ವಿದೇಶ ಪ್ರವಾಸ ಹೋಗುವ ಉಪನ್ಯಾಸಕರೇ, ಇಲ್ಲಿದೆ ನಿಮಗೊಂದು ಸಿಹಿ ಸುದ್ದಿ

ಇನ್ನು ಮುಂದೆ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕರು ವಿದೇಶಿ ಪ್ರವಾಸ ಹೋಗಲು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಇನ್ನು ಮುಂದೆ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕರು ವಿದೇಶಿ ಪ್ರವಾಸ ಹೋಗಲು ಸರ್ಕಾರದಿಂದ ಅನುಮತಿ ಸಿಗಲು ತಿಂಗಳುಗಟ್ಟಲೆ ಕಾಯಬೇಕಾಗಿಲ್ಲ.
 
ರಾಜ್ಯ ಸರ್ಕಾರ ವಿದೇಶಿ ಪ್ರವಾಸಕ್ಕೆ ಹೋಗುವ ಉಪನ್ಯಾಸಕರ ಅರ್ಹತೆಯನ್ನು ಸಡಿಲಗೊಳಿಸಿ ರಾಜ್ಯ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರ ಮಟ್ಟದ ಅಧಿಕಾರಿಗಳಿಗೆ ಅನುಮತಿ ನೀಡುವ ಕೆಲಸವನ್ನು ನೀಡಿದೆ.

ಸರ್ಕಾರದಿಂದ ಅನುಮತಿ ಪತ್ರ ಬರಲು ತಡವಾಗಿ ವಿದೇಶಿ ಪ್ರವಾಸವನ್ನು ರದ್ದುಪಡಿಸಿದ ಉದಾಹರಣೆಗಳು ಸಾಕಷ್ಟು ಇವೆ. ಈ ಹಿಂದೆ ಸರ್ಕಾರ ಮಟ್ಟದಲ್ಲಿ ಅನುಮತಿ ಸಿಗಲು ಪ್ರಕ್ರಿಯೆಗೆ ಬಹಳ ಸಮಯ ಹಿಡಿಯುತ್ತಿದ್ದರಿಂದ ತಿಂಗಳುಗಟ್ಟಲೆ ಕಾಯಬೇಕಾಗುತ್ತಿತ್ತು. ಇದರಿಂದ ಕೊನೆ ಕ್ಷಣದಲ್ಲಿ ಉಪನ್ಯಾಸಕರ ಪ್ರವಾಸ ರದ್ದಾದ ಪ್ರಕರಣಗಳು ಇವೆ.

ಇನ್ನು ಮುಂದೆ ಎಲ್ಲವೂ ಆಯುಕ್ತರ ಮಟ್ಟದಲ್ಲಿ ನಡೆಯಲಿರುವುದರಿಂದ ಒಂದು ವಾರದಿಂದ 10 ದಿನಗಳ ಕಾಲದಲ್ಲಿ ಈ ಪ್ರಕ್ರಿಯೆಗಳು ಮುಗಿದುಹೋಗಬಹುದು ಎಂದು ಖುಷಿಯಾಗುತ್ತಿದೆ ಎನ್ನುತ್ತಾರೆ ಕರ್ನಾಟಕ ಸರ್ಕಾರ ಕಾಲೇಜು ಶಿಕ್ಷಕರ ಒಕ್ಕೂಟದ ಅಧ್ಯಕ್ಷ ಟಿ ಎಂ ಮಂಜುನಾಥ್.

