ಬೆಂಗಳೂರು ರೈಲು ನಿಲ್ದಾಣಗಳಲ್ಲಿ ಬೃಹತ್ ಡಿಜಿಟಲ್ ಪರದೆಗಳ ಮೂಲಕ ಮಾಹಿತಿ ಪ್ರದರ್ಶನ
ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತಲಿನ 35 ರೈಲು ನಿಲ್ದಾಣಗಳಲ್ಲಿ ಡಿಜಿಟಲ್ ಪರದೆಗಳನ್ನು ಅಳವಡಿಸುವ ಮೂಲಕ ರೈಲುಗಳ ಬಗ್ಗೆ ಮಾಹಿತಿ ನೀಡಲು ರೈಲ್ವೆ ಇಲಾಖೆ ಮುಂದಾಗಿದೆ.
ಬೆಂಗಳೂರು: ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತಲಿನ 35 ರೈಲು ನಿಲ್ದಾಣಗಳಲ್ಲಿ ಡಿಜಿಟಲ್ ಪರದೆಗಳನ್ನು ಅಳವಡಿಸುವ ಮೂಲಕ ರೈಲುಗಳ ಬಗ್ಗೆ ಮಾಹಿತಿ ನೀಡಲು ರೈಲ್ವೆ ಇಲಾಖೆ ಮುಂದಾಗಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದ್ದ ಈ ಮಾದರಿಯನ್ನು ಈಗ ರೈಲು ನಿಲ್ದಾಣಗಳಲ್ಲೂ ಅಳವಡಿಸಲಾಗುತ್ತಿದ್ದು, ರೈಲು ಬರುತ್ತಿದ್ದೆಯಾ, ಇಲ್ಲವಾ ಎಂಬ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಪ್ರಯಾಣಿಕರಿಗೆ ಹೆಚ್ಚಿನ ಉಪಯುಕ್ತವಾಗಿದೆ.
ನಗರದಲ್ಲಿ ಹೋರ್ಡಿಂಗ್ಸ್, ಫ್ಲೆಕ್ಸ್ ಅಳವಡಿಕೆಗೆ ನಿರ್ಬಂಧಿಸಲಾಗಿದ್ದು, ಈ ಪರದೆಗಳಲ್ಲಿ ಜಾಹಿರಾತು ಪ್ರಕಟಿಸಲು ಹೊಸ ಅವಕಾಶ ನೀಡಲಾಗಿದೆ.
ದಿ ಸಿಟಿ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಬೆಂಗಳೂರು ವಿಭಾಗೀಯ ಸಿನಿಯರ್ ಡೀವಿಜನಲ್ ಕಮರ್ಷಿಯಲ್ ಮ್ಯಾನೇಜರ್, ಎನ್ ಆರ್ ಶ್ರೀಧರ್ ಮೂರ್ತಿ, ಭಾರತ ರೈಲ್ವೆಯ ರೈಲು ಪ್ರದರ್ಶನ ನೆಟ್ ವರ್ಕ್ ನೀತಿಯಡಿ ದೇಶದ ಎಲ್ಲಾ ನಿಲ್ದಾಣಗಳಲ್ಲಿ ಇಂತಹ ಪರದೆಗಳನ್ನು ಅಳವಡಿಸಲಾಗಿದೆ. ಬೆಂಗಳೂರಿನಲ್ಲಿ ದೊಡ್ಡ ಪರದೆಗಳನ್ನು ಅಳವಡಿಸಲಾಗುತ್ತಿದೆ. ಈ ಸಂಬಂಧ ಮುಂದಿನ ವಾರ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.
ರೈಲು ಫ್ಲಾಟ್ ಫಾರಂಗಳು, ಕಾಯುವಿಕೆ ಕೊಠಡಿ. ಮತ್ತಿತರ ಪ್ರಮುಖ ಕಡೆಗಳಲ್ಲಿ ಈ ಪರದೆಗಳನ್ನು ಹಾಕಲಾಗುತ್ತಿದ್ದು, ರೈಲಿನ ಆಗಮನ, ನಿರ್ಗಮನ, ಫ್ಲಾಟ್ ಫಾರಂನಲ್ಲಿ ನಿಂತಿರುವ ರೈಲುಗಳು ಹಾಗೂ ಕೋಚಿನ ಸ್ಥಿತಿಗತಿ ಬಗ್ಗೆ ಬಹುಹಂತದ ಭಾಷೆಗಳಲ್ಲಿ ಮಾಹಿತಿ ನೀಡಲಾಗುತ್ತದೆ.ವಿಕೋಪದಂತಹ ತುರ್ತು ಸಂದರ್ಭಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಸುಮಾರು 5.5 ಕೋಟಿ ರೂ. ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಕೈಗೊಳ್ಳಲಾಗುತ್ತಿದ್ದು, ಪರದೆಯ ಗಾತ್ರ, ಮತ್ತಿತರ ಅಗತ್ಯ ಅಂಶವನ್ನು ಗಣನೆಗೆ ತೆಗೆದುಕೊಂಡು ಬಿಡ್ಡರ್ ಆಯ್ಕೆ ಮಾಡಲಾಗುವುದು ಎಂದು ಶ್ರೀಧರ್ ಮೂರ್ತಿ ತಿಳಿಸಿದರು.