'ಶಿಕ್ಷಕರ ಗ್ರಾಮ' ಗದಗದ ಹುಲ್ಲೂರು: ಪ್ರತಿ ಮನೆಯಲ್ಲಿಯೂ ಒಬ್ಬ ಗುರು!

ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿರುವ ಹುಲ್ಲೂರು ಗ್ರಾಮ ಒಂದು ಅನನ್ಯ ಹಾಗೂ ಭಿನ್ನತೆಯಿಂದ ಕೂಡಿದ ಗ್ರಾಮವಾಗಿದೆ. ಇದು ಶಿಕ್ಷಕರ ಗ್ರಾಮ ಎಂದೇ ಪ್ರಸಿದ್ದವಾಗಿದೆ....
ಹುಲ್ಲುೂರು ಪ್ರಾಥಮಿಕ ಪಾಠಶಾಲೆ
ಹುಲ್ಲುೂರು ಪ್ರಾಥಮಿಕ ಪಾಠಶಾಲೆ
Updated on: 
ಗದಗ: ಗದಗ ಜಿಲ್ಲೆಯ ರೋಣ ತಾಲೂಕಿನಲ್ಲಿರುವ ಹುಲ್ಲೂರು ಗ್ರಾಮ ಒಂದು ಅನನ್ಯ ಹಾಗೂ ಭಿನ್ನತೆಯಿಂದ ಕೂಡಿದ ಗ್ರಾಮವಾಗಿದೆ. ಇದು ಶಿಕ್ಷಕರ ಗ್ರಾಮ ಎಂದೇ ಪ್ರಸಿದ್ದವಾಗಿದೆ. 
ಈ ಗ್ರಾಮದ ಪ್ರತಿ ಮನೆಯಲ್ಲೂ ಒಬ್ಬ ಶಿಕ್ಷಕ ಇದ್ದಾರೆ, ಜೊತೆಗೆ ಶಿಕ್ಷಕರಾಗ ಬೇಕೆಂದು ಹಲವು ಮಂದಿ ಆಸೆ ಹೊಂದಿದ್ದಾರೆ. 
12 ಸಾವಿರ ಮಂದಿ ಜನಸಂಖ್ಯೆ ಇರುವ ಗ್ರಾಮದಲ್ಲಿ  ಸುಮಾರು 1,500 ಮಂದಿ ಶಿಕ್ಷಕರಿದ್ದು, ಕರ್ನಾಟಕದ ಹಲವು ಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ,  ಇದರಲ್ಲಿ ಸುಮಾರು 800 ಮಂದಿ ಸರ್ಕಾರಿ ಶಾಲೆ ಶಿಕ್ಷಕರಾಗಿದ್ದಾರೆ.
ವೃತ್ತಿಯಲ್ಲಿ ಶಿಕ್ಷಕರಾಗಿರುವ ಬಿ.ಎಂ ಮಡಿವಾಳರ್ ಅವರ ಕುಟುಂಬದಲ್ಲಿ ಇನ್ನೂ ಆರು ಮಂದಿ ಟೀಚರ್ ಗಳಿದ್ದು ರಾಜ್ಯದ ಹಲವು ಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ, ಪ್ರತಿಯೊಂದು ಮನೆಯಲ್ಲೂ ಕನಿಷ್ಠ ಪಕ್ಷ ಮೂರು ಮಂದಿ ಶಿಕ್ಷಕರು ಕಾಣ ಸಿಗುತ್ತಾರೆ.
1989 ರಲ್ಲಿ  ಹಿರಿಯ ಶಿಕ್ಷಕರೆಲ್ಲಾ ಸೇರಿ  ಈ ಗ್ರಾಮದಲ್ಲಿ ಸರ್ಕಾರಿ ಶಾಲೆ ತರಲು ಕಾರಣರಾದರು, ಈ ಶಾಲೆಯಿಂದಾಗಿ ಹಲವರಿಗೆ ಶಿಕ್ಷಕರಾಗಲು ಸ್ಪೂರ್ತಿಯಾಗಿದೆ,ಈ ಸರ್ಕಾರಿ ಶಾಲೆ ಹಲವರಿಗೆ ವೃತ್ತಿ ಜೀವನ ಕಂಡುಕೊಳ್ಳಲು ಮಾದರಿಯಾಗಿದೆ,  ಆದರೆ ಶಾಲೆಗೆ ಹಲವು ಸೌಲಭ್ಯಗಳ ಕೊರತೆಯಿದೆ, 
ಇಲ್ಲಿನ ಶಾಲೆಯಲ್ಲಿ  ಉತ್ತಮ ಶಿಕ್ಷಣದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ, ನಾಟಕ, ಜಾನಪದ ಕಲೆಗಳ ಮೂಲಕ ತಿಳಿಸಲಾಗುತ್ತಿದೆ ಎಂದು ಶಿಕ್ಷಕರೊಬ್ಬರು ತಿಳಿಸಿದ್ದಾರೆ.
ಪ್ರತಿ ಮನೆಯಲ್ಲಿ ಒಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಮಂದಿ ಶಿಕ್ಷಕರಿದ್ದಾರೆ, ಕೆಲವು ವಿದ್ಯಾರ್ಥಿಗಳು ಕೂಡ ಈ ವೃತ್ತಿಗೆ ಬರಲು ಆಸಕ್ತಿ ತೋರುತ್ತಿದ್ದಾರೆ,.
ಶಿಕ್ಷಕ ವೃತ್ತಿ ಅಪೂರ್ವವಾದದ್ದು ನಾವು ನಮ್ಮ ಹಿರಿಯವರನ್ನು ಹಿಂಬಾಲಿಸುತ್ತಿದ್ದೇವೆ,  ನಮ್ಮ ವೃತ್ತಿ ಆಯ್ಕೆ ವಿಷಯ ಬಂದರೇ ವನು ಅಂತಿಮವಾಗಿ ಶಿಕ್ಷಕರ ವೃತ್ತಿಯನ್ವೇ ಆರಿಸಿಕೊಳ್ಳುತ್ತೇವೆ ಎಂದು   ರಾಜಾಸಾಹೇಬ್ ಹಳಕೇರಿ ಎಂಬುವರು ಹೇಳಿದ್ದಾರೆ.
ಬೇಸಿಗೆ ರಜೆ ವೇಳೆ, ಈ ಗ್ರಾಮದ ಎಲ್ಲಾ ಶಿಕ್ಷಕರು  ಸೇರಿ ಕಾರ್ಯಕ್ರಮ ಆಯೋಜಿಸಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ        

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com