ತಿರುಪತಿಗೆ ಚಿನ್ನಾಭರಣ, ಸಂಪತ್ತು ದಾನ ಮಾಡಿದ್ದ ಕೃಷ್ಣದೇವರಾಯ; ಶಾಸನ ಮಾಹಿತಿ

ವಿಜಯನಗರ ಸಾಮ್ರಾಜ್ಯದ ರಾಜ ಕೃಷ್ಣದೇವರಾಯ ತಿರುಪತಿಯ ತಿರುಮಲ ದೇವಸ್ಥಾನಕ್ಕೆ ನೀಡಿದ್ದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬಳ್ಳಾರಿ: ವಿಜಯನಗರ ಸಾಮ್ರಾಜ್ಯದ ರಾಜ ಕೃಷ್ಣದೇವರಾಯ ತಿರುಪತಿಯ ತಿರುಮಲ ದೇವಸ್ಥಾನಕ್ಕೆ ನೀಡಿದ್ದ ಕೊಡುಗೆ ಮತ್ತು ಆಭರಣಗಳ ಬಗ್ಗೆ ವಿವರ ನೀಡಬೇಕೆಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ವಿವರ ಕೇಳಿದ್ದ ಹಿನ್ನಲೆಯಲ್ಲಿ, ಪ್ರತಿಕ್ರಿಯೆ ನೀಡಿರುವ ಇತಿಹಾಸತಜ್ಞರು ಕೃಷ್ಣದೇವರಾಯ ಅಪಾರ ಪ್ರಮಾಣದ ಚಿನ್ನವನ್ನು ದೇವರಿಗೆ ನೀಡಿದ್ದರು ಎಂದು ಹೇಳಿದ್ದಾರೆ.

ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ತಿರುಪತಿಯ ವೆಂಕಟೇಶ್ವರ ದೇವಾಲಯಕ್ಕೆ ನೀಡಿದ್ದ ಕೊಡುಗೆಗಳು ಮತ್ತು ದಾನಗಳ ಬಗ್ಗೆ ಶಾಸನಗಳ ಏಳು ಸಂಪುಟಗಳಿವೆ. ಅದರಲ್ಲಿ ಒಂದು ಇಡೀ ಸಂಪುಟ ಕೃಷ್ಣದೇವರಾಯ ನೀಡಿರುವ ದಾನ ಮತ್ತು ಕೊಡುಗೆಗಳ ಬಗ್ಗೆ ಇವೆ. ಅದರಲ್ಲಿ ಚಿನ್ನದ ದಾನದ ಬಗ್ಗೆ ಕೂಡ ಪ್ರಸ್ತಾಪವಿದೆ ಎಂದು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ಇಲಾಖೆಯ ಪ್ರೊ ಸಿ ಎಸ್ ವಾಸುದೇವನ್ ಹೇಳುತ್ತಾರೆ.

ತಿರುಪತಿಯ ತಿರುಮಲಾದೇವಿ ಮತ್ತು ಚಿನ್ನದೇವಿಯಿಂದ ಹಿಡಿದು ವೆಂಗದಾಮ್ ದೇವರವರೆಗೆ ರಾಜರು ಮತ್ತು ಅವರ ಪತ್ನಿ ರಾಣಿಯರು ನೀಡಿದ ದಾನಗಳ ಬಗ್ಗೆ ವಿವರ ನೀಡುವ 400ಕ್ಕೂ ಹೆಚ್ಚು ಶಾಸನಗಳಿದ್ದು ಅದರಲ್ಲಿ ಕೃಷ್ಣದೇವರಾಯ ಮಾಡಿರುವ ದಾನಗಳ ಬಗ್ಗೆ ಪಟ್ಟಿಯಿದೆ. ದೇವಸ್ಥಾನದ ಶಾಸನಗಳಲ್ಲಿ ಇತಿಹಾಸ ದಾಖಲೆಗಳು ತಿರುಮುಡಿ(ಕಿರೀಟ) ಉದರಬಂದಮ್(ಸೊಂಟ ಪಟ್ಟಿ), ಬಾಹುವಲಂ(ತೋಳಿನ ಆಭರಣ), ತಿರುಚಂದನಂ(ಬ್ರೇಸ್ ಲೆಟ್), ಕಾರೈ(ಕಾಲಂದಿಗೆ), ಪದತಯಾಲಂ(ಬೆಲ್ಟ್ ನೊಂದಿಗಿನ ಕಾಲಂದಿಗೆ), ನವರತ್ನ ಪ್ರಭಾವಳಿ ಮತ್ತು ಚಿನ್ನದ ಟೊಪ್ಪಿ ಹಾಗೂ ಬೆಲೆಬಾಳುವ ಕಲ್ಲುಗಳನ್ನು ದಾನ ನೀಡಿರುವ ಬಗ್ಗೆ ದಾಖಲೆಗಳಿವೆ.

ಅನಂತಪುರದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಮಾಜಿ ಉಪನ್ಯಾಸಕ ಸೇಶ ಶಾಸ್ತ್ರಿ ಹೇಳುವ ಪ್ರಕಾರ, ಕೃಷ್ಣದೇವರಾಯನ ಅಚ್ಚುಮೆಚ್ಚಿನ ದೇವರಾದ ವೆಂಗದಮ್ ದೇವರು ವಜ್ರ ಮತ್ತು ಕೆಂಪು ಕಲ್ಲುಗಳಿಂದ ಅಲಂಕರಿಸಿದ ಕಿರೀಟವನ್ನು ಕೃಷ್ಣದೇವರಾಯರು ದಾನ ಮಾಡಿದ್ದರು. ರಾಜ ನೀಡಿದ ಚಿನ್ನ ಮತ್ತು ವಜ್ರಗಳ ಬಗ್ಗೆ ಶಾಸನಗಳಲ್ಲಿ ನಮೂದಾಗಿದ್ದು ಅದು ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿವೆ.

ಈ ಶಾಸನಗಳಲ್ಲಿ ವ್ಯಾಪಕ ಆಳ ಅಧ್ಯಯನ ಮಾಡಿರುವ ಪ್ರೊ ಶಾಸ್ತ್ರಿ, ಕೃಷ್ಣದೇವರಾಯರು ತಿರುಪತಿಗೆ 1515ರ ಅಕ್ಟೋಬರ್ 25ರಂದು ಭೇಟಿ ನೀಡಿದ್ದು ಮತ್ತೊಂದು ದಾಖಲೆಯಲ್ಲಿ  ಕ್ರಿ.ಶ 1517ರ ಜನವರಿ 2ರಂದು ಮತ್ತು 1518ರ ಸೆಪ್ಟೆಂಬರ್ 9ರಂದು ಭೇಟಿ ನೀಡಿದ್ದರು ಎಂದು ಹೇಳುತ್ತದೆ.

ಪ್ರಚಾರ ಮಾಡುವ ಸಂದರ್ಭದಲ್ಲಿ ತಿರುಮಲಕ್ಕೆ ಹೋಗುವುದು ಕೃಷ್ಣದೇವರಾಯನಿಗೆ ರೂಢಿಯಾಗಿತ್ತು. ಪ್ರತಾಪ್ ರುದ್ರ ಗಜಪತಿರಾಯನನ್ನು ಸೋಲಿಸಿದ ನಂತರ ತಿರುಮಲಕ್ಕೆ ಭೇಟಿ ನೀಡಿದ್ದರು ಎಂದು ಒಂದು ಶಾಸನ ಹೇಳುತ್ತದೆ. ಉದಯಗಿರಿಯನ್ನು ಸೋಲಿಸಿದ್ದನ್ನು ಕೂಡ ಸಾರುತ್ತದೆ. 1436ರಲ್ಲಿ ಆಷಾಢ ಮಾಸದ ಗುರುವಾರ ತಿರುಮಲಕ್ಕೆ ಭೇಟಿ ನೀಡಿ 30 ಸಾವಿರ ಚಿನ್ನದ ರೊಕ್ಕ, ಗದ್ಯನ ಮತ್ತು ವರಾಹ(ವಿಜಯನಗರದ ಚಿಹ್ನೆಯಿರುವ ನಾಣ್ಯ) ಗಳನ್ನು ನೀಡಿದ್ದರು ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com