ಸರ್ವ ಶಿಕ್ಷ ಅಭಿಯಾನ ಶಾಶ್ವತ ಮುಚ್ಚಲು ರಾಜ್ಯ ಸರ್ಕಾರ ಮುಂದು?

ಸರ್ವ ಶಿಕ್ಷ ಅಭಿಯಾನ(ಎಸ್ಎಸ್ಎ) ಜಾರಿಗೆ ಬಂದು 18 ವರ್ಷಗಳು ಕಳೆದ ನಂತರ ಕೇಂದ್ರ ಸರ್ಕಾರಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸರ್ವ ಶಿಕ್ಷ ಅಭಿಯಾನ(ಎಸ್ಎಸ್ಎ) ಜಾರಿಗೆ ಬಂದು 18 ವರ್ಷಗಳು ಕಳೆದ ನಂತರ ಕೇಂದ್ರ ಸರ್ಕಾರಿ ಪ್ರಾಯೋಜಿತ ಸರ್ವ ಶಿಕ್ಷ ಅಭಿಯಾನವನ್ನು ಹಣದ ಕೊರತೆ ಹಿನ್ನಲೆಯಲ್ಲಿ ಮುಚ್ಚಲು ರಾಜ್ಯ ಸರ್ಕಾರ ಮುಂದಾಗಿದೆ.

ಕರ್ನಾಟಕ ರಾಜ್ಯದಲ್ಲಿ ಸರ್ವ ಶಿಕ್ಷ ಅಭಿಯಾನವನ್ನು 2000-2001ರಲ್ಲಿ ಜಾರಿಗೆ ತರಲಾಗಿತ್ತು. ಇದರಡಿಯಲ್ಲಿ ಆದರ್ಶ ವಿದ್ಯಾಲಯ, ಕಸ್ತೂರ್ಬ ಬಾಲಿಕ ಬಾಲಕಿಯರ ಶಾಲೆಗಳು, ಶಿಕ್ಷಕರಿಗೆ ತರಬೇತಿ ಮತ್ತು ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಗಣತಿ ಇತ್ಯಾದಿಗಳನ್ನು ಮಾಡಲಾಗುತ್ತಿತ್ತು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಕೇಂದ್ರ ಸರ್ಕಾರ ಪ್ರತಿ ವರ್ಷ ಒಟ್ಟು ಯೋಜನೆ ವೆಚ್ಚ 1,679 ಕೋಟಿ ರೂಪಾಯಿ ಅನುದಾನ ರಾಜ್ಯಕ್ಕೆ ನೀಡಬೇಕಾಗಿತ್ತು. ಆದರೆ ಕೇಂದ್ರದಿಂದ ಕೇವಲ 1,007 ಕೋಟಿ ರೂಪಾಯಿ ಬಂದಿದೆ. ಎಸ್ಎಸ್ಎಯ ಅಧಿಕೃತ ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಕರ್ನಾಟಕಕ್ಕೆ ಸಿಕ್ಕಿರುವ 1,007 ಕೋಟಿ ರೂಪಾಯಿಗಳಲ್ಲಿ ಕೇಂದ್ರ ಸರ್ಕಾರ 577 ಕೋಟಿ ರೂಪಾಯಿಗಳನ್ನು ಅಂದರೆ ಶೇಕಡಾ 57ನ್ನು ಮಾತ್ರ ನೀಡುತ್ತಿದೆ. ಇದು ಒಟ್ಟು ಮೊತ್ತದ 60:40 ಪ್ರಮಾಣದಲ್ಲಿದೆ.

ಈ ವರ್ಷ ಕೇಂದ್ರ ಸರ್ಕಾರ ಕೇವಲ 266 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು ಅದು ಇಡೀ ರಾಜ್ಯಾದ್ಯಂತ ನಡೆಸುವ ಚಟುವಟಿಕೆಗಳಿಗೆ ಸಾಕಾಗುವುದಿಲ್ಲ. ಅನುದಾನದ ಕೊರತೆಯಿಂದಾಗಿ ಎಸ್ಎಸ್ಎಯಡಿ ನಡೆಸುವ ಹಲವು ಚಟುವಟಿಕೆಗಳನ್ನು ವರ್ಷದ ಕೊನೆಗೆ ಮಾಡಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

ಇನ್ನು ಎಸ್ಎಸ್ಎಯಡಿ ನೇಮಕಗೊಂಡ 12 ಸಾವಿರಕ್ಕೂ ಅಧಿಕ ಶಿಕ್ಷಕರಿಗೆ ಕಳೆದ ಆರು ತಿಂಗಳಿನಿಂದ ವೇತನ ಸಿಕ್ಕಿಲ್ಲ. ಕೇಂದ್ರದಿಂದ ಹಣ ಬಿಡುಗಡೆಯಾಗದ ಕಾರಣ ವೇತನ ನೀಡಿಲ್ಲ ಎಂದು ಸರ್ಕಾರ ಈಗಾಗಲೇ ಸ್ಪಷ್ಟೀಕರಣ ನೀಡಿದೆ. ಶಿಕ್ಷಕರಿಗೆ ವೇತನ ನೀಡಲು ಸಾವಿರ ಕೋಟಿಗೂ ಅಧಿಕ ಹಣ ಬೇಕಾಗಿದ್ದು ಕೇಂದ್ರ ಸರ್ಕಾರ ಕೇವಲ 320 ಕೋಟಿ ರೂಪಾಯಿ ಬಿಡುಗಡೆ ಮಾಡಿ ಉಳಿದ ಹಣವನ್ನು ಕರ್ನಾಟಕ ಸರ್ಕಾರವೇ ಭರಿಸುವಂತೆ ಹೇಳಿದೆ.

ಇತ್ತೀಚೆಗೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಕೂಡ ಇದೇ ಮಾತನ್ನು ಹೇಳಿದ್ದರು. ಸರ್ವ ಶಿಕ್ಷ ಅಭಿಯಾನದಡಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ನೇಮಕಗೊಂಡ ಹಲವು ಜನರನ್ನು ಕೆಲಸ ಬಿಡುವಂತೆ ಹೇಳಲಾಗಿದೆ. ಕೇಂದ್ರದಿಂದ ಅನುದಾನ ಬಂದಿಲ್ಲ ಹೀಗಾಗಿ ಸಿಬ್ಬಂದಿಗೆ ವೇತನ ಕೂಡ ನೀಡಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಕೇಂದ್ರ ಸರ್ಕಾರದ ಜೊತೆ ನಾವು ಏಕೆ ಸಹಭಾಗಿತ್ವ ಹೊಂದಿರಬೇಕು ಎಂದು ಕೇಳಿದ್ದರು.

ಹೊಸ ಆಂತರಿಕ ಯೋಜನೆ: ಈ ಮಧ್ಯೆ ಕೇಂದ್ರ ಸರ್ಕಾರ ಕೂಡ ಸರ್ವ ಶಿಕ್ಷ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷ ಅಭಿಯಾನ(ಆರ್ ಎಂಎಸ್ಎ) ಯೋಜನೆಗಳನ್ನು ಸಮಗ್ರ ಶಿಕ್ಷ ಯೋಜನೆ ಎಂದು ಒಟ್ಟು ಸೇರಿಸಲು ಮುಂದಾಗಿದೆ. ಅಭಿಯಾನವನ್ನು ಹೊಸ ಯೋಜನೆಯನ್ನು ಸೇರಿಸುತ್ತಿಲ್ಲ, ಏಕೆಂದರೆ ನಂತರ ಬೇಡವೆಂದರೆ ಅದನ್ನು ಹಿಂತೆಗೆದುಕೊಳ್ಳಲು ಕಷ್ಟವಾಗುತ್ತದೆ ಎಂದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com