ಹಾಸನ: ಮಾಜಿ ಶಾಸಕ ಎಚ್‌ಎಸ್ ಪ್ರಕಾಶ್ ಹೃದಯಾಘಾತದಿಂದ ನಿಧನ

ಹಾಸನದ ಜೆಡಿಎಸ್ ಪಕ್ಷದ ಮಾಜಿ ಶಾಸಕ ಎಚ್. ಎಸ್. ಪ್ರಕಾಶ್ (67) ಇಂದು ಬಿಜಿಎಸ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮೃತರು ಪತ್ನಿ , ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಎಚ್. ಎಸ್. ಪ್ರಕಾಶ್
ಎಚ್. ಎಸ್. ಪ್ರಕಾಶ್

ಬೆಂಗಳೂರು: ಹಾಸನದ ಜೆಡಿಎಸ್ ಪಕ್ಷದ   ಮಾಜಿ ಶಾಸಕ ಎಚ್. ಎಸ್. ಪ್ರಕಾಶ್ (67) ಇಂದು ಬಿಜಿಎಸ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮೃತರು ಪತ್ನಿ , ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.

1994ರಲ್ಲಿ ಮೊದಲ ಬಾರಿಗೆ ಜನತಾದಳದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ಎಚ್. ಎಸ್. ಪ್ರಕಾಶ್ 1999ರಲ್ಲಿ ಸೋಲು ಅನುಭವಿಸಿದ್ದರು. ನಂತರ 2004, 2008, ಮತ್ತು 2013ರಲ್ಲಿ ಸತತ ಮೂರು ಬಾರಿಗೆ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು.

ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಪ್ರೀತಂಗೌಡ ವಿರುದ್ಧ ಎಚ್ ಎಸ್ ಪ್ರಕಾಶ್ ಸೋಲು ಅನುಭವಿಸಿದ್ದರು. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಬೆಂಬಲಿಗರಾಗಿದ್ದ ಪ್ರಕಾಶ್, ಹಾಸನದ ಸಂಜೀವಿನಿ ಕೋ - ಆಪರೇಟಿವ್ ಹಾಸ್ಟಿಟಲ್ ಅಧ್ಯಕ್ಷರಾಗಿದ್ದರು. ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com