ಸಾಂದರ್ಭಿಕ ಚಿತ್ರ
ರಾಜ್ಯ
ಬೆಂಗಳೂರು: 'ವಿದ್ಯಾರ್ಥಿ ಭವನ್'ಗೆ ಅಮೃತ ಮಹೋತ್ಸವ ಸಂಭ್ರಮ: ಸೈನಿಕರಿಗೆ ಉಚಿತ ಆಹಾರ
ಸಿಲಿಕಾನ್ ಸಿಟಿ ಬೆಂಗಳೂರಿನ ಆಹಾರ ಪ್ರಿಯರ ನೆಚ್ಚಿನ ತಾಣ, ವಿಶೇಷವಾಗಿ ರುಚಿಕರವಾದ ದೋಸೆಯಿಂದಾಗಿ ಖ್ಯಾತಿ ಪಡೆದಿರುವ ವಿದ್ಯಾರ್ಥಿ ಭವನ್ ಹೋಟೆಲ್ ಅಮೃತ ಮಹೋತ್ಸವ ಆಚರಿಸುತ್ತಿದೆ. ಇದೇ ಸಂದರ್ಭದಲ್ಲಿ ಸೈನಿಕರಿಗೆ ಉಚಿತವಾಗಿ ಆಹಾರ ನೀಡಲಾಗುತ್ತಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಆಹಾರ ಪ್ರಿಯರ ನೆಚ್ಚಿನ ತಾಣ, ವಿಶೇಷವಾಗಿ ರುಚಿಕರವಾದ ದೋಸೆಯಿಂದಾಗಿ ಖ್ಯಾತಿ ಪಡೆದಿರುವ ವಿದ್ಯಾರ್ಥಿ ಭವನ್ ಹೋಟೆಲ್ ಅಮೃತ ಮಹೋತ್ಸವ ಆಚರಿಸುತ್ತಿದೆ. ಇದೇ ಸಂದರ್ಭದಲ್ಲಿ ಸೈನಿಕರಿಗೆ ಉಚಿತವಾಗಿ ಆಹಾರ ನೀಡಲಾಗುತ್ತಿದೆ.
ಬಸವನಗುಡಿಯ ಗಾಂಧಿ ಬಜಾರ್ ನಲ್ಲಿರುವ ಈ ಹೋಟೆಲ್ 75 ವರ್ಷ ಸೇವೆ ಪೂರ್ಣಗೊಳಿಸಿರುವ ನೆನಪಿನಲ್ಲಿ ನಾಳೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಹೋಟೆಲ್ ನಲ್ಲಿ 20 ವರ್ಷ ಸೇವೆ ಸಲ್ಲಿಸಿರುವ ನೌಕರರು ಹಾಗೂ ಪ್ರತಿನಿತ್ಯ ಭೇಟಿ ನೀಡುತ್ತಿದ್ದ ಕೆಲ ಗ್ರಾಹಕರನ್ನು ಇದೇ ವೇಳೆ ಸನ್ಮಾನಿಸಲಾಗುತ್ತಿದೆ.
ವಿದ್ಯಾರ್ಥಿ ಭವನ್ ಅಮೃತ ಮಹೋತ್ಸವ ಸಂದರ್ಭದಲ್ಲಿ ಭಾರತೀಯ ಅಂಚೆ ಇಲಾಖೆಯಿಂದ ವಿಶೇಷವಾದ ಪೋಸ್ಟಲ್ ಕಾವರ್ ಹಾಗೂ ಸ್ಟಾಂಪ್ ಹೊರತರುತ್ತಿದೆ.
ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಎಂ.ಎನ್. ವೆಂಕಟಾಚಲಯ್ಯ, ಭಾರತ ರತ್ನ ಪ್ರೋಫೆಸರ್ ಸಿಎನ್ ಆರ್ ರಾವ್, ಹಿರಿಯ ಸಾಹಿತಿ ಕೆ. ಎಸ್. ನಿಸಾರ್ ಅಹಮದ್ , ಮಾಯಾಸ್ ಸಮೂಹ ಕಂಪನಿಯ ಸ್ಥಾಪಕ ಸದಾನಂದ ಮಾಯ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