ಮಡಿಕೇರಿ: ಅರ್ಧಕ್ಕೇ ನಿಂತಿರುವ ಮಿನಿ ವಿಧಾನ ಸೌಧ ನಿರ್ಮಾಣ ಕಾಮಗಾಗಿ

ಜಿಲ್ಲೆಯಲ್ಲಿ ಮಿನಿ ವಿಧಾನ ಸೌಧ ನಿರ್ಮಾಣಕ್ಕೆ 2016ರಲ್ಲಿ ಟೆಂಡರ್ ಕರೆಯಲಾಗಿತ್ತು. ಆದರೆ ಅನಪೇಕ್ಷಿತ ...
ಅರ್ಧಕ್ಕೇ ನಿಂತಿರುವ ಕಾಮಗಾರಿ
ಅರ್ಧಕ್ಕೇ ನಿಂತಿರುವ ಕಾಮಗಾರಿ

ಮಡಿಕೇರಿ: ಜಿಲ್ಲೆಯಲ್ಲಿ ಮಿನಿ ವಿಧಾನ ಸೌಧ ನಿರ್ಮಾಣಕ್ಕೆ 2016ರಲ್ಲಿ ಟೆಂಡರ್ ಕರೆಯಲಾಗಿತ್ತು. ಅನಪೇಕ್ಷಿತ ಜೌಗು ಭೂಮಿಯನ್ನು ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ನೀಡಿರುವುದರಿಂದ ಯೋಜನೆ ಸ್ಥಗಿತಗೊಂಡಿದೆ.

ಪರಿವರ್ತನೆಗೊಂಡಿರುವ ಕೃಷಿ ಭೂಮಿಯಲ್ಲಿ ಮಿನಿ ವಿಧಾನ ಸೌಧ ನಿರ್ಮಾಣ ಮಾಡಲು ಸರ್ಕಾರ ದೃಢ ನಿಶ್ಚಯ ಮಾಡಿದ್ದು, ಇದರ ಗುತ್ತಿಗೆಯನ್ನು ಬೆಂಗಳೂರಿನ ಕೆಬಿಆರ್ ಇನ್ಪ್ರಾಸ್ಟ್ರಕ್ಚರ್ ಲಿಮಿಟೆಡ್ ಗೆ ನೀಡಲಾಗಿತ್ತು, ಕಳೆದ ಫೆಬ್ರವರಿಯಲ್ಲಿ ಕೆಲಸ ಕೂಡ ಆರಂಭವಾಗಿತ್ತು.

ಆದರೆ ಕಾಮಗಾರಿ ಮಾತ್ರ ಅರ್ಧಕ್ಕೆ ನಿಂತುಹೋಗಿದೆ. ಮುಂದಿನ ವರ್ಷ ಜನವರಿಗೆ ಮುಗಿಯಬೇಕಿದ್ದ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಮುಂದುವರಿಯುವ ಲಕ್ಷಣ ಕಾಣುತ್ತಿಲ್ಲ. 20 ಅಡಿ ಆಳದವರೆಗೆ ಅಡಿಪಾಯ ತೋಡಿ ಕಂಬಗಳನ್ನು ನಿಲ್ಲಿಸಲಾಗಿದೆ. ಕಾಮಗಾರಿಗೆ ಸಿಮೆಂಟ್, ಮರಳು ಎಲ್ಲ ತಂದಿಟ್ಟದ್ದು ಹಾಗೆಯೇ ರಾಶಿ ಬಿದ್ದುಕೊಂಡಿದೆ. ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸುಮಾರು 14 ಲಕ್ಷ ರೂಪಾಯಿ ಇನ್ನೂ ಬರಬೇಕಿದೆ ಎನ್ನುತ್ತಾರೆ ಮಡಿಕೇರಿಯ ಅರ್ಥ್ ಮೂವರ್ ಕಂಪೆನಿಯ ಮಾಲೀಕ ಜಗದೀಶ್ ರೈ. ಹಣದ ಕೊರತೆಯಿಂದ ಕಂಪೆನಿಗೆ ನೀಡದೆ ಅದು ಕೆಲಸ ಮುಂದುವರಿಸುತ್ತಿಲ್ಲ ಎನ್ನುತ್ತಾರೆ ಅವರು.

ಕಟ್ಟಡ ನಿರ್ಮಾಣಕ್ಕೆ ಕಬ್ಬಿಣದ ಕಂಬಿ, ಸಿಮೆಂಟ್ ಬ್ಯಾಗ್ ಪೂರೈಸಿದ ಕಂಪೆನಿಗಳಿಗೆ ಸಹ ಹಣ ಪಾವತಿಯಾಗಿಲ್ಲ. ಕರ್ನಾಟಕ ವಸತಿ ಮಂಡಳಿಯಿಂದ ಹಣ ಪಾವತಿಯಾಗದಿರುವುದರಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com