ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ: ಒಟ್ಟಾರೆ ಕಾಂಗ್ರೆಸ್ ಗೆ 846 ಗೆಲುವು, ಬಿಜೆಪಿಗೆ 778

ರಾಜ್ಯ ಸ್ಥಳೀಯ ಸಂಸ್ಥೆ ಚುನಾವಣಾ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಇದುವರೆಗೂ ಬಂದಿರುವ ಫಲಿತಾಂಶದಂತೆ ಕಾಂಗ್ರೆಸ್ 846 ಸ್ಥಾನಗಳಲ್ಲಿ ಗೆಲುವು ದಾಖಲಿಸುವುದರೊಂದಿಗೆ ಮುನ್ನಡೆ ಕಾಯ್ದುಕೊಂಡಿದೆ.
ಕಾಂಗ್ರೆಸ್ ಚಿಹ್ಹೆ
ಕಾಂಗ್ರೆಸ್ ಚಿಹ್ಹೆ

ಬೆಂಗಳೂರು :ರಾಜ್ಯ ಸ್ಥಳೀಯ ಸಂಸ್ಥೆ ಚುನಾವಣಾ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಇದುವರೆಗೂ ಬಂದಿರುವ ಫಲಿತಾಂಶದಂತೆ ಕಾಂಗ್ರೆಸ್  846 ಸ್ಥಾನಗಳಲ್ಲಿ ಗೆಲುವು ದಾಖಲಿಸುವುದರೊಂದಿಗೆ ಮುನ್ನಡೆ ಕಾಯ್ದುಕೊಂಡಿದೆ.

ಒಟ್ಟಾರೇ, 2664 ಸ್ಥಾನಗಳ ಪೈಕಿ  2267 ಸ್ಥಾನಗಳ ಫಲಿತಾಂಶ ಈಗಾಗಲೇ ಪ್ರಕಟಗೊಂಡಿದ್ದು,  ಕಾಂಗ್ರೆಸ್ 846 ಸ್ಥಾನಗಳಲ್ಲಿ ವಿಜಯ ಸಾಧಿಸಿದೆ. ಬಿಜೆಪಿ 788 ಹಾಗೂ ಜೆಡಿಎಸ್ 307 ಸ್ಥಾನಗಳಲ್ಲಿ ಜಯ ಗಳಿಸಿದ್ದರೆ ಉಳಿದ  ಸ್ಥಾನಗಳಲ್ಲಿ ಸ್ವತಂತ್ರ  ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ.

ರಾಜ್ಯದ ಮೂರು ನಗರ ಪಾಲಿಕೆಯ  135 ವಾರ್ಡ್, 29 ನಗರ, 53  ಪುರಸಭೆ ಹಾಗೂ 23 ಪಟ್ಟಣ ಪಂಚಾಯಿತಿಯ ಒಟ್ಟು 2, 529 ವಾರ್ಡ್ ಗಳಿಗೆ ಚುನಾವಣೆ ನಡೆದಿತ್ತು. ಈ ಹಿಂದೆ 105 ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಿಸಲಾಗಿತ್ತು.
ಆದಾಗ್ಯೂ, ಭಾರೀ ಮಳೆ ಹಾಗೂ ಪ್ರವಾಹದಿಂದಾಗಿ ಕೊಡಗು ಜಿಲ್ಲೆಯ  ಮೂರು ಕಡೆಗಳಲ್ಲಿ ಚುನಾವಣೆಯನ್ನು ಮುಂದೂಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com