ನಮ್ಮ ಸಂಸ್ಥೆ ಭಾರತೀಯ ಕಾನೂನನ್ನು ಪಾಲಿಸಿಕೊಂಡು ಬಂದಿದೆ: ಅಮ್ನೆಸ್ಟಿ ಇಂಡಿಯಾ

ನಮ್ಮ ಸಂಸ್ಥೆ ಭಾರತೀಯ ಕಾನೂನುಗಳನ್ನು ಪಾಲಿಸಿಕೊಂಡು ಬಂದಿದ್ದು, ಜಾರಿ ನಿರ್ದೇಶನಾಲಯದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಮ್ಮ ಸಂಸ್ಥೆ ಭಾರತೀಯ ಕಾನೂನುಗಳನ್ನು ಪಾಲಿಸಿಕೊಂಡು ಬಂದಿದ್ದು, ಜಾರಿ ನಿರ್ದೇಶನಾಲಯದ ದಾಳಿ ಸರ್ಕಾರದ ಗೊಂದಲಮಯ ವ್ಯವಸ್ಥೆಯನ್ನು ಪ್ರಶ್ನೆ ಮಾಡುವ ಸಂಸ್ಥೆಯ ಹೋರಾಟವನ್ನು ಹತ್ತಿಕ್ಕುವ ಕ್ರಮವಾಗಿದೆ ಎಂದು ಅಮ್ನೆಸ್ಟಿ ಇಂಡಿಯಾ ಮಾನವ ಹಕ್ಕುಗಳ ಹೋರಾಟ ಸಂಸ್ಥೆ ಆರೋಪಿಸಿದೆ.

ಇಂತಹ ದಾಳಿಗಳನ್ನು ನಡೆಸುವ ಮೂಲಕ ಸರ್ಕಾರ ನಾಗರಿಕ ಸಮಾಜದಲ್ಲಿ ಭಯವನ್ನು ಹುಟ್ಟಿಸಲು ಯತ್ನಿಸುತ್ತಿದೆ ಎಂದು ಮಾನವ ಹಕ್ಕುಗಳ ಕಾವಲು ಸಂಸ್ಥೆಯಾಗಿರುವ ಅಮ್ನೆಸ್ಟಿ ಇಂಡಿಯಾ ಟ್ವೀಟ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ. 2010ರಲ್ಲಿ ಆರಂಭಗೊಂಡಾಗಿನಿಂದ ನಮ್ಮ ಸಂಸ್ಥೆ ಭಾರತೀಯ ಕಾನೂನುಗಳನ್ನು ಪಾಲಿಸಿಕೊಂಡು ಬಂದಿದೆ ಎಂದು ನಾವು ಸಾರಿ ಹೇಳುತ್ತೇವೆ ಎಂದು ಟ್ವೀಟ್ ಮಾಡಿದೆ.

ಸರ್ಕಾರದ ಒಂದು ಗೊಂದಲಮಯ ವ್ಯವಸ್ಥೆ ನಮ್ಮ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ತಡೆಯಲು ಜಾರಿ ನಿರ್ದೇಶನಾಲಯ ಮೂಲಕ ದಾಳಿ ನಡೆಸಲಾಗಿದೆ. ಸರ್ಕಾರದ ನೀತಿಗಳು, ತತ್ವಗಳನ್ನು ಯಾರು ಪ್ರಶ್ನಿಸುತ್ತಾರೆಯೋ ಅವರ ವಿರುದ್ಧ ದಾಳಿ ನಡೆಸುವ ಒಂದು ವ್ಯವಸ್ಥಿತಿ ಸಂಚು ನಡೆಯುತ್ತಿದೆ. ನಾಗರಿಕ ಸಮಾಜದ ಸಂಘಟನೆಗಳಲ್ಲಿ ಭಯದ ವಾತಾವರಣ ಹುಟ್ಟಿಸಲು ಸರ್ಕಾರ ಬಯಸುತ್ತದೆ ಎಂದು ಹೇಳಿದೆ.

ವಿದೇಶಿ ವಿನಿಮಯ ವಿವಾದಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಕಾವಲು ಸಂಸ್ಥೆಯಾದ ಅಮ್ನೆಸ್ಟಿ ಇಂಡಿಯಾದ ಎರಡು ಕಚೇರಿಗಳಲ್ಲಿ ಜಾರಿ ನಿರ್ದೇಶನಾಲಯ ನಿನ್ನೆ ಶೋಧ ಕಾರ್ಯ ನಡೆಸಿತ್ತು.

ವಿದೇಶಿ ನೇರ ಹೂಡಿಕೆ ನಿಯಮ ಉಲ್ಲಂಘನೆಗೆ ಸಂಬಂಧಪಟ್ಟಂತೆ ಈ ಶೋಧ ಕಾರ್ಯ ನಡೆಸಲಾಗಿದೆ. 2010ರಲ್ಲಿ ಕೇಂದ್ರ ಗೃಹ ಸಚಿವಾಲಯದಿಂದ ಸರ್ಕಾರೇತರ ಸಂಸ್ಥೆಯ ಅನುಮತಿಯನ್ನು ಹಿಂತೆಗೆದುಕೊಳ್ಳುವಿಕೆ ಸಂಬಂಧಪಟ್ಟ ಹಿಂದಿನ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ(ಎಫ್ ಸಿಆರ್ ಎ) ಇದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com