ಉಪ ಚುನಾವಣೆ: ಐದು ಕ್ಷೇತ್ರಗಳಲ್ಲಿ 54 ಲಕ್ಷ ಮತದಾರರು ಹಕ್ಕು ಚಲಾವಣೆ - ಸಂಜೀವ್ ಕುಮಾರ್

ನವೆಂಬರ್ ಮೂರರಂದು ನಡೆಯಲಿರುವ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಒಟ್ಟಾರೇ, 54 ಲಕ್ಷ ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಲಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್
ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್

ಬೆಂಗಳೂರು: ನವೆಂಬರ್ ಮೂರರಂದು ನಡೆಯಲಿರುವ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಒಟ್ಟಾರೇ, 54 ಲಕ್ಷ ಮತದಾರರು ತಮ್ಮ ಹಕ್ಕು ಚಲಾವಣೆ ಮಾಡಲಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.

ಐದು  ಕ್ಷೇತ್ರಗಳಲ್ಲಿ ಒಟ್ಟಾರೇ 6 ಸಾವಿರದ 453 ಮತಗಟ್ಟೆಗಳನ್ನು  ಸ್ಥಾಪಿಸಲಾಗಿದೆ.  ಮಹಿಳೆಯರಿಗಾಗಿ 57 ಪಿಂಕ್ ಹಾಗೂ ದಿವ್ಯಾಂಗ ಮತದಾರರಿಗಾಗಿ 26 ವಿಶೇಷ ಮತಗಟ್ಟೆಗಳನ್ನು ತೆರೆಯಲಾಗುತ್ತಿದ್ದು,  ಮುಕ್ತ ಹಾಗೂ ಪಾರದರ್ಶಕ ಚುನಾವಣೆಗೆ ಎಲ್ಲಾ ರೀತಿಯ  ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು  ಹೇಳಿದರು.

1. 502 ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಗಳೆಂದು ಗುರ್ತಿಸಲಾಗಿದ್ದು, ಇಂತಹ ಕಡೆಗಳಲ್ಲಿ ವಿಡಿಯೋ  ಚಿತ್ರೀಕರಣ ಮಾಡಲಾಗುತ್ತದೆ. 130 ಮತಗಟ್ಟೆಗಳಲ್ಲಿ ವೆಬ್  ಕಾಸ್ಟಿಂಗ್ ಮಾಡಲಾಗುವುದು ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com