ಗೂಳಿಪುರ ನಿವಾಸಿ ಆಟೋ ಚಾಲಕ ಮಹೇಶ್ ಅಲಿಯಾಸ್ ಬೆಳ್ಳಪ್ಪ (26) ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಳೆದ ಎರಡು ವರ್ಷದ ಹಿಂದೆ ನಡೆದ ಅಪಘಾತವೊಂದರ ಸಂಬಂಧ ವಿಚಾರಣೆಗೆ ಹಾಜರಾಗಬೇಕೆಂದು ನ್ಯಾಯಾಲಯದಿಂದ ನೋಟೀಸ್ ಬಂದಿತ್ತು ಎನ್ನಲಾಗಿದ್ದು ನೋಟೀಸ್ ನೋಡಿ ಗಾಬರಿಯಾಗಿದ್ದ ಮಹೇಶ್ "ತಾನು ಜೈಲಿಗೆ ಹೋದರೇನು ಗತಿ!" ಎಂದು ಭಯದಿಂದ ನೇಣಿಗೆ ಶರಣಾಗಿದ್ದಾನೆ.