• Tag results for ಪೊಲೀಸರು

ಹಾಸ್ಟೆಲ್​ ಶುಲ್ಕ ಶೇ.400 ಏರಿಕೆ ಖಂಡಿಸಿ ಜೆಎನ್ ಯು ವಿದ್ಯಾರ್ಥಿಗಳ ಪ್ರತಿಭಟನೆ, ಪೊಲೀಸರಿಂದ ಜಲ ಫಿರಂಗಿ ಪ್ರಯೋಗ

ಹಾಸ್ಟೆಲ್​ ಶುಲ್ಕವನ್ನು ಶೇ.400 ರಷ್ಟು ಹೆಚ್ಚಿಸುತ್ತಿರುವುದನ್ನು ವಿರೋಧಿಸಿ  ಜವಾಹರ್​ ಲಾಲ್​ ನೆಹರು ವಿಶ್ವವಿದ್ಯಾಲಯ(ಜೆಎನ್ ಯು)ದ ವಿದ್ಯಾರ್ಥಿಗಳು ಸೋಮವಾರ ಬೃಹತ್​ ಪ್ರತಿಭಟನೆ ನಡೆಸಿದರು.

published on : 11th November 2019

ಅಯೋಧ್ಯೆ ತೀರ್ಪು ಹಿನ್ನೆಲೆ, ರಾಜ್ಯದೆಲ್ಲೆಡೆ ಪೊಲೀಸರ ಹೈ ಆಲರ್ಟ್ 

ರಾಮಜನ್ಮ ಭೂಮಿ- ಬಾಬ್ರಿ ಮಸೀದಿ ವಿವಾದಕ್ಕೆ ಸಂಬಂಧಿಸಿದ ಸುಪ್ರೀಂಕೋರ್ಟ್ ತೀರ್ಪು ನವೆಂಬರ್ 17ರಂದು ಹೊರಬೀಳುವ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

published on : 4th November 2019

ಮೂವರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರ ಬಗ್ಗೆ ಮಾಹಿತಿ ನೀಡಿದವರಿಗೆ 30 ಲಕ್ಷ ಬಹುಮಾನ! 

ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ 3 ಉಗ್ರರ ಬಗ್ಗೆ ಮಾಹಿತಿ ನೀಡುವವರಿಗೆ 30  ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ  ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಪೊಲೀಸರು ಘೋಷಿಸಿದ್ದಾರೆ. 

published on : 28th October 2019

ಸಿಸಿಬಿ ಕಾರ್ಯಾಚರಣೆ: ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದ 30 ಪ್ರಜೆಗಳ ಬಂಧನ

ನಗರ ಭಯೋತ್ಪಾದಕರ ಅಡಗುತಾಣವಾಗುತ್ತಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ನಗರದ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿ,  ಅಕ್ರಮವಾಗಿ ನಗರದಲ್ಲಿ ನೆಲೆಸಿದ್ದ 30 ಮಂದಿ ಬಾಂಗ್ಲಾ ದೇಶದ ಪ್ರಜೆಗಳನ್ನು ಬಂಧಿಸಿದ್ದಾರೆ.

published on : 26th October 2019

ಬೆಂಗಳೂರು: ರೌಡಿ ಶೀಟರ್ ಮೇಲೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು 

ಬೆಳ್ಳಂಬೆಳಗ್ಗೆ ರೌಡಿ ಶೀಟರ್ ಮೇಲೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ರೌಡಿ ಶೀಟರ್ ಹರೀಶ್ ಅಲಿಯಾಸ್ ರಾಬರಿ ಹರೀಶ್ ಬಂಧಿತ ಆರೋಪಿ. ಇತ್ತೀಚಿಗೆ ಈತ ದಾಸರಹಳ್ಳಿ ಬಳಿಯ ಅಂಗಡಿಯೊಂದನ್ನು ದರೋಡೆ ಮಾಡಿದ್ದ.

published on : 26th October 2019

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ರಸ್ತೆ ಕುಸಿತ

ಮೈಸೂರಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಚಾಮುಂಡಿ ಬೆಟ್ಟದಲ್ಲಿ ಭೂ ಕುಸಿತ ಸಂಭವಿಸಿದೆ. 

