ಮೈಸೂರು: ಮೃಗಾಲಯದಲ್ಲಿ ಹಾವಿನ ಜೊತೆ ಕಾದಾಡಿ ಪ್ರಾಣ ಕಳೆದುಕೊಂಡ ಚಿರತೆ

ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಭಾನುವಾರ ಮಧ್ಯಾಹ್ನ ಚಿರತೆ (ಜಾಗ್ವಾರ್‌) ಮತ್ತು ನಾಗರಹಾವಿನ ನಡುವೆ ನಡೆದ ಕಾಳಗದಲ್ಲಿ ಚಿರತೆ ...
ಸಾವನ್ನಪ್ಪಿದ ಚಿರತೆ
ಸಾವನ್ನಪ್ಪಿದ ಚಿರತೆ
ಮೈಸೂರು: ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಭಾನುವಾರ ಮಧ್ಯಾಹ್ನ ಚಿರತೆ (ಜಾಗ್ವಾರ್‌) ಮತ್ತು ನಾಗರಹಾವಿನ ನಡುವೆ ನಡೆದ ಕಾಳಗದಲ್ಲಿ ಚಿರತೆ ಸಾವನ್ನಪ್ಪಿದೆ.
ಎಂದಿನಂತೆ ವೀಕೆಂಡ್‌ ಸವಿಯಲು ಪ್ರವಾಸಿಗರು ಭಾನುವಾರ ಮೃಗಾಲಯಕ್ಕೆ ಆಗಮಿಸಿದ್ದರು. ಆದರೆ ಇದ್ದಕ್ಕಿದ್ದಂತೆ ಜಾಗ್ವಾರ್‌ ಇದ್ದ ಆವರಣಕ್ಕೆ ನಾಗರಹಾವೊಂದು ಪ್ರವೇಶಿಸಿದೆ. ಅಲ್ಲದೆ, ಬುಸುಗುಟ್ಟಿದೆ. ಇದರಿಂದ ಕೋಪಗೊಂಡ ಜಾಗ್ವಾರ್‌ ನಾಗರಹಾವಿನ ಮೇಲೆ ದಾಳಿ ಮಾಡಿದೆ. 
ನಾಗರಹಾವು ಅಲ್ಲಿಯೇ ಸುತ್ತಾಡುತ್ತಿದ್ದ ರಾಜು ಹೆಸರಿನ 14 ವರ್ಷದ ಚಿರತೆಯನ್ನು ಕಂಡು ಹೆಡೆಎತ್ತಿ ಬುಸುಗುಟ್ಟಿದೆ. ಸಹಜವಾಗಿ ಗಾಬರಿಗೊಂಡ ಚಿರತೆ ನಾಗರಹಾವಿನ ಮೇಲೆ ಎರಗಿದೆ. ಇದರಿಂದ ಪ್ರತಿ ದಾಳಿ ನಡೆಸಿದ ಹಾವು ಹಲವು ಸಲ ಚಿರತೆಯನ್ನು ಕಚ್ಚಿದೆ. 
ಸಮೀಪದಲ್ಲಿಯೇ ಇದ್ದ ಮೃಗಾಲಯದ ಸಿಬ್ಬಂದಿ ಕಾದಾಟದ ವಿಷಯವನ್ನು ಮೃಗಾಲಯದ ಮೇಲಾಧಿಕಾರಿಗಳು ಹಾಗೂ ಪಶುವೈದ್ಯರಿಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಸ್ಥಳಕ್ಕೆ ಬಂದ ಅಧಿಕಾರಿಗಳು ಜಾಗ್ವಾರ್‌ ರಾಜುನನ್ನು ಜಗಳದಿಂದ ಬಿಡಿಸಿ ಬೋನ್‌ನೊಳಕ್ಕೆ ಸೇರಿಸಿದ್ದಾರೆ.
 ಹಲವಾರು ಬಾರಿ ಹಾವು ಕಚ್ಚಿದ್ದರಿಂದ ವಿಷ ಜಾಗ್ವಾರ್‌ ದೇಹಕ್ಕೆ ಸೇರಿರುವುದನ್ನು ಗಮನಿಸಿದ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಈ ನಡುವೆ ಚಿರತೆ ದಾಳಿಗೊಳಗಾದ ನಾಗರಹಾವು ಸ್ಥಳದಲ್ಲೇ ಸತ್ತಿದೆ. ಮೃಗಾಲಯದಲ್ಲಿರುವ ಪಶು ಆಸ್ಪತ್ರೆಯಲ್ಲಿ ತೀವ್ರ ನಿತ್ರಾಣಗೊಂಡಿದ್ದ ರಾಜು(ಜಾಗ್ವಾರ್‌)ವಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ, ಎರಡು ಗಂಟೆಯ ಬಳಿಕ ಮೃತಪಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com