2 ವರ್ಷಗಳ ನಂತರ ಚರಂಡಿ ಒತ್ತುವರಿ ತೆರವು ಕಾರ್ಯಾಚರಣೆ ಕೈಗೆತ್ತಿಕೊಳ್ಳಲಿರುವ ಬಿಬಿಎಂಪಿ

ಎರಡು ವರ್ಷಗಳ ನಂತರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಒಳಚರಂಡಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಎರಡು ವರ್ಷಗಳ ನಂತರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಒಳಚರಂಡಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಾಳೆಯಿಂದ ಆರಂಭಿಸಲಿದ್ದೇವೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 633 ಒಳಚರಂಡಿಗಳಿದ್ದು ಅದು 842 ಕಿಲೋ ಮೀಟರ್ ವ್ಯಾಪ್ತಿಯನ್ನು ಹೊಂದಿದೆ.ಅವುಗಳಲ್ಲಿ 142 ಕಿಲೋ ಮೀಟರ್ ಪ್ರಾಥಮಿಕ ಚರಂಡಿಯಾಗಿದ್ದು 426 ಕಿಲೋ ಮೀಟರ್ ದ್ವಿತೀಯ ಚರಂಡಿಯಾಗಿವೆ. ಮಳೆಯ ನೀರು 80 ಮಿಲಿ ಮೀಟರ್ ಹರಿಯುವ ಸಾಮರ್ಥ್ಯವನ್ನು ಚರಂಡಿ ಹೊಂದಿರುತ್ತದೆ. ಪ್ರತಿವರ್ಷ ನಡೆಯುತ್ತಿರುವ ಒತ್ತುವರಿ ಮತ್ತು ನಿರ್ವಹಣೆ ಸೂಕ್ತವಾಗಿಲ್ಲದಿರುವುದರಿಂದ ಈ ಸಾಮರ್ಥ್ಯ 40 ಮಿಲಿ ಮೀಟರ್ ನಿಂದ 35 ಮಿಲಿ ಮೀಟರ್ ಗೆ ಇಳಿಕೆಯಾಗಿದೆ.

2016ರಲ್ಲಿ ನಗರದಲ್ಲಿ ಪ್ರವಾಹ ಉಂಟಾಗಿದ್ದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಬಿಎಂಪಿಗೆ ಚರಂಡಿ ಒತ್ತುವರಿಯನ್ನು ತೆರವುಗೊಳಿಸುವಂತೆ ಆದೇಶ ನೀಡಿದ್ದರು. ಬಿಬಿಎಂಪಿ ಅಧಿಕಾರಿಗಳು ಬೆಂಗಳೂರು ನಗರ ಜಿಲ್ಲಾಧಿಕಾರಿ ಮತ್ತು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ತೆರವು ಕಾರ್ಯಾಚರಣೆಗಿಳಿದಿದ್ದರು. ತಮ್ಮ ಆಸ್ತಿಪಾಸ್ತಿಗಳನ್ನು ಕಳೆದುಕೊಂಡ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಆ ಸಮಯದಲ್ಲಿ ಮೊದಲೇ ನೊಟೀಸ್ ಕೊಡದೆ ಅಧಿಕಾರಿಗಳು ಅಭಿಯಾನವನ್ನು ಆರಂಭಿಸಿದ್ದರು.

2016, ಜುಲೈಯಲ್ಲಿ ಬಿಬಿಎಂಪಿ ಅಧಿಕಾರಿಗಳು 1953 ಒಳಚರಂಡಿ ಅತಿಕ್ರಮಣದ ಬಗ್ಗೆ ಮುಖ್ಯಮಂತ್ರಿಗಳಿಗೆ ವರದಿ ನೀಡಿದ್ದರು. 2017ರ ಕೊನೆಗೆ 1260 ಅತಿಕ್ರಮಣಗಳನ್ನು ತೆರವುಗೊಳಿಸಿದ್ದರು. ಆ ನಂತರ ಸಮೀಕ್ಷೆ ನಡೆಸದೆ ಯಾವುದೇ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿರಲಿಲ್ಲ. ಇದೀಗ ಮತ್ತೆ ಸಮೀಕ್ಷೆ ಮಾಡುವವರಿಗೆ ಸೂಚನೆ ನೀಡಿ ಅತಿಕ್ರಮಣ ಚರಂಡಿಗಳನ್ನು ತೆರವುಗೊಳಿಸುವಂತೆ ಮತ್ತು ಅವುಗಳನ್ನು ತೆರವುಗೊಳಿಸುವವರೆಗೆ ನಿಗಾವಹಿಸುವಂತೆ ಸೂಚನೆ ನೀಡಿದ್ದಾರೆ.

ಬಿಬಿಎಂಪಿ ನಾಳೆ ಮೊದಲ ಹಂತದ ಚರಂಡಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮಹದೇವಪುರದಿಂದ ಯಲಹಂಕ ವಲಯದವರೆಗೆ ಕೈಗೆತ್ತಿಕೊಳ್ಳಲಿದೆ. ಉಳಿದ 728 ಒತ್ತುವರಿ ಪ್ರಕರಣಗಳಲ್ಲಿ ಸಮೀಕ್ಷೆದಾರರಿಗೆ 434 ಆಸ್ತಿಗಳನ್ನು ಆದ್ಯತೆ ಮೇರೆಗೆ ಸಮೀಕ್ಷೆ ನಡೆಸುವಂತೆ ಸೂಚಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com