ಪ್ರತಿಮೆಗಳ ನಗರವಾಗಿ ಪರಿವರ್ತನೆಯಾಗುತ್ತಿದೆ ಗಾರ್ಡನ್ ಸಿಟಿ ಬೆಂಗಳೂರು!

ಗಾರ್ಡನ್ ಸಿಟಿ ಎಂದು ಪ್ರಸಿದ್ಧವಾಗಿದ್ದ ಬೆಂಗಳೂರು ಇತ್ತಿಚೆಗೆ ಪ್ರತಿಮೆಗಳ ನಗರವಾಗಿ ಪರಿವರ್ತನೆಯಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೆರ ಹಾಗೂ ಗಾರ್ಡನ್ ಇದ್ದ ಬೆಂಗಳೂರಿನಲ್ಲಿ ಈಗ ಪ್ರತಿಮೆಗಳ ಸಂಖ್ಯೆ ಹೆಚ್ಚಾಗುತ್ತಿದೆ,
ಬೆಂಗಳೂರಿನಲ್ಲಿರುವ ಪ್ರಮುಖ ಪ್ರತಿಮೆಗಳು
ಬೆಂಗಳೂರಿನಲ್ಲಿರುವ ಪ್ರಮುಖ ಪ್ರತಿಮೆಗಳು

ಬೆಂಗಳೂರು: ಗಾರ್ಡನ್ ಸಿಟಿ ಎಂದು ಪ್ರಸಿದ್ಧವಾಗಿದ್ದ ಬೆಂಗಳೂರು ಇತ್ತಿಚೆಗೆ ಪ್ರತಿಮೆಗಳ ನಗರವಾಗಿ ಪರಿವರ್ತನೆಯಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೆರ ಹಾಗೂ ಗಾರ್ಡನ್ ಇದ್ದ ಬೆಂಗಳೂರಿನಲ್ಲಿ ಈಗ ಪ್ರತಿಮೆಗಳ ಸಂಖ್ಯೆ ಹೆಚ್ಚಾಗುತ್ತಿದೆ, ಹಿಂಸಾತ್ಮಕ ಪ್ರತಿಭಟನೆಗಳ ವೇಳೆ ಈ ಪ್ರತಿಮೆಗಳ ರಕ್ಷಣೆ ಜವಾಬ್ದಾರಿ ನಗರ ಪೊಲೀಸರ ಹೆಗಲ ಮೇಲೆ ಬಿದ್ದಿದೆ.ಹಲವು ಸಮುದಾಯಗಳ ಜನತೆ ಹಾಗೂ ಸಂಘಟನೆಗಳು ಮತ್ತು ರಾಜಕಾರಣಿಗಳು ಪ್ರತಿಮೆ ನಿರ್ಮಾಣ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕುತ್ತಾರೆ, ಬೆಂಗಳೂರಿನಲ್ಲಿರುವ ಪ್ರತಿಮೆ ಬಹುತೇಕ ಕಂಚಿನದ್ದಾಗಿವೆ.ಮೊದಲು ಕೇವಲ ಮಹಾತ್ಮ ಗಾಂಧಿ ಮತ್ತು ಡಾ. ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಗಳಿದ್ದವು , ಆದೆ ಇತ್ತೀಚೆಗೆ ಎಲ್ಲಾ ಸಮುದಾಯದವರು ತಮ್ಮ ಸಮುದಾಯದ ಮಹಾತ್ಮರ ಪ್ರತಿಮೆ ನಿರ್ಮಿಸಲು ಮುಂದಾಗುತ್ತಿದ್ದಾರೆ. ಪ್ರತಿಭಟನೆಗಳ ಸಮಯದಲ್ಲಿ ಈ ಪ್ರತಿಮೆಗಳಿಗೆ ರಕ್ಷಣೆ ಕೊಡುವುದು ಪೊಲೀಸರ ಜವಾಬ್ದಾರಿಯಾಗಿದೆ.ಇಂದು ಗುಜರಾತ್ ನಲ್ಲಿ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಬೃಹತ್ ಪ್ರತಿಮೆ ಲೋಕಾರ್ಪಣೆಯಾಗುತ್ತಿದೆ. ಈ ವೇಳೆ ಬೆಂಗಳೂರಿನಲ್ಲಿರುವ ಪ್ರತಿಮೆಗಳು ಹಾಗೂ ಅವುಗಳ ನಿರ್ಮಾಣದ ವೆಚ್ಚದ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸಪ್ರೆಸ್ ವರದಿ ಮಾಡಿದೆ.ಕೆಲ ವರ್ಷಗಳ ಹಿಂದೆ ಗಾಂಧಿನಗರದ ಸಮೀಪವಿರುವ ಸಿಟಿ ರೈಲ್ವೆ ನಿಲ್ದಾಣದ ಬಳಿ ಇದ್ದ ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಮಂದ ಖಡ್ಗ ತೆಗೆದುಕೊಳ್ಳಲು ವಿಫಲ ಯತ್ನ ನಡೆಸಲಾಗಿತ್ತು. ಈ ಸಂಬಂಧ ದೂರು ದಾಖಲಾಗದ ನಂತರ ಪ್ರತಿಮೆ ಕಾಯಲು ಪೊಲೀಸರನ್ನು ನಿಯೋಜಿಸಲಾಗಿತ್ತು.ಪೊಲೀಸರ ನಿಯೋಜನೆ ಜೊತೆಗೆ ಸಿಸಿಟಿವಿ ಅಳವಡಿಕೆಗೂ ಪ್ರಸ್ತಾವನೆ ಸಲ್ಲಿಸಲಾಗಿದೆ, ಬಿಬಿಎಂಪಿ ಅನುಮತಿ ಪಡೆದು ಪ್ರತಿಮೆ ಸ್ಥಾಪಿಸಲಾಗುತ್ತದೆ, ಅಲ್ಲಿ ಸ್ಥಾಪಿಸಿದ ನಂತರ ಅದು ಸಾರ್ಜವನಿಕ ಸ್ವತ್ತಾಗುತ್ತದೆ. ಹೀಗಾಗಿ ಅವುಗಳಿಗೆ ರಕ್ಷಣೆ ನೀಡಬೇಕಾಗುತ್ತದೆ ಎಂದು ಹೆಚ್ಚುವರಿ ಪೊಲೀಸ ಆಯುಕ್ತ ಸೀಮಂತ್ ಕುಮಾರ್ ತಿಳಿಸಿದ್ದಾರೆ.ಅಂತಾರರಾಜ್ಯ. ವಿವಾದಗಳ ವೇಳೆಯಲ್ಲಿ ಉಂಟಾಗುವ ಪ್ರತಿಭಟನೆ ವೇಳೆ ಈ ಪ್ರತಿಮೆಗಳನ್ನೇ ಟಾರ್ಗೆಟ್ ಮಾಡಲಾಗುತ್ತದೆ. ಪ್ರತಿಮೆಗಳಿಗೆ ತೊಂದರೆಯಾಗುತ್ತದೆ. ಸಾರ್ವಜನಿಕರಿಗೆ ಪ್ರತಿಮೆಗಳನ್ನು ರಕ್ಷಿಸಲು ಕಾಯುವ ಕೆಲಸ ನೀಡಲಾಗುತ್ತದೆ. ಪ್ರತಿಮೆಗಳನ್ನು ರಕ್ಷಿಸಲು ಪೊಲೀಸ್ ಕಾವಲು ಹಾಕಲು ನಮ್ಮಲ್ಲಿ ಸಿಬ್ಬಂದಿ ಕೊರತೆಯಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಹಲವು ಸಮುದಾಯಗಲು ಹಾಗೂ ರಾಜಕಾರಣಿಗಳು ವಿವಿಧ ಧರ್ಮದ, ರಾಜಕಾರಣಿಗಳ ಹಾಗೂ ಪ್ರಸಿದ್ಧ ನಾಯಕರ ಪ್ರತಿಮೆ ಸ್ಥಾಪಿಸಲು ಆಸಕ್ತಿ ತೋರುತ್ತಾರೆ, ಆದರೆ,ಅವರು ಬೋಧಿಸದ ತತ್ವ ಆದರ್ಶ ಹಾಗೂ ಮೌಲ್ಯಗಳನ್ನು ಮಾತ್ರ ಪಾಲಿಸುವುದಿಲ್ಲ ಎಂದು ಸಿಟಿಜನ್ ವೇದಿಕೆಯ ಜಂಟಿ ಕಾರ್ಯದರ್ಶಿ ಎನ್ ಮುಕುಂದ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com