ಬಂಡೀಪುರ ಮೀಸಲು ಅರಣ್ಯ ಮೂಲಕ ಎತ್ತರಿಸಿದ ಮೇಲ್ಸುತುವೆ ನಿರ್ಮಾಣಕ್ಕೆ ಪರಿಸರ ಪ್ರೇಮಿಗಳ ವಿರೋಧ !

ಬಂಡೀಪುರ ಮೀಸಲು ಅರಣ್ಯ ಪ್ರದೇಶದಲ್ಲಿ ಕೇಂದ್ರಸರ್ಕಾರ ಪ್ರಸ್ತಾವಿಕ ಎತ್ತರಿಸಿದ ಮೇಲ್ಸುತುವೆ ಯೋಜನೆಗೆ ಪರಿಸರ ಪ್ರೇಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಪರಿಸರ ಪ್ರೇಮಿಗಳ ಹೋರಾಟ
ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಪರಿಸರ ಪ್ರೇಮಿಗಳ ಹೋರಾಟ

ಬೆಂಗಳೂರು: ಬಂಡೀಪುರ ಮೀಸಲು ಅರಣ್ಯ ಪ್ರದೇಶದಲ್ಲಿ ರಾತ್ರಿ ಸಂಚಾರ ನಿಷೇಧಕ್ಕೆ ಪರ್ಯಾಯವಾಗಿ ಕೇಂದ್ರಸರ್ಕಾರ ಪ್ರಸ್ತಾವಿಕ ಎತ್ತರಿಸಿದ ಮೇಲ್ಸುತುವೆ ಯೋಜನೆಗೆ ಪರಿಸರ ಪ್ರೇಮಿಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವಂತೆ, ಇಲ್ಲಿ ಯಾವುದೇ ಯೋಜನೆ ಕೈಗೊಳ್ಳುವುದಾಗಲೀ ಅಥವಾ ರಾತ್ರಿ ಸಂಚಾರ ನಿಷೇಧ ತೆರವುಗೊಳಿಸುವುದಿಲ್ಲ ಎಂಬುದನ್ನು ಕರ್ನಾಟಕ  ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಹಿರಿಯ ಅರಣ್ಯ ಅಧಿಕಾರಿಗಳು, ಕೇರಳ ಸರ್ಕಾರದೊಂದಿಗೆ ನಡೆದ ಅನೇಕ ಸಭೆ ಹಾಗೂ ಒತ್ತಡಗಳ ಹೊರತಾಗಿಯೂ 2010ರಿಂದಲೂ ಕರ್ನಾಟಕದ ನಿಲುವು ಒಂದೇ ಆಗಿದೆ. ರಾತ್ರಿ ಸಂಚಾರ ನಿಷೇಧವನ್ನು ತೆರವುಗೊಳಿಸುವುದಿಲ್ಲ

ಒಂದು ವೇಳೆ  5 ಕಿಲೋ ಮೀಟರ್ ಎತ್ತರಿಸಿದ ಮೇಲ್ಸುತುವೆ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ಕೇಂದ್ರ ಹೆದ್ದಾರಿ ಸಚಿವಾಲಯ ತನ್ನ ಅಭಿಪ್ರಾಯವನ್ನು ಹೇಳಿದ್ದರೆ, ಇಂತಹ ಯೋಜನೆಯಿಂದ ಅರಣ್ಯಕ್ಕೆ ಹಾನಿಯಾಗುವ ಬಗ್ಗೆ ಅರಣ್ಯ ಇಲಾಖೆ ಈಗಾಗಲೇ ತನ್ನ ಅಭಿಪ್ರಾಯವನ್ನು ಹೇಳಿದೆ ಎಂದು ಹೇಳಿದರು.

ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಯವರೆಗೂ ರಾತ್ರಿ ಸಂಚಾರ ನಿಷೇಧವನ್ನು ಕಟ್ಟುನಿಟ್ಟುಗೊಳಿಸಿದ್ದು, ಸುಪ್ರೀಂ ಕೋರ್ಟ್ ನಲ್ಲಿ ತಮ್ಮ ನಿಲುವನ್ನು ಸ್ಪಷ್ಪಪಡಿಸುತ್ತೇವೆ. ರಾತ್ರಿ ಸಂಚಾರ ನಿಷೇಧ ತೆರವು ಹಾಗೂ ಎತ್ತರಿಸಿದ ಮೇಲ್ಸುತುವೆ ಯೋಜನೆಗೆ ಸಾರ್ವಜನಿಕರಿಂದಲೂ ಅಸಮಾಧಾನ ವ್ಯಕ್ತವಾಗಿದೆ ಎಂದು ತಿಳಿಸಿದರು.

ಹೋರಾಟಗಾರರು ಮಾತನಾಡಿ, ಕೇಂದ್ ರಸರ್ಕಾರ ಪ್ರಸ್ತಾವಿತ ಯೋಜನೆಯಿಂದ ವನ್ಯಜೀವಿಗಳ ಪ್ರಾಣಕ್ಕೆ ಸಂಚಕಾರ ಉಂಟಾಗಲಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com