ಮತ್ತೊಬ್ಬ ಬೇಟೆಗಾರ ಬಂಧನ; ಕಳೆದ 9 ತಿಂಗಳಲ್ಲಿ ಕರ್ನಾಟಕದಲ್ಲಿ 11 ಹುಲಿಗಳ ಸಾವು

ಮೈಸೂರು ಬಳಿಯ ಪೆರಿಯಾಪಟ್ನದಲ್ಲಿ ಹುಲಿಯ ಚರ್ಮವನ್ನು ವಶಪಡಿಸಿಕೊಳ್ಳುವ ಮೂಲಕ ಕಳೆದ 9 ತಿಂಗಳಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮೈಸೂರು ಬಳಿಯ ಪೆರಿಯಾಪಟ್ನದಲ್ಲಿ ಹುಲಿಯ ಚರ್ಮವನ್ನು ವಶಪಡಿಸಿಕೊಳ್ಳುವ ಮೂಲಕ ಕಳೆದ 9 ತಿಂಗಳಲ್ಲಿ ಕರ್ನಾಟಕದಲ್ಲಿ 11 ಹುಲಿಗಳು ಮೃತಪಟ್ಟಿವೆ ಎಂದು ತಿಳಿದುಬಂದಿದೆ.

ಇವುಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ ನಾಲ್ಕು ಹುಲಿಗಳನ್ನು ಬೇಟೆಯಾಡಲಾಗಿದೆ. ಕಳೆದ 9 ತಿಂಗಳಲ್ಲಿ ಹಲವು ಕಾರಣಗಳಿಂದ 11 ಹುಲಿಗಳು ಮೃತಪಟ್ಟಿವೆ. ಅದು ವಿಷನೀಡಿ, ಬೇಟೆಯಾಡಿ, ವಿದ್ಯುತ್ ಅಪಘಾತ ಇತ್ಯಾದಿಗಳಿಂದ ಆಗಿರಬಹುದು. ಬಂಡೀಪುರ-ನಾಗರಹೊಳೆ ಅಭಯಾರಣ್ಯದಲ್ಲಿ ಒಳನುಸುಳುವಾಗ ಪ್ರಾಣ ಕಳೆದುಕೊಂಡ ಹುಲಿಗಳು ಕೂಡ ಇವೆ.

ಕಳೆದ ಬುಧವಾರ ಮೈಸೂರಿನ ಪೆರಿಯಾಪಟ್ನದಲ್ಲಿ ಮೈಸೂರು ಅರಣ್ಯಾಧಿಕಾರಿ ಎಂ ಟಿ ಪೂವಯ್ಯ ನೇತೃತ್ವದ ತಂಡ ಗೋವಿಂದ  ಎಂಬ ಬೇಟೆಗಾರನನ್ನು ಬಂಧಿಸಿದ್ದಾರೆ. ಪೆರಿಯಾಪಟ್ನದ ಚೌತಿ ಗ್ರಾಮದಲ್ಲಿ ಹುಲಿಯನ್ನು ಬೇಟೆಯಾಡಲಾಗಿತ್ತು. ಈ ಹಿಂದೆ ಗೋವಿಂದನನ್ನು ಚಿರತೆ ಬೇಟೆಯಾಡಿದ ಪ್ರಕರಣದಲ್ಲಿ ಕೂಡ ಬಂಧಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com