ಬೆಂಗಳೂರು: ಆಟೋ ಚಾಲಕನ ನೆರವಿನಿಂದ ದರೋಡೆ ಯತ್ನ ವಿಫಲ; ನಾಲ್ವರ ಬಂಧನ

ಚಾರ್ಲಿ ಚಾಪ್ಲಿನ್ ಸಿನಿಮಾದಲ್ಲಿನ ದೃಶ್ಯದಲ್ಲಿ ಬರುವಂತೆ ಬಾಣಸವಾಡಿ ಪೊಲೀಸ್ ಸಂಚಾರಿ ಠಾಣೆ ...
ಬಾಣಸವಾಡಿ ಪೊಲೀಸ್ ಠಾಣೆಯ ಹೊರಗೆ ನಗದು ಸಾಗಿಸುವ ವಾಹನ
ಬಾಣಸವಾಡಿ ಪೊಲೀಸ್ ಠಾಣೆಯ ಹೊರಗೆ ನಗದು ಸಾಗಿಸುವ ವಾಹನ

ಬೆಂಗಳೂರು; ಚಾರ್ಲಿ ಚಾಪ್ಲಿನ್ ಸಿನಿಮಾದಲ್ಲಿನ ದೃಶ್ಯದಲ್ಲಿ ಬರುವಂತೆ ಬಾಣಸವಾಡಿ ಪೊಲೀಸ್ ಸಂಚಾರಿ ಠಾಣೆಯ  ಪೊಲೀಸರು ಮತ್ತು ಇಬ್ಬರು ನಾಗರಿಕರು 5 ಲಕ್ಷ ರೂಪಾಯಿಗಳೊಂದಿಗೆ ಪರಾರಿಯಾಗಲು ಯತ್ನಿಸಿದ್ದ ನಾಲ್ವರನ್ನು ಹಿಡಿದಿದ್ದಾರೆ.ಓರ್ವ ತಪ್ಪಿಸಿಕೊಂಡಿದ್ದಾನೆ.

ಆರೋಪಿಗಳೆಲ್ಲರೂ ನಗದು ನಿರ್ವಹಣೆ ಕೇಂದ್ರದ ಸಿಬ್ಬಂದಿಗಳಾಗಿದ್ದು ಎಟಿಎಂ ಯಂತ್ರಕ್ಕೆ ಹಣ ತುಂಬಿಸುವಾಗ ಈ ಘಟನೆ ನಡೆದಿದೆ. ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದರೆ, ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದ ಒಬ್ಬನನ್ನು ಜನರು ಹಿಡಿದು ಪೊಲೀಸರಿಗೊಪ್ಪಿಸಿದರು.

ಆಗಿದ್ದೇನು?: ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಲ್ಯಾಣ ನಗರದಲ್ಲಿ ರೇಡಿಯಂಟ್ ಕ್ಯಾಶ್ ಮ್ಯಾನೇಜ್ ಮೆಂಟ್ ಸರ್ವಿಸ್ ನ ಸುಮನ್, ಮಂಜು ಚಂದ್ರ, ದೀಪಕ್ ಮತ್ತು ಸತೀಶ್ ಕುಮಾರ್ ನನ್ನು ಪೊಲೀಸರು ಬಂಧಿಸಿದರು. ನಂತರ ಉಮೇಶ್ ಎಂಬುವವನು ಹೊರಗಿನವನಾಗಿದ್ದಾನೆ.

ಸುಮನ್ ತನ್ನ ಕಂಪೆನಿಯ ನಗದು ಸಾಗಿಸುವ ವಾಹನವನ್ನು ಓಂ ಶಕ್ತಿ ದೇವಸ್ಥಾನದ ಹತ್ತಿರ ಎಟಿಎಂ ಬಳಿ ತೆಗೆದುಕೊಂಡು ಹೋದನು. ಗನ್ ಮ್ಯಾನ್ ಮಂಜು ಮತ್ತು ನಗದು ತುಂಬಿಸುವವರಾದ ದೀಪಕ್ ಮತ್ತು ಸತೀಶ್ ಎಟಿಎಂ ಕೇಂದ್ರದೊಳಗೆ ಹೋದರು. ಎಟಿಎಂ ಯಂತ್ರಕ್ಕೆ 6 ಲಕ್ಷ ರೂಪಾಯಿ ತುಂಬಿಸಿ ಹತ್ತಿರದಲ್ಲಿಯೇ ನಿಂತಿದ್ದರು. ಈ ಸಂದರ್ಭದಲ್ಲಿ ಗಾಡಿ ಬಳಿ ನಿಂತಿದ್ದ ಸುಮನ್ ಕೈಯಲ್ಲಿ ಇನ್ನೂ 5 ಲಕ್ಷ ರೂಪಾಯಿಗಳಿದ್ದವು. ಆ ಹೊತ್ತಿಗೆ ಅಲ್ಲಿಗೆ ಉಮೇಶ್ ಬಂದನು. ಆತ ಸುಮನ್ ಗೆ ಭಯ ಹುಟ್ಟಿಸುವಂತೆ ನಾಟಕವಾಡಿ ಗಾಡಿ ತೆಗೆದುಕೊಂಡು ಹೋದನು. ಆಗ ತಕ್ಷಣವೇ ಮಂಜು ಚಂದ್ರ, ದೀಪಕ್ ಮತ್ತು ಸತೀಶ್ ಗಾಡಿಗೆ ಹತ್ತಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದರು.

ಅವರಲ್ಲಿ ಸುಮನ್ ಪಕ್ಕದ ಸಂಚಾರಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕುಮಾರ್ ಡಿಸಿ ಬಳಿಗೆ ಹೋಗಿ ತನ್ನ ಮೇಲೆ ಗ್ಯಾಂಗ್ ಹಲ್ಲೆ ನಡೆಸಿ 5 ಲಕ್ಷದೊಂದಿಗೆ ಪರಾರಿಯಾಗಲು ಯತ್ನಿಸುತ್ತಿದ್ದಾರೆ ಎಂದು ಸುಳ್ಳು ಹೇಳಿದನು. ಆದರೆ ಗಾಡಿಯನ್ನು ಓಡಿಸುತ್ತಿದ್ದ ರಭಸಕ್ಕೆ ಆಟೋವೊಂದಕ್ಕೆ ಹೋಗಿ ಡಿಕ್ಕಿ ಹೊಡೆಯಿತು. ಆಟೋ ಚಾಲಕ ಮೋಹನ್ ಕುಮಾರ್ ಇವರನ್ನು ಎಟಿಎಂ ಕೇಂದ್ರದ ಬಳಿ ನೋಡಿದ್ದರು.

ಮೋಹನ್ ಕುಮಾರ್ ಕೂಡ ಸಂಚಾರಿ ಪೊಲೀಸ್ ಇನ್ಸ್ ಪೆಕ್ಟರ್ ಕುಮಾರ್ ಬಳಿ ಹೋದಾಗ ಅಲ್ಲಿ ಸುಮನ್ ಇದ್ದನು. ತಕ್ಷಣವೇ ಅನುಮಾನ ಬಂದು ಹಣ ತುಂಬಿಕೊಂಡು ಹೋಗುತ್ತಿದ್ದ ವಾಹನವನ್ನು ಆಟೋ ಚಾಲಕ ಅನುಸರಿಸಿದರು. ಪೊಲೀಸರು ಹಿಂದಿನಿಂದ ಹೋದರು.
ಪೊಲೀಸರು ತಮ್ಮನ್ನು ಅಟ್ಟಿಸಿಕೊಂಡು ಬರುತ್ತಿದ್ದಾರೆ ಎಂದು ಗೊತ್ತಾಗಿ ಭಯದಿಂದ ಉಮೇಶ್ ವಾಹನದಿಂದ ಕೆಳಗೆ ಹಾರಿದನು. ಉಳಿದ ಮೂವರಿಗೆ ಭಯ ಆರಂಭವಾಯಿತು.

ಗಾಡಿ ಹೋಗಿ ನಿಂತಿದ್ದ ಟ್ರಕ್ಕ್ ಗೆ ಡಿಕ್ಕಿ ಹೊಡೆಯಿತು. ಗಾಡಿಯಲ್ಲಿದ್ದ ಮೂವರನ್ನು ತಕ್ಷಣವೇ ಪೊಲೀಸರು ಬಂಧಿಸಿದರು. ಸುಮನ್ ಕೂಡ ಕೆಲವೇ ಹೊತ್ತಿನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದ.
ನಗದು ನಿರ್ವಹಣೆ ಸಂಸ್ಥೆಯ ಮುಖ್ಯಸ್ಥ ನರೇಂದ್ರ ಬಾಬು ಆರೋಪಿಗಳ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ. ತಪ್ಪಿಸಿಕೊಂಡಿರುವ ಉಮೇಶ್ ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com