ಗೌರಿ ಲಂಕೇಶ್ ಹತ್ಯೆ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ; ಮಾಜಿ ಪತಿ ಚಿದಾನಂದ ರಾಜಘಟ್ಟ

ಪತ್ರಕರ್ತೆ ಗೌರಿ ಲಂಕೇಶ್ ಅವರ ಮೊದಲ ವರ್ಷದ ಪುಣ್ಯತಿಥಿ ಸಂದರ್ಭದಲ್ಲಿ ಅವರ ಮಾಜಿ ಪತಿ ...
ಚಿದಾನಂದ ರಾಜಘಟ್ಟ
ಚಿದಾನಂದ ರಾಜಘಟ್ಟ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಅವರ ಮೊದಲ ವರ್ಷದ ಪುಣ್ಯತಿಥಿ ಸಂದರ್ಭದಲ್ಲಿ ಅವರ ಮಾಜಿ ಪತಿ ಚಿದಾನಂದ ರಾಜ್ ಘಟ್ಟ ಅವರ ಜೊತೆ ಸಿಟಿ ಎಕ್ಸ್ ಪ್ರೆಸ್ ಮಾತುಕತೆ ನಡೆಸಿದೆ. ಅವರು ''Illiberal India: Gauri Lankesh and the Age of Unreason ಎಂಬ ಪುಸ್ತಕ ಬರೆದಿದ್ದಾರೆ. ಈ ಸಂದರ್ಭದಲ್ಲಿ ಅವರು ಏನು ಹೇಳಿದ್ದಾರೆ ಕೇಳಿ:

 ಗೌರಿ ಹತ್ಯೆಯ ಇಲ್ಲಿಯವರೆಗಿನ ತನಿಖೆ ಬಗ್ಗೆ ನಿಮಗೇನನ್ನಿಸುತ್ತದೆ?

-ವಿಶೇಷ ತನಿಖಾ ತಂಡ ಈ ನಿಟ್ಟಿನಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿದ್ದು ಈ ನಾಡಿನಲ್ಲಿ ಬುದ್ದಿವಂತಿಕೆಯಿಲ್ಲದ ಬುದ್ಧಿಜೀವಿಗಳನ್ನು ಮಟ್ಟಹಾಕಲು ಬಲಪಂಥೀಯರು ನಡೆಸುತ್ತಿರುವ ಕುತಂತ್ರವನ್ನು ಭೇದಿಸುವಲ್ಲಿ ತನಿಖಾಧಿಕಾರಿಗಳು ಯಶಸ್ವಿಯಾಗುತ್ತಾರೆ ಎಂದು ನನ್ನ ಭಾವನೆ. ಈ ದೇಶದಲ್ಲಿ ಎಡಪಂಥೀಯ ಭಯೋತ್ಪಾದನೆಯಂತೆ ಬಲಪಂಥೀಯ ಭಯೋತ್ಪಾದನೆ ಕೂಡ ಅಪಾಯಕಾರಿ.

ನರೇಂದ್ರ ದಾಬೋಲ್ಕರ್ ಹತ್ಯೆಗೂ, ಗೌರಿ ಹತ್ಯೆಗೂ ಒಂದೇ ಪಿಸ್ತೂಲ್ ಬಳಸಿದ್ದರು ಎಂದು ಸಿಬಿಐ ಅಧಿಕಾರಿಗಳು ಹೇಳುತ್ತಿದ್ದಾರೆ, ನಿಮ್ಮ ಪುಸ್ತಕದಲ್ಲಿ ನಮೂದಿಸಿರುವಂತೆ ಬೇರೆ ಹತ್ಯೆಯ ಸಂಪರ್ಕಗಳ ಸುಳಿವಿಗೆ ಇದು ನೆರವಾಗಬಹುದೇ?
-ಪ್ರತಿಭಟನಾಕಾರರು, ಅಸಮಾಧಾನಕಾರಿ ಬರಹಗಾರರು ಮತ್ತು ಬುದ್ಧಿಜೀವಿಗಳ ಹತ್ಯೆಗಳಿಗೆ ಸಂಬಂಧಿಸಿದ ಎಲ್ಲಾ ನಾಲ್ಕು ಕೇಸುಗಳನ್ನು ನನ್ನ ಪುಸ್ತಕದಲ್ಲಿ ನಮೂದಿಸಿದ್ದೇನೆ. ಕೆ ಎಸ್ ಭಗವಾನ್ ಅವರು ಕೂಡ ಹಿಟ್ ಲಿಸ್ಟ್ ನಲ್ಲಿದ್ದಾರೆ. ಸಮಾಜದಲ್ಲಿ ಏನೇ ಲೋಪದೋಷಗಳು ಕಂಡುಬಂದರೆ ಮಾತುಕತೆ ಮತ್ತು ಸಂವಹನ ಮೂಲಕ ಬಗೆಹರಿಸಿಕೊಳ್ಳದೆ ಹಿಂಸಾತ್ಮಕ ಮಾರ್ಗಗಳ ಮೂಲಕ ಕೆಲವು ವರ್ಗದ ಜನ ತಮ್ಮ ಅಸಮಾಧಾನವನ್ನು ತೋರಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಅವಿದ್ಯಾವಂತ, ಬಡವರನ್ನು ಬಳಸಿಕೊಂಡು ಅವರ ಮನಪರಿವರ್ತಿಸಿ ತಮ್ಮೆಡೆಗೆ ಸೆಳೆದುಕೊಳ್ಳುತ್ತಾರೆ. ಇಂದು ಗೌರಿ ಹತ್ಯೆಯ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ನನಗನಿಸುತ್ತಿದೆ. ಸಾಮೂಹಿಕ ಹತ್ಯೆಯನ್ನು ಸಂಭ್ರಮಿಸುವ ಒಂದು ವರ್ಗದ ಜನ ಇಂದು ಗೌರಿ ಹತ್ಯೆಯಂತಹ ಕೃತ್ಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಸಂಭ್ರಮಿಸುತ್ತಾರೆ,

-ನಿಮಗೆ ಏನಾದರೂ ಬೆದರಿಕೆಗಳು ಬಂದಿವೆಯೇ?
ಇಲ್ಲ, ನಾನು ಬಹಳ ದೂರ ವಾಸಿಸುತ್ತಿದ್ದೇನೆ, ಅನೇಕ ಬಲಪಂಥೀಯವಾದಿಗಳು ವಿದೇಶದಲ್ಲಿ ತಮ್ಮ ವಂಚನೆಯ ಉಗ್ರಗಾಮಿತ್ವವನ್ನು ನಡೆಸಿದರೆ ಅಚ್ಚರಿಪಡಬೇಕಾಗಿಲ್ಲ.

ಇತ್ತೀಚೆಗೆ ವಕೀಲರು ಮತ್ತು ಕಾರ್ಯಕರ್ತರ ಬಂಧನ ಮತ್ತು ಅವರನ್ನು ನಗರದ ನಕ್ಸಲೀಯರು ಎಂದು ಕರೆದಿರುವುದು ನೋಡಿದರೆ ನಾವು ಅನೈತಿಕ ಭಾರತದಲ್ಲಿ ಸಾಗುತ್ತಿದ್ದೇವೆ ಅನಿಸುತ್ತಿದೆಯೇ?
ಹಲವು ದಶಕಗಳಿಂದ ಭಾರತದಲ್ಲಿ ಅನೈತಿಕತೆಯ ಗೆರೆ ಮೂಡಿದೆ. ಅಸಹಿಷ್ಣುತೆ ಮತ್ತು ಅನೈತಿಕತೆ ಖಂಡಿತವಾಗಿಯೂ ಭಾರತದಲ್ಲಿ ಇದೆ. ತರ್ಕಬದ್ಧವಾದ, ಪ್ರಗತಿಪರ, ಆಧುನಿಕ ಸಮಾಜದಲ್ಲಿ ನಾವು ಇರಬೇಕು.

ಇಂದು ಪತ್ರಿಕಾ ಮಾಧ್ಯಮದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆಯೇ? ಯುವ ಪತ್ರಕರ್ತರಿಗೆ ನಿಮ್ಮ ಸಲಹೆಯೇನು?
-ಇಲ್ಲ ನನಗೆ ಹಾಗೆ ಅನಿಸುವುದಿಲ್ಲ, ದೂರದ ದೇಶದಲ್ಲಿ ನಿಂತು ನೋಡಿದಾಗ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯವಿದೆ ಎನಿಸುತ್ತಿದೆ. ಸಾಂಪ್ರದಾಯಿಕ ಪತ್ರಿಕೋದ್ಯಮವಲ್ಲದೆ ಸಾಮಾಜಿಕ ಮಾಧ್ಯಮವೂ ಸಹ ಇದೆ, ಇದು ಅಸ್ತವ್ಯಸ್ತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com