ಬೆಂಗಳೂರು; ಕಾನೂನು ಸಹಾಯಕಿಯ ಆಡಿಯೊ ಕ್ಲಿಪ್ ವೈರಲ್, ಪೊಲೀಸರಿಂದ ತನಿಖೆ

ಪೇಯಿಂಗ್ ಗೆಸ್ಟ್ ನಲ್ಲಿ ಕಳೆದ ಶನಿವಾರ ವಕೀಲೆ ವೃತ್ತಿ ಅಭ್ಯಾಸ ಮಾಡುತ್ತಿದ್ದ ಯುವತಿ ಆತ್ಮಹತ್ಯೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಪೇಯಿಂಗ್ ಗೆಸ್ಟ್ ನಲ್ಲಿ ಕಳೆದ ಶನಿವಾರ ವಕೀಲೆ ವೃತ್ತಿ ಅಭ್ಯಾಸ ಮಾಡುತ್ತಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ವಕೀಲರ ವಿರುದ್ಧ ಕೇಳಿಬರುತ್ತಿರುವ ಲೈಂಗಿಕ ಕಿರುಕುಳ ದೂರನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರುತ್ತಿರುವ ಆಡಿಯೊ ಇದೀಗ ವೈರಲ್ ಆಗಿದೆ.

ಕಾನೂನು ಅಭ್ಯಾಸ ಮಾಡುತ್ತಿದ್ದ ಯುವತಿ ಮತ್ತು ಕೀರ್ತಿ ಎನ್ನುವ ವ್ಯಕ್ತಿಯ ನಡುವೆ ನಡೆದ ಸಂಭಾಷಣೆ ಆಡಿಯೊ ವೈರಲ್ ಆಗಿದ್ದು ಈ ಸಂಬಂಧ ಪೊಲೀಸರು ಇಬ್ಬರು ಅಡ್ವೊಕೇಟ್ ಗಳಾದ ಚಂದ್ರ ನಾಯಕ್ ಟಿ ಮತ್ತು ಚೇತನ್ ದೇಸಾಯಿ ಎಂಬುವವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನಡೆಸಿದ ಕೇಸು ದಾಖಲಿಸಿದ್ದಾರೆ.

ಯುವತಿಯ ಸಾವಿಗೆ ನಿಖರ ಕಾರಣ ತಿಳಿಯಲು ಪೊಲೀಸರು ಶವಪರೀಕ್ಷೆ ವರದಿಗೆ ಎದುರು ನೋಡುತ್ತಿದ್ದಾರೆ.

ನಡೆದ ಘಟನೆಯೇನು: ಕಳೆದ ನವೆಂಬರ್ 20ರಂದು ಪುಷ್ಪಾ ಅರ್ಚನ ಲಾಲ್(26 ವ) ತನ್ನ ಮಾರ್ಗದರ್ಶಕ ಚಂದ್ರಾ ನಾಯಕ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಳು. ಚಂದ್ರ ನಾಯಕ್ ಜಯಂತ್ ಪಟ್ಟಣಶೆಟ್ಟಿ ಮತ್ತು ಅಸೋಸಿಯೇಟ್ ನಡೆಸುತ್ತಿದ್ದಾರೆ. ಚಂದ್ರ ನಾಯಕ್ ಗೆ ಆಪ್ತವಾಗಿರುವ ಕೀರ್ತಿ ಎನ್ನುವ ವ್ಯಕ್ತಿ ಪುಷ್ಪಾ ಜೊತೆ ಮಾತನಾಡಿ ತನ್ನ ಮಾಲೀಕರ ವಿರುದ್ಧ ದೂರು ನೀಡದಂತೆ ಬೆದರಿಕೆ ಹಾಕುವ ವಿಡಿಯೊ ಹೊರಬಿದ್ದಿದೆ. ಪುಷ್ಪಾ ಕೇಸು ದಾಖಲಿಸಿದ ಕೂಡಲೇ ತನಗೆ ದೂರನ್ನು ಹಿಂಪಡೆಯುವಂತೆ ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿಕೊಂಡಿದ್ದಳು.

ಆಡಿಯೊ ಕ್ಲಿಪ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಲಭ್ಯವಾಗಿದ್ದು, ಅದರಲ್ಲಿ ಚಂದ್ರ ನಾಯಕ್ ಕೃತ್ಯದಿಂದ ತಾವು ತೀರ ನೊಂದಿರುವುದಾಗಿ ಹೇಳಿಕೊಂಡಿದ್ದಾಳೆ. ನಂತರ ಅದರಲ್ಲಿ ಕೀರ್ತಿ ಮತ್ತೊಬ್ಬ ಗೌಡ ಎಂಬವನನ್ನು ಪ್ರಸ್ತಾಪಿಸಿದ್ದು ಇಬ್ಬರೂ ಬೆಂಗಳೂರಿನಲ್ಲಿ ಭೇಟಿ ಮಾಡಿ ಎರಡೂ ಕಡೆಯವರು ಕ್ಷಮೆ ಕೇಳಿ ರಾಜಿ ಮಾಡಿಕೊಳ್ಳೋಣ ಎಂದು ಹೇಳಿಕೊಂಡಿರುವುದು ಆಡಿಯೊದಲ್ಲಿದೆ.

ಈ ಬಗ್ಗೆ ತನಿಖಾಧಿಕಾರಿಗಳು ಆಡಿಯೊ ಕ್ಲಿಪ್ ವೈರಲ್ ಆಗಿದ್ದು ಈ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಆದರೂ ಅದು ಪುಷ್ಪನ ಧ್ವನಿಯೇ ಆಕೆಯ ಮೊಬೈಲ್ ನಿಂದ ಕರೆ ಮಾಡಿದ್ದೇ ಎಂದು ಪೊಲೀಸರು ತನಿಖೆ ನಡೆಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com