ಇತ್ತೀಚೆಗೆ ಬೆಂಗಳೂರಿನ ಆರ್ ಸಿ ಕಾಲೇಜಿನ ಹಿರಿಯ ಪ್ರೊಫೆಸರ್ ಒಬ್ಬರು ಸರ್ಕಾರದಿಂದ ತಡವಾಗಿ ಅನುಮತಿ ಸಿಕ್ಕಿದ್ದರಿಂದ ತಮ್ಮ ವಿದೇಶಿ ಪ್ರವಾಸವನ್ನು ಅನಿವಾರ್ಯವಾಗಿ ರದ್ದುಪಡಿಸಿ 80 ಸಾವಿರ ರೂಪಾಯಿ ಕಳೆದುಕೊಳ್ಳಬೇಕಾಯಿತು. ''ಅದು ನಮ್ಮ ಕುಟುಂಬದ ಪ್ರವಾಸವಾಗಿರಲಿಲ್ಲ, ಕೆನಡಾದಲ್ಲಿ ಸಮ್ಮೇಳನವೊಂದರಲ್ಲಿ ಭಾಗವಹಿಸುವ ಅಧಿಕೃತ ಪ್ರವಾಸವಾಗಿತ್ತು. ಅಗತ್ಯ ವಿವರಗಳನ್ನು ನಾನು ಸಲ್ಲಿಸಿದ್ದೆ, ಪ್ರವಾಸದ ದಾಖಲೆಗಳು ಮತ್ತು ಟಿಕೆಟ್ ನ ಪ್ರತಿ ಕೂಡ ಸರ್ಕಾರಕ್ಕೆ ನೀಡಿದ್ದೆ. ಆದರೆ ಸರ್ಕಾರದಿಂದ ಅನುಮತಿ ಸಿಗುವಾಗ ತಡವಾಗಿ 80 ಸಾವಿರ ರೂಪಾಯಿ ಕಳೆದುಕೊಂಡೆ'' ಎನ್ನುತ್ತಾರೆ ಅವರು.

ಇಂತಹ ಹಲವು ಪ್ರಕರಣಗಳಲ್ಲಿ ಉಪನ್ಯಾಸಕರು ತಮ್ಮ ಹಣ ಮತ್ತು ವಿದೇಶ ಪ್ರವಾಸದ ಅವಕಾಶವನ್ನು ಕಳೆದುಕೊಂಡಿದ್ದಾರೆ. ರಜಾ ದಿನಗಳಲ್ಲಿ ಕೂಡ ನಮ್ಮ ಕುಟುಂಬದವರ ಜೊತೆ ಹೋಗಬೇಕೆಂದು ನಿರ್ಧರಿಸಿದ ಪ್ರವಾಸವನ್ನು ಕೂಡ ಕೊನೆ ಕ್ಷಣದಲ್ಲಿ ರದ್ದುಪಡಿಸಿದ ಸಂದರ್ಭಗಳಿವೆ ಎನ್ನುತ್ತಾರೆ ಮಂಜುನಾಥ್.

ಪ್ರವಾಸಕ್ಕೆ ಏನೇನು ವಿವರಗಳು ನೀಡಬೇಕು?: ವಿದೇಶಿ ಪ್ರವಾಸ ಸಂದರ್ಭದಲ್ಲಿ ಅವರು ಎಲ್ಲಿ ವಾಸ್ತವ್ಯ ಹೂಡುತ್ತಾರೆ ಎಂದು ವಿವರ ನೀಡಬೇಕು.
-ನಿಗದಿಪಡಿಸಿದ ದಿನಾಂಕವೇ ಮತ್ತೆ ಕರ್ತವ್ಯಕ್ಕೆ ಹಾಜರಾಗಬೇಕು
-ವಿದೇಶಕ್ಕೆ ಹೋಗುವುದಿದ್ದರೆ ಆ ದೇಶದಲ್ಲಿರುವ ಸ್ನೇಹಿತರು ಮತ್ತು ಬಂಧುಗಳ ವಿವರ ಮತ್ತು ಸಂಪರ್ಕ ಸಂಖ್ಯೆ.
-ಪ್ರವಾಸದ ತಾತ್ಕಾಲಿಕ ವಿಳಾಸ
-ಪ್ರವಾಸದ ವೆಚ್ಚ
-ಟಿಕೆಟ್ ಮತ್ತು ಪಾಸ್ ಪೋರ್ಟ್ ನ ಪ್ರತಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com