published on : 22nd October 2019

ಹಿಂದು ಹೋರಾಟಗಾರ ಕಮಲೇಶ್ ತಿವಾರಿ ಹತ್ಯೆ ಪ್ರಕರಣ: 2 ಮೌಲ್ವಿ ಸೇರಿ ಐವರು ವಶಕ್ಕೆ

ಹಿಂದೂ ಮಹಾಸಭಾದ ಮಾಜಿ ನಾಯಕ ಕಮಲೇಶ್ ತಿವಾರಿ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮೌಲ್ವಿಗಳು ಸೇರಿದಂತೆ 5 ಮಂದಿಯನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದುಕೊಂಡಿದ್ದಾರೆ. 

published on : 19th October 2019

ಔರಾದ್ಕರ್ ವರದಿ ಜಾರಿ ಬದಲಿಗೆ ಪೊಲೀಸರ ಶ್ರಮವೆಚ್ಚ ಹೆಚ್ಚಳಕ್ಕೆ ಸರ್ಕಾರ ಚಿಂತನೆ

ಪೊಲೀಸರ ವೇತನ ಪರಿಷ್ಕರಣೆ ಕುರಿತಾದ ಔರಾದ್ಕರ್ ವರದಿ ಸದ್ಯಕ್ಕೆ ಜಾರಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಔರಾದ್ಕರ್ ವರದಿ ಜಾರಿಗೆ ಹಿಂದೇಟು ಹಾಕುತ್ತಿರುವ ರಾಜ್ಯ ಸರ್ಕಾರ ಇದೀಗ ಪೊಲೀಸರ ಮೂಗಿಗೆ ತುಪ್ಪ ಸವರುವ ಕೆಲಸಕ್ಕೆ ಮುಂದಾಗಿದೆ.

published on : 18th October 2019

ಪ್ರಧಾನಿ ಮೋದಿ ಸೋದರನ ಮಗಳ ಪರ್ಸ್ ಕದ್ದಿದ್ದ ಖದೀಮರ ಸೆರೆ

ರಾಷ್ಟ್ರ ರಾಜಧಾನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋದರನ ಮಗಳ ಪರ್ಸ್ ದೋಚಿದ್ದ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.

published on : 13th October 2019

ಆರ್ ಎಫ್ ಒ ಗೆ ಬೆದರಿಕೆ: ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ, ಸಂಸದ ರಾಘವೇಂದ್ರ ’ಆಪ್ತ’ನ ವಿರುದ್ಧ ಪ್ರಕರಣ ದಾಖಲು

ರೇಂಜ್ ಅರಣ್ಯಾಧಿಕಾರಿಗೆ ಬೆದರಿಕೆ ಹಾಕಿದ್ದ ಜಿಲ್ಲಾ ಬಿಜೆಪಿ ಯುವಮೋರ್ಚಾ ಕಾರ್ಯದರ್ಶಿ ಹಾಗೂ ಲೋಕಸಭಾ ಸದಸ್ಯ ಬಿವೈ ರಾಘವೇಂದ್ರ ಬೆಂಬಲಿಗನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

published on : 12th October 2019

ಬೆಂಗಳೂರು: ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಶ್ನಿಸಿದ ಪಿಎಸ್ ಐ ಮೇಲೆ ಹಲ್ಲೆ

ಕರ್ತವ್ಯನಿರತ ಪೋಲೀಸರ ಮೇಲೆ ಹಲ್ಲೆ ನಡೆಸುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ವ್ಯಾಪಕವಾಗುತ್ತಿದೆ.. ಬೊಮ್ಮನಹಳ್ಳಿ ಜಂಕ್ಷನ್‌ನಲ್ಲಿ ಶುಕ್ರವಾರ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುತ್ತಿದ್ದ ಒಬ್ಬನನ್ನು ಹಿಡಿದ ನಂತರಟ್ರಾಫಿಕ್ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ನನ್ನು ಐದು ಜನರ ಗುಂಪು ಥಳಿಸಿ ಹಲ್ಲೆ ನಡೆಸಿದೆ.

published on : 30th September 2019

ತನ್ನನ್ನು ಬಿಟ್ಟು ಮತ್ತೊಬ್ಬಳ ಜೊತೆ ಚಕ್ಕಂದವಾಡುತ್ತಿದ್ದ ಪತಿಗೆ ಒನಕೆಯಿಂದ ಹೊಡೆದು ಬರ್ಬರ ಹತ್ಯೆ!

ಮದುವೆಯಾಗಿ ಮಗುವಾದ ನಂತರ ಮತ್ತೊಬ್ಬಳ ಜೊತೆ ಚಕ್ಕಂದವಾಡುತ್ತಿದ್ದ ಪತಿಯ ವರ್ತನೆಯಿಂದ ರೋಸಿ ಹೋದ ಪತ್ನಿಯೊರ್ವಳು ಒನಕೆಯಿಂದ ಆತನ ತಲೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ.

published on : 30th September 2019

ಬೆಂಗಳೂರು: ನಕಲಿ ಟೀ ಪುಡಿ ಜಾಲ ಪತ್ತೆ, ಇಬ್ಬರ ಬಂಧನ

ಪ್ರತಿಷ್ಠಿತ ಬ್ರ್ಯಾಂಡ್ ಗಳ ಹೆಸರಲ್ಲಿ ನಕಲಿ ಟೀ ಪುಡಿ ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿರುವ ಪೋಲೀಸರು ರಾಜಸ್ಥಾನ ಮೂಲದ ಇಬ್ಬರನ್ನು ಬಂಧಿಸಿದ್ದಾರೆ.

published on : 25th September 2019

ಕ್ರಿಮಿನಲ್ ಕೇಸ್ ತನಿಖೆ ವೇಳೆ ಪೊಲೀಸರು ಸ್ಥಿರಾಸ್ಥಿಗಳನ್ನು ಜಪ್ತಿ ಮಾಡುವಂತಿಲ್ಲ: ಸುಪ್ರೀಂ

ನ್ಯಾಯಮೂರ್ತಿ ರಂಜನ್ ಗಗೋಯ್ ಮತ್ತು ದೀಪಕ್ ಮಿಶ್ರಾ  ಹಾಗೂ ಸಂಜೀವ್ ಖನ್ನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಸೆಕ್ಷನ್ 102ರ ಸಿಆರ್ ಪಿಸಿ ಪ್ರಕಾರ, ಕ್ರಿಮಿನಲ್ ಪ್ರಕರಣಗಳ ತನಿಖೆ ವೇಳೆ ಪೊಲೀಸರಿಗೆ ಸ್ಥಿರಾಸ್ಥಿಗಳನ್ನು ಜಪ್ತಿ ಮಾಡುವ  ಅಧಿಕಾರ ಇರುವುದಿಲ್ಲ ಎಂದು ಹೇಳಿದೆ.

published on : 24th September 2019

ದುಬಾರಿ ಟ್ರಾಫಿಕ್ ದಂಡ ತಪ್ಪಿಸಿಕೊಳ್ಳಲು ಕಾಂಡೋಮ್ ಹೊತ್ತೊಯ್ಯುತ್ತಿದ್ದಾರೆ ಕ್ಯಾಬ್ ಡ್ರೈವರ್ ಗಳು!

ದುಬಾರಿ ಟ್ರಾಫಿಕ್ ದಂಡದಿಂದ ತಪ್ಪಿಸಿಕೊಳ್ಳಲು ಕಾರು ಚಾಲಕರು ಕಾರಿನ ಪ್ರಥಮ ಚಿಕಿತ್ಸಾ ಬಾಕ್ಸ್ ನಲ್ಲಿ ಕಾಂಡೋಮ್ ಗಳ ಇಟ್ಟುಕೊಂಡು ಸಾಗುತ್ತಿದ್ದಾರೆ.

published on : 21st September 2019
1 2 3 4 5 6 >