಸ್ತೆ, ಮಾರಮ್ಮ ವೃತ್ತ, ಯಶವಂತಪುರ ಮೇಲ್ಸೇತುವೆ,. ಆರ್ ಎಂಸಿ ಯಾರ್ಡ್ ಪೋಲೀಸ್ ಠಾಣೆ, ಗೊರಗುಂಟೇಪಾಳ್ಯ ಜಂಕ್ಷನ್, ಎಸ್ ಟಿವಿಉ, ಕಂಠೀರವ ಸ್ಟುಡಿಯೋ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com