2ನೇ ಶನಿವಾರ ಹೆಚ್ ಡಿ ಕುಮಾರಸ್ವಾಮಿ ಜನತಾದರ್ಶನ ಇರಲ್ಲ -ಮುಖ್ಯಮಂತ್ರಿ ಕಚೇರಿ

ಸೆಪ್ಟೆಂಬರ್ 8 ಎರಡನೇ ಶನಿವಾರವಾಗಿರುವುದರಿಂದ ಅಂದು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರ ಜನತಾ ದರ್ಶನ ಇರುವುದಿಲ್ಲ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಸೆಪ್ಟೆಂಬರ್ 8 ಎರಡನೇ ಶನಿವಾರವಾಗಿರುವುದರಿಂದ ಅಂದು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ  ಅವರ  ಜನತಾ ದರ್ಶನ ಇರುವುದಿಲ್ಲ.

ಅಂದು ಸಾರ್ವತ್ರಿಕ ರಜೆ ಆಗಿರುವುದರಿಂದ ಕುಮಾರಸ್ವಾಮಿ ಅವರು ಜನತಾ ದರ್ಶನ ನಡೆಸುವುದಿಲ್ಲ ಎಂದು ಮುಖ್ಯಮಂತ್ರಿ ಕಚೇರಿಯಿಂದ ಮಾಹಿತಿ  ತಿಳಿದುಬಂದಿದೆ.

ನಂತರ ಮುಂದಿನ ಜನತಾದರ್ಶನದ ದಿನಾಂಕವನ್ನು ತಿಳಿಸಲಾಗುವುದು ಎಂದು ಹೇಳಲಾಗಿದೆ. ಕುಮಾರಸ್ವಾಮಿ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ  ಜನರಿಂದ  ಅಹವಾಲು ಆಲಿಸುತ್ತಾರೆ. ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕೂಡಾ ಒದಗಿಸಿದ್ದಾರೆ.

 ಕೆಲವು ಸಂದರ್ಭಗಳಲ್ಲಿ   ರಾತ್ರಿಯವರೆಗೂ ಜನತಾ ದರ್ಶನ  ವಿಸ್ತರಿಸುವ  ಮೂಲಕ ಕುಮಾರಸ್ವಾಮಿ  ಹೊಸ ದಾಖಲೆಯನ್ನೇ ಬರೆದಿದ್ದು,  ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com