ಎಸಿಬಿ ದಾಳಿ: ಇಬ್ಬರು ಭ್ರಷ್ಟ ಅಧಿಕಾರಿಗಳ ಮನೆಯಿಂದ 4.52 ಕೋಟಿ ರೂ. ನಗದು ವಶ!

ಟಿ. ಆರ್. ಸ್ವಾಮಿ ಹಾಗೂ ಎನ್. ಜಿ. ಗೌಡಯ್ಯ ಅವರ ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ನಿನ್ನೆಯಿಂದ ನಡೆಸಿದ ಶೋಧ ಕಾರ್ಯಾಚರಣೆಯಿಂದ 4.52 ಕೋಟಿ ರೂ. ಮೊತ್ತದ ನಗದನ್ನು ವಶಪಡಿಸಿಕೊಂಡಿದ್ದಾರೆ.
ಎಸಿಬಿ ಐಜಿಪಿ ಚಂದ್ರಶೇಖರ್
ಎಸಿಬಿ ಐಜಿಪಿ ಚಂದ್ರಶೇಖರ್
Updated on

ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿಗಳಾದ ಟಿ. ಆರ್. ಸ್ವಾಮಿ ಹಾಗೂ ಎನ್. ಜಿ. ಗೌಡಯ್ಯ ಅವರ ನಿವಾಸದ ಮೇಲೆ  ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು  ನಿನ್ನೆಯಿಂದ ನಡೆಸಿದ ಶೋಧ ಕಾರ್ಯಾಚರಣೆಯಿಂದ  4.52 ಕೋಟಿ ರೂ. ಮೊತ್ತದ ನಗದನ್ನು ವಶಪಡಿಸಿಕೊಂಡಿದ್ದಾರೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ(ಕೆಐಎಡಿಬಿ) ಮುಖ್ಯ ಅಭಿವೃದ್ಧಿ ಟಿ.ಆರ್. ಸ್ವಾಮಿ ಮತ್ತು ಬಿಡಿಎ ಎಂಜಿನಿಯರ್ ಗೌಡಯ್ಯ ಅವರ ಮನೆ ಹಾಗೂ ಕಚೇರಿಗಳ ಮೇಲಿನ ದಾಳಿ ವೇಳೆಯಲ್ಲಿ  4.52 ಕೋಟಿ ರೂ. ನಗದು  ಜೊತೆಗೆ  ಭಾರೀ ಪ್ರಮಾಣದ ಚಿನ್ನಾಭರಣ, ಮನೆ, ನಿವೇಶನ ಹಾಗೂ  ಕೃಷಿ ಜಮೀನನ್ನು  ವಶಕ್ಕೆ ಪಡೆಯಲಾಗಿದೆ.

ದಾಳಿ ಕುರಿತಂತೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಸಿಬಿ ಐಜಿಪಿ ಎಂ. ಚಂದ್ರಶೇಖರ್ , ಸ್ವಾಮಿ ಮತ್ತು ಎನ್. ಜಿ. ಗೌಡಯ್ಯ ಅವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರು , ತುಮಕೂರು ಸೇರಿದಂತೆ ರಾಜ್ಯದ 8 ಕಡೆಗಳಲ್ಲಿ ನಿನ್ನೆ ದಾಳಿ ನಡೆಸಲಾಗಿದ್ದು,4 4.52 ಕೋಟಿ ರೂ. ನಗದು  ಜೊತೆಗೆ  ಮೂರು ಕಾರು, 1.6 ಕೆಜಿ ಚಿನ್ನ, 7.5 ಕೆಜಿ ಬೆಳ್ಳಿ ಹಾಗೂ ಎಂಟು ಮನೆ, 11 ನಿವೇಶನ, ಮತ್ತು ಟಿ. ಆರ್. ಸ್ವಾಮಿಗೆ ಸೇರಿದ  14 ಎಕರೆ ಕೃಷಿ ಜಮೀನನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿಸಿದರು.

ಬೆಳಗಾವಿ ಜಿಲ್ಲೆ ಖಾನಪುರ  ವಲಯದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಗೌಡ ಬಿ. ಪಾಟೀಲ್  ಹಾಗೂ  ಬಾಗಲಕೋಟೆ ಜಿಲ್ಲೆ ಕುಡಿಯುವ ನೀರು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ  ಇಂಜಿನಿಯರ್ ಚಿದಾನಂದ ಬಿ. ಮಿಂಚಿನಾಳ್ ಅವರಿಗೆ ಸೇರಿದ ಮೂರು ಪ್ರದೇಶಗಳಲ್ಲಿ ದಾಳಿ ನಡೆಸಲಾಗಿದೆ ಎಂದು  ಚಂದ್ರಶೇಖರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com