ರಾಮನಗರ: ಸ್ನೇಹಿತನ ಜತೆ ಪ್ರವಾಸಕ್ಕೆ ಹೋಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು!

ಸ್ನೇಹಿತನ ಜತೆ ಪ್ರವಾಸಕ್ಕೆಂದು ಬೆಂಗಳೂರು ಹೊರಬಲಯದ ಸಾತನೂರು ಚುಂಚಿಫಾಲ್ಸ್ ಗೆ ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನೀರುಪಾಲಾಗಿದ್ದಾನೆ.
ಸ್ನೇಹಿತನ ಜತೆ ಪ್ರವಾಸಕ್ಕೆ ಹೋಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು
ಸ್ನೇಹಿತನ ಜತೆ ಪ್ರವಾಸಕ್ಕೆ ಹೋಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು
ರಾಮನಗರ: ಸ್ನೇಹಿತನ ಜತೆ ಪ್ರವಾಸಕ್ಕೆಂದು ಬೆಂಗಳೂರು ಹೊರಬಲಯದ ಸಾತನೂರು ಚುಂಚಿಫಾಲ್ಸ್ ಗೆ ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನೀರುಪಾಲಾಗಿದ್ದಾನೆ.
ಬೆಂಗಳೂರಿನ ರಾಜರಾಜೇಶ್ವರಿ ನಗರ ಆರ್‍ಎನ್‍ಎಸ್‍ಐಟಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಕೌಶಿಕ್(20) ಮೃತ ದುರ್ದೈವಿ. ಬಿಹಾರದ ಪಾಟ್ನಾ ಮೂಲದವನಾದ ಕೌಶಿಕ್ ಕಾಲೇಜಿನಲ್ಲಿ ತೃತೀಯ ವರ್ಷದ ವ್ಯಾಸಂಗ ಮಾಡುತ್ತಿದ್ದನು
ದಸರಾ ಸಲುವಾಗಿ ಸಾಲು ಸಾಲು ರಜೆ ದೊರಕಿದ ಕಾರಣ ಆತ ತನ್ನ ಐವರು ಸ್ನೇಹಿತರೊಡನೆ ಮೇಕೆದಾಟು, ಚುಂಚಿಫಾಲ್ಸ್ ಪ್ರವಾಸಕ್ಕಾಗಿ ಆಗಮಿಸಿದ್ದನು.
ಮೃತ ಕೌಶಿಕ್ ಜತೆಗಿದ್ದ ಇತರೆ ವಿದ್ಯಾರ್ಥಿಗಳೆಂದರೆ ಆರ್‌ಎನ್‌ಎಸ್‌ಐಟಿ  ಕಾಲೇಜಿನ ವಿದ್ಯಾರ್ಥಿಗಳಾದ ಮಧ್ಯಪ್ರದೇಶದ ಮೆಹುಲ್, ಉತ್ತರಪ್ರದೇಶದ ಮಯಾಂಕ್, ದಯಾನಂದದಾಗರ ಕಾಲೇಜಿನ ಛತ್ತೀಸ್‌ಗಢದ ರಾಹುಲ್, ಉತ್ತರಕರ್ನಾಟಕದ ಪೂನಂ ಕುಮಾರಿ ಆಗಿದ್ದಾರೆ. ಆರು ಮಂದಿ ಮೂರು ಬೈಕ್ ಗಳಲ್ಲಿ ಪ್ರವ್ವಾಸಕ್ಕೆ ಆಗಮಿಸಿದ್ದರು.
ಭಾನುವಾರ ಸಂಜೆ ಮೇಕೆದಾಟು ವೀಕ್ಷಣೆ ಬಳಿಕ ಚುಂಚಿಫಾಲ್ಸ್ ಗೆ ಆಗಮಿಸಿದ್ದ ಅವರುಗಳು ಅಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.ಬಳಿಕ ತಮ್ಮ ವಾನ್=ಹನಗಳನ್ನು ನಿಲ್ಲಿಸಿದ್ದ ಪಾರ್ಕಿಂಗ್ ಸ್ಥಳಕ್ಕೆ ಆಗಮಿಸಿದಾಗ ಕೌಶಿಕ್ ಇಲ್ಲದಿರುವುದು ಗೊತ್ತಾಗಿದೆ. ಅ=ಇಲ್ಲೇ ಎಲ್ಲೋ ಹೋಗಿದ್ದಾನೆಂದು ಭಾವಿಸಿ ಪಾರ್ಕಿಂಗ್ ಪ್ರದೇಶದಲ್ಲಿ ಕಾಯುತಾ ಕುಳಿತರೂ ಕೌಶಿಕ್ ಆಗಮಿಸದೆ ಹೋದಾಗ ಅದೇ ದಿನ ಸಂಜೆ ಜಲಪಾತದ ಸುತ್ತ ಹುಡುಕಾಟ ಪ್ರಾರಂಭಿಸಿದ್ದಾರೆ.
ಹುಡುಕಾಟ ವಿಫಲವಾದ ಬಳಿಕ ಭಾನುವಾರ ರಾತ್ರಿ ಸಾತನೂರು ಪೋಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.ಪೋಲೀಸರು ನಡೆಸಿದ ಶೋಧಕಾರ್ಯದ ಪರಿಣಾಮ ಸೋಮವಾರ ಮಧ್ಯಾಹ್ನ ಚುಂಚಿಫಾಲ್ಸ್ ನ ಸಂದಿಯಲ್ಲಿ ಕೌಶಿಕ್ ಮೃತದೇಹ ಪತ್ತೆಯಾಗಿದೆ..
ಸಧ್ಯ ಮೃತ ವಿದ್ಯಾರ್ಥಿಯ ಶವವನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ಸ್ಥಳಾಂತರಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಶವವನ್ನು ಅದರ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com