ಧರ್ಮಸ್ಥಳದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವೀರೇಂದ್ರ ಹೆಗ್ಗಡೆ "ಶಬರಿಮಲೆಗೆ ತೆರಳುವವರು 48 ದಿನ ಬ್ರಹ್ಮಚರ್ಯ ವ್ರತ ಪಾಲನೆ ಮಾಡಿರುತ್ತಾರೆ. ಭಕ್ತರು ವ್ರತ ಆಚರಣೆ ಮಾಡುವುದರ ಹಿಂದೆ ಅವರಲ್ಲಿ ಸಂಯಮವನ್ನು ಬೆಳೆಸಿಕೊಳ್ಳುವ ಉದ್ದೇಶವಿರುತ್ತದೆ. ಸಂಯಮ, ಮನೋನಿಗ್ರಹಗಳು ಮನುಷ್ಯನಿಗೆ ಅಗತ್ಯವಾಗಿದ್ದು ಒಂದು ವೇಳೆ ಸಂಯಮ ಸಡಿಲಾದರೆ ಅಸಮಾನತೆ ಉಂಟಾಗಬಹುದು. ಇದುವೇ ಮೀಟೂ ನಂತಹಾ ಪ್ರಕರಣ ನಡೆಯಲು ಕಾರಣವಾಗಬಾರದು" ಎಂದಿದ್ದಾರೆ.