ಗೋವಾ ಬೀಚ್‌ಗಳಲ್ಲಿ ವಿದೇಶಿಯರೊಂದಿಗೆ ಬಲವಂತವಾಗಿ ಸೆಲ್ಫಿ ತೆಗೆದುಕೊಂಡರೆ ಸ್ಥಳದಲ್ಲೇ ಬಂಧನ!

ಬೀಚ್‌ಗಳಲ್ಲಿ ವಿದೇಶಿಯರೊಂದಿಗೆ ಅವರ ಒಪ್ಪಿಗೆಯಿಲ್ಲದೆ ಬಲವಂತವಾಗಿ ಸೆಲ್ಫಿ ತೆಗೆದುಕೊಳ್ಳುವುದು ಅಥವಾ ಫೋಟೋಗೆ ಒತ್ತಾಯಿಸುವುದು ಕಂಡುಬಂದರೆ ಅವರನ್ನು ಸ್ಥಳದಲ್ಲೇ ಬಂಧಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
Forced selfies with foreigners on beaches to invite detention: Goa Police
ಸಾಂದರ್ಭಿಕ ಚಿತ್ರ(ಗೋವಾ ಸಿನೆಮಾ ಸ್ಟಿಲ್)
Updated on

ಪಣಜಿ: ಗೋವಾ ರಾಜ್ಯದ ಕಡಲತೀರಗಳಲ್ಲಿ ವಿದೇಶಿ ಪ್ರಜೆಗಳಿಗೆ ಕಿರುಕುಳ ನೀಡುವ ದೇಶಿ ಪ್ರವಾಸಿಗರ ವಿರುದ್ಧ ಗೋವಾ ಪೊಲೀಸರು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಬೀಚ್‌ಗಳಲ್ಲಿ ವಿದೇಶಿಯರೊಂದಿಗೆ ಅವರ ಒಪ್ಪಿಗೆಯಿಲ್ಲದೆ ಬಲವಂತವಾಗಿ ಸೆಲ್ಫಿ ತೆಗೆದುಕೊಳ್ಳುವುದು ಅಥವಾ ಫೋಟೋಗೆ ಒತ್ತಾಯಿಸುವುದು ಕಂಡುಬಂದರೆ ಅವರನ್ನು ಸ್ಥಳದಲ್ಲೇ ಬಂಧಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ದೇಶೀಯ ಪ್ರವಾಸಿಗರು ವಿದೇಶಿ ಮಹಿಳೆಯರ ಚಿತ್ರಗಳನ್ನು ಕ್ಲಿಕ್ಕಿಸುವುದು ಮತ್ತು ಕಡಲತೀರಗಳಲ್ಲಿ ಸೆಲ್ಫಿ ತೆಗೆದುಕೊಳ್ಳಲು ಒತ್ತಾಯಿಸುವುದು ಸೇರಿದಂತೆ ಹಲವಾರು ಪ್ರಕರಣಗಳು ಬೆಳಕಿಗೆ ಬಂದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Forced selfies with foreigners on beaches to invite detention: Goa Police
ಗೋವಾ ನೈಟ್‌ಕ್ಲಬ್‌ಗೆ ಬೆಂಕಿ: ಲೂತ್ರಾ ಸಹೋದರರ 'ಅಕ್ರಮ' ರೋಮಿಯೋ ಲೇನ್‌ ಕ್ಲಬ್ ನೆಲಸಮ!

ಉತ್ತರ ಗೋವಾದ ಕ್ಯಾಲಂಗುಟ್ ಪೊಲೀಸರು ಇತ್ತೀಚೆಗೆ ರಷ್ಯಾದ ಮಹಿಳೆಯೊಬ್ಬರಿಗೆ ಬೀಚ್‌ನಲ್ಲಿ ಕಿರುಕುಳ ನೀಡಿದ ಆರೋಪದ ಮೇಲೆ ಒಡಿಶಾ ಮೂಲದ ಇಬ್ಬರು ಪ್ರವಾಸಿಗರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರ ಪ್ರಕಾರ, ಈ ವಾರದ ಆರಂಭದಲ್ಲಿ ಕ್ಯಾಲಂಗುಟ್ ಬೀಚ್‌ನಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳಾದ ಆಕಾಶ್ ಮಿನಾಜ್(19) ಮತ್ತು ಧಯಾನ್ ಟಪ್ಪೊ(34) ವಿದೇಶಿ ಪ್ರವಾಸಿಗರೊಂದಿಗೆ ಬಲವಂತವಾಗಿ ಫೋಟೋ ಕ್ಲಿಕ್ಕಿಸಿ, ಅನುಚಿತವಾಗಿ ಸ್ಪರ್ಶಿಸಿದ್ದಾರೆ.

ದೇಶೀಯ ಪ್ರವಾಸಿಗರು ವಿದೇಶಿ ಮಹಿಳೆಯರ ಒಪ್ಪಿಗೆಯಿಲ್ಲದೆ ಅವರ ಛಾಯಾಚಿತ್ರಗಳನ್ನು ಕ್ಲಿಕ್ಕಿಸುವುದು ಅಥವಾ ಅವರೊಂದಿಗೆ ಬಲವಂತವಾಗಿ ಸೆಲ್ಫಿ ತೆಗೆದುಕೊಳ್ಳುವುದು ಕಂಡುಬಂದರೆ ಅವರನ್ನು ಸ್ಥಳದಲ್ಲೇ ಬಂಧಿಸಲಾಗುವುದು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com