ಬೆಂಗಳೂರು ಸಾಹಿತ್ಯ ಉತ್ಸವದಲ್ಲಿಯೂ ಮಿಟೂ ಚರ್ಚೆ!

ಈಗ ಎಲ್ಲಿ ನೋಡಿದರಲ್ಲಿ ಮಿಟೂವಿನದ್ದೇ ಸದ್ದು. ಅದು ಬೆಂಗಳೂರು ಸಾಹಿತ್ಯ ಉತ್ಸವವನ್ನೂ ಬಿಟ್ಟಿಲ್ಲ...
ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಖ್ಯಾತ ಸಾಹಿತಿಗಳು
ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ಖ್ಯಾತ ಸಾಹಿತಿಗಳು

ಬೆಂಗಳೂರು: ಈಗ ಎಲ್ಲಿ ನೋಡಿದರಲ್ಲಿ ಮಿಟೂವಿನದ್ದೇ ಸದ್ದು. ಅದು ಬೆಂಗಳೂರು ಸಾಹಿತ್ಯ ಉತ್ಸವವನ್ನೂ ಬಿಟ್ಟಿಲ್ಲ. ಅಲ್ಲಿ ಕೂಡ ಮಿಟೂ ಬಗ್ಗೆ ಚರ್ಚೆ, ಮಾತುಕತೆ ನಡೆದಿದೆ.
ಚರ್ಚೆಯ ತಂಡದಲ್ಲಿ ಭಾರತದಲ್ಲಿ ಮಿಟೂ ಚಳವಳಿ ಆರಂಭಿಸಿದ ಸಂಧ್ಯಾ ಮೆನನ್ ಇದ್ದರು. ಇಷ್ಟು ವರ್ಷಗಳಲ್ಲಿ ಸಮಾಜದ ವಿವಿಧ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರು, ಯುವತಿಯರು ಎದುರಿಸಿದ ಲೈಂಗಿಕ ಕಿರುಕುಳದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡರು.

1990ರ ದಶಕದಲ್ಲಿ ತಮ್ಮ ಮೇಲೆ ಬಾಲಿವುಡ್ ನಟ ಅಲೋಕ್ ನಾಥ್ ಅತ್ಯಾಚಾರವೆಸಗಿದ್ದರು ಎಂದು ಆರೋಪಿಸಿರುವ ಬರಹಗಾರ್ತಿ ಹಾಗೂ ನಿರ್ಮಾಪಕಿ ವಿಂತಾ ನಂದಾ. ತಾವು ದಶಕಗಳ ಹಿಂದೆ ಅನುಭವಿಸಿದ ಲೈಂಗಿಕ ಕಿರುಕುಳದ ನೋವನ್ನು ತೋಡಿಕೊಂಡಿದ್ದೆ. ಇಷ್ಟು ವರ್ಷಗಳ ಕಾಲ ಅದನ್ನು ಮೌನವಾಗಿ,ಹೊರಗೆ ತೋರಿಸಿಕೊಳ್ಳದೆ ಎದುರಿಸಿಕೊಂಡು ಬಂದೆ ಎಂದಿದ್ದಾರೆ. ಲೈಂಗಿಕ ಅತ್ಯಾಚಾರ ನಡೆದ ಮೇಲೆ ಕೂಡ ಟಿವಿ ಧಾರವಾಹಿಗಳಿಗೆ ಅಲೋಕ್ ನಾಥ್ ಅವರ ಜೊತೆ ಕೆಲಸ ಮಾಡಿದ್ದೇನೆ. ನಾನು ನಿರ್ದೇಶಕಿಯಾದರೂ ನನ್ನ ಜೊತೆ ಅವರು ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದರು. ಆ ಸಮಯದಲ್ಲಿ ನನಗೆ ತುಂಬಾ ಕಷ್ಟವಾಗುತ್ತಿತ್ತು ಎಂದಿದ್ದಾರೆ. ಅಲೋಕ್ ನಾಥ್ ಈ ಆರೋಪವನ್ನು ಅಲ್ಲಗಳೆದಿದ್ದಾರೆ.ಅವರ ಪತ್ನಿ ನಂದಾ ವಿರುದ್ಧ ಮಾನನಷ್ಟ ಮೊಕದ್ದಮೆ ಕೂಡ ಹಾಕಿದ್ದಾರೆ.

ಇನ್ನು ಸಂಧ್ಯಾ ಮೆನನ್ ಅವರು ತಮ್ಮ ಟ್ವಿಟ್ಟರ್ ಖಾತೆ @TheRestlessQuil ಮೂಲಕ ತಮ್ಮಂತೆ ಲೈಂಗಿಕ ಕಿರುಕುಳಕ್ಕೆ ಒಳಗಾದ ಹಲವರ ಬಗ್ಗೆ ಅದರಲ್ಲಿ ಬರೆದುಕೊಂಡಿದ್ದಾರೆ. 25 ವರ್ಷದವಳಾಗಿದ್ದಾಗ ತಮ್ಮ ಮೇಲೆ ಲೈಂಗಿಕ ಕಿರುಕುಳ ನಡೆದಿತ್ತು ಎಂದಿದ್ದಾರೆ. ಕೆಲಸದ ಸ್ಥಳದಲ್ಲಿ ಹೀಗಾಗಿದ್ದು ಇದರಿಂದ ಸಾಕಷ್ಟು ಗೊಂದಲ, ಸಿಟ್ಟು, ಆತ್ಮ ವಿಶ್ವಾಸ ಕೊರತೆ, ತಾರತಮ್ಯ ಎದುರಿಸಿದೆ ಎನ್ನುತ್ತಾರೆ.

ಲೈಂಗಿಕ ಕಿರುಕುಳಕ್ಕೆ ಒಳಗಾದ 300 ನೇರ ಸಂದೇಶಗಳು ನನ್ನ ಟ್ವಿಟ್ಟರ್ ಖಾತೆಗೆ ಬಂದಿದ್ದು ಅವರಲ್ಲಿ ಪ್ರತಿಯೊಬ್ಬರಲ್ಲಿಯೂ ಅಗತ್ಯಬಿದ್ದರೆ ಕೋರ್ಟ್ ನಲ್ಲಿ ಬಂದು ಹೇಳಬಹುದೇ ಎಂದು ಕೇಳಿದೆ, ಅದಕ್ಕೆ ಒಬ್ಬರನ್ನು ಹೊರತುಪಡಿಸಿ ಬೇರೆಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ಸಂಧ್ಯಾ ಮೆನನ್ ಹೇಳಿದರು.

ಪತ್ರಕರ್ತೆ ಹಾಗೂ ಕೇಂದ್ರದ ಮಾಜಿ ಸಚಿವ ಎಂ ಜೆ ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ತುಶಿತಾ ಪಟೇಲ್ ಕೂಡ ಅನುಭವ ಹಂಚಿಕೊಂಡರು. ಎಂ ಜೆ ಅಕ್ಬರ್ ವಿರುದ್ಧದ ಆರೋಪವನ್ನು ಬೇರೆ ಮಹಿಳೆಯರು ನಿರಾಕರಿಸಿದ್ದು ನನಗೆ ಅವರ ವಿರುದ್ಧ ಸಿಡಿದೇಳಲು ಪ್ರೇರಣೆಯಾಯಿತು. ಖ್ಯಾತ ಪತ್ರಕರ್ತೆ ಬರ್ಖಾ ದತ್ ಅವರಿಗೆ ಸಹ ವರದಿ ಮಾಡಲು ಹೋಗುವ ಸಂದರ್ಭದಲ್ಲಿ ಯುದ್ಧ ಭೂಮಿಗೆ ವರದಿ ಮಾಡಲು ಹೋಗಿದ್ದ ಸಂದರ್ಭದಲ್ಲಿ ಲೈಂಗಿಕ ಕಿರುಕುಳದ ಅನುಭವವಾಗಿತ್ತಂತೆ. ಆದರೆ ಅದನ್ನು ಹೇಳಿದರೆ ಅಂತಹ ವರದಿ ಮಾಡಲು ಹೋಗಲು ಅವಕಾಶ ತಪ್ಪಿಹೋಗುತ್ತದೆ ಎಂಬ ಕಾರಣಕ್ಕೆ ಹೇಳುತ್ತಿರಲಿಲ್ಲವಂತೆ ಎನ್ನುತ್ತಾರೆ ತುಶಿತಾ ಪಟೇಲ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com