• Tag results for ತಿರುಪತಿ

ತಿರುಪತಿ 'ಟ್ರಯಲ್' ದರ್ಶನ ಪಡೆದಿದ್ದ ಭಕ್ತನಿಗೆ ಕೊರೋನಾ ಪಾಸಿಟಿವ್: ಸಂಪರ್ಕಕ್ಕೆ ಸಿಗದೇ ಸೋಂಕಿತ ನಾಪತ್ತೆ

ತಿರುಪತಿ ತಿರುಮಲ ದೇವಾಲಯದಲ್ಲಿ ದೇವರ ದರ್ಶನ ಪಡೆದಿದ್ದ ವ್ಯಕ್ತಿಯೊಬ್ಬರಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದ್ದು. ತಿರುಮಲದ ಬಾಲಾಜಿ ನಗರದ ನಿವಾಸಿಯಾದ ಆತ ಕಾಣೆಯಾಗಿದ್ದಾನೆ.

published on : 16th June 2020

ಭದ್ರತಾ ಸಿಬ್ಬಂದಿಗೆ ಕೊರೋನಾ ಸೋಂಕು: ಪ್ರಸಿದ್ಧ 'ಕಾಣಿಪಾಕಂ' ದೇಗುಲ ತಾತ್ಕಾಲಿಕ ಬಂದ್

ಭದ್ರತಾ ಸಿಬ್ಬಂದಿಗೆ ಕೊರೋನಾ ಸೋಂಕು ಒಕ್ಕರಿಸಿದ ಹಿನ್ನಲೆಯಲ್ಲಿ ಆಂಧ್ರ ಪ್ರದೇಶದ ಕಾಣಿಪಾಕಂನಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಸ್ವಯಂಭು ವರಸಿದ್ಧಿ ವಿನಾಯಕ ಸ್ವಾಮಿ ದೇಗುಲವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

published on : 15th June 2020

ಟಿಟಿಡಿ ಸಿಬ್ಬಂದಿಯಲ್ಲಿ ಕೊರೋನಾ ಪಾಸಿಟಿವ್: ತಿರುಪತಿ ಶ್ರೀ ಗೋವಿಂದರಾಜ ಸ್ವಾಮಿ ದೇಗುಲ ಬಂದ್

ಟಿಟಿಡಿ ಸಿಬ್ಬಂದಿಯೊಬ್ಬರಲ್ಲಿ ಕೊರೋನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ತಿರುಪತಿ ಶ್ರೀ ಗೋವಿಂದರಾಜ ಸ್ವಾಮಿ ದೇವಾಲಯವನ್ನು ಬಂದ್ ಮಾಡಲಾಗಿದೆ ಎಂದು ಶುಕ್ರವಾರ ತಿಳಿದುಬಂದಿದೆ. 

published on : 12th June 2020

ತಿರುಪತಿ ತಿಮ್ಮಪ್ಪನ ದರ್ಶನ ಆರಂಭ: ಪ್ರತಿನಿತ್ಯ 6 ಸಾವಿರ ಭಕ್ತರಿಗೆ ಮಾತ್ರ ಅವಕಾಶ

ಕೊರೋನಾ ಲಾಕ್​ಡೌನ್​​ನಿಂದ ಬಂದ್​ ಆಗಿದ್ದ ತಿರುಪತಿ ತಿಮ್ಮಪ್ಪನ ಸಾರ್ವಜನಿಕರ ದರ್ಶನಕ್ಕೆ ಇಂದಿನಿಂದ ಅವಕಾಶ ಮಾಡಿಕೊಡಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಆಂಧ್ರಪ್ರದೇಶ ಸರ್ಕಾರದ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳ ನಡುವೆ ತಿಮ್ಮಪ್ಪನ ದರ್ಶನಕ್ಕೆ ಸೀಮಿತ ಸಂಖ್ಯೆಯ ಭಕ್ತರಿಗೆ ಅವಕಾಶ ನೀಡಲಾಗಿದೆ. 

published on : 11th June 2020

ಜೂನ್ 11 ರಿಂದ ತಿರುಪತಿ ತಿಮ್ಮಪ್ಪನ ದರ್ಶನ ಆರಂಭ, ನಿತ್ಯ 6 ಸಾವಿರ ಭಕ್ತರಿಗೆ ಮಾತ್ರ ಅವಕಾಶ

ಕೊರೋನಾ ವೈರಸ್ ಲಾಕ್'ಡೌನ್ ಪರಿಣಾಮ ಕಳೆದ ಮಾರ್ಚ್ 20ರಿಂದ ಭಕ್ತರ ಪಾಲಿಗೆ ಬಂದ್ ಆಗಿದ್ದ ತಿರುಪತಿ ತಿಮ್ಮಪ್ಪನ ದರ್ಶನ ಮತ್ತೆ ಜೂನ್ 11ರಿಂದ ಆರಂಭವಾಗುತ್ತಿದ್ದು, ನಿತ್ಯ 6 ಸಾವಿರ ಭಕ್ತರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ.

published on : 5th June 2020

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ 3 ದಿನ ಪ್ರಾಯೋಗಿಕವಾಗಿ ಸಿಬ್ಬಂದಿಗೆ ಮಾತ್ರ ಪ್ರವೇಶಕ್ಕೆ ಅವಕಾಶ

ಕೊರೋನಾ ವೈರಸ್ ಲಾಕ್'ಡೌನ್ ಪರಿಣಾಮ ಮಾ,.20ರಿಂದ ಭಕ್ತರ ಪಾಲಿಗೆ ಬಂದ್ ಆಗಿದ್ದ ತಿರುಮಲದ ವೆಂಕಟೇಶ್ವರ ದೇವಾಲಯ ಜೂನ್.8ರಿಂದು ಬಾಗಿಲು ತೆರೆಯಲಿದೆ. 

published on : 3rd June 2020

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ  ಜೂನ್ 8 ರಿಂದ ಅನುಮತಿ..?

ಕೇಂದ್ರ ಸರ್ಕಾರ ಕಂಟೈನ್ ಮೆಂಟ್ ಪ್ರದೇಶಗಳ ಹೊರಗೆ ಎಲ್ಲ ರೀತಿಯ ನಿರ್ಬಂಧಗಳಲ್ಲಿ ಸಡಿಲಿಕೆ  ಪ್ರಕಟಿಸಿರುವ ಹಿನ್ನಲೆಯಲ್ಲಿ ಜೂನ್ 8 ರಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಭಕ್ತಾದಿಗಳಿಗೆ ಅನುಮತಿಸುವ ಅವಕಾಶವಿದೆ. 

published on : 30th May 2020

ತಿರುಪತಿ ದೇವಸ್ಥಾನದ ಆಸ್ತಿ ಮಾರಾಟ: ಸರ್ಕಾರೇತರ ಸಮಿತಿ ರಚಿಸಲು ಶ್ರೀರಾಮಸೇನೆ ಆಗ್ರಹ

ಬೆಂಗಳೂರು: ತಿರುಪತಿ ದೇವಸ್ಥಾನದ ಆಸ್ತಿ ಮಾರಾಟ ಮಾಡುವ ನಿರ್ಧಾರಕ್ಕೆ ತಡೆಯಾಜ್ಞೆ ನೀಡಿ ಭಕ್ತರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿರುವ ಆಂಧ್ರಪ್ರದೇಶ ಸರ್ಕಾರದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಶ್ರೀರಾಮ ಸೇನೆ, ಆಸ್ತಿ ಮಾರಾಟಕ್ಕಾಗಿ ಸಾಧುಸಂತರು, ಭಕ್ತರು, ವಿದ್ವಾಂಸರ ಸರ್ಕಾರೇತರ ಸಮಿತಿ ರಚಿಸಲು ಆಗ್ರಹಿಸುವಂತೆ ಆಂಧ್ರಪ್ರದೇಶ ರಾಜ್ಯಪಾಲರಿಗೆ ಮನವಿ...

published on : 27th May 2020

ತಿರುಮಲದ ಭಕ್ತರಿಗೆ ಶುಭಸುದ್ದಿ! ಚೆನ್ನೈ, ಬೆಂಗಳೂರು, ಹೈದರಾಬಾದ್ ಗಳಲ್ಲಿ ಪವಿತ್ರ ಲಡ್ಡು ಪ್ರಸಾದ ಶೀಘ್ರ ಲಭ್ಯ

ಕೊರೋನಾವೈರಸ್ ಲಾಕ್‌ಡೌನ್ ಹೊರತಾಗಿಯೂ, ತಿರುಮಲ ವೆಂಕಟೇಶ್ವರನ ಭಕ್ತಾದಿಗಳು  ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ ಮತ್ತು ಆಂಧ್ರಪ್ರದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಬ್ಸಿಡಿ ದರದಲ್ಲಿ ಪವಿತ್ರ 'ಲಡ್ಡು ಪ್ರಸಾದಗಳನ್ನು ಪಡೆಯಲಿದ್ದಾರೆ ಎಂದು ದೇವಾಲಯದ ಕಾರ್ಯಕಾರಿ ಅಧಿಕಾರಿಗಳು ಹೇಳಿದ್ದಾರೆ.   

published on : 20th May 2020

ಕೊರೋನಾ ವೈರಸ್: ತಬ್ಲೀಘಿಗಳೂ ಸೇರಿದಂತೆ ವೈರಸ್ ಶಂಕಿತ ಸೋಂಕಿತರಿಗೆ ಚಿಕಿತ್ಸೆ ನೀಡಲು ಛತ್ರಗಳನ್ನು ಬಳಸಿ: ಟಿಟಿಡಿ

ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಮಾರಕ ಕೊರೋನಾ ವೈರಸ್ ಹಾವಳಿ ಹೆಚ್ಚಾಗಿರುವಂತೆಯೇ ಇತ್ತ ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ತನ್ನ ಟಿಟಿಡಿ ಛತ್ರಗಳನ್