ಮಂಗಳೂರು: ಜೈಲಿನ ಖೈದಿಗಳಿಗೆ ಗಾಂಜಾ ಪೂರೈಕೆಗೆ ಯತ್ನಿಸಿದ ಕಾಲೇಜು ಯುವತಿ ಬಂಧನ

ಮಂಗಳೂರು ಜೈಲಿನ ಖೈದಿಗಳಿಗೆ ಗಾಂಜಾ ಸರಬರಾಜು ಮಾಡಲು ಯತ್ನಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಮಂಗಳೂರು ಅಪರಾಧ ಘಟಕದ ಪೋಲೀಸರು ಬಂಧಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮಂಗಳೂರು: ಮಂಗಳೂರು ಜೈಲಿನ ಖೈದಿಗಳಿಗೆ ಗಾಂಜಾ ಸರಬರಾಜು ಮಾಡಲು ಯತ್ನಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಮಂಗಳೂರು ಅಪರಾಧ ಘಟಕದ ಪೋಲೀಸರು ಬಂಧಿಸಿದ್ದಾರೆ.
ಜೈಕ್ಲಿನಲ್ಲಿದ್ದ ವಿಚಾರಣಾಧೀನ ಖೈದಿಯನ್ನು ಭೇಟಿಯಾಗುವ ನೆಪದಲ್ಲಿ ಗಾಂಜಾ ಪೂರೈಕೆಗೆ ಯತ್ನಿಸಿದ್ದ ಯುವತಿಯನ್ನು ಬಂಧಿಸಿರುವ ಪೋಲೀಸರು ಆಕೆಯ ಬಳಿಯಿದ್ದ ೨೦ ಗ್ರಾಂ ಗಾಂಜಾ ಮತ್ತು ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ.
ಜೈಲಿನಲ್ಲಿರುವ ಮುಸ್ತಫಾ ಎಂಬ ವಿಒಚಾರಣಾಧೀನ ಖೈದಿಯ ಭೇಟಿಗಾಗಿ ಯುವತಿ ಜೈಲಿಗೆ ಆಗಮಿಸಿದ್ದಳು, ಈಕೆ ಕೈದಿಯ ಭೇಟಿಗಾಗಿ ಅವಕಾಶವನ್ನೂ ಪಡೆದಿದ್ದಳು. ಆದರೆ ಈ ಭೇಟಿಯಲ್ಲಿ ಖೈದಿಗೆ ಗಾಂಜಾ ಹಾಗೂ ಮೊಬೈಲ್ ಸರಬರಾಜು ಮಾಡುತ್ತಿರುವ ಮಾಹಿತಿ ಪಡೆದ ಸಿಸಿಬಿ ಇನ್ಸ್ ಪೆಕ್ಟರ್ ಶಾಂತಾರಾಮ್ ಹಾಗೂ ತಂಡ ಈಕೆಯನ್ನು ಬಂಧಿಸಿದೆ.
ಘಟನೆ ಕುರಿತು ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಯುವತಿ ನೀಡಿದ ಮಾಹಿತಿ ಆಧರಿಸಿ ಆಕೆಗೆ ಗಾಂಜಾ ಸರಬರಾಜು ಮಾಡಿದವರ ಪತ್ತೆಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಪೋಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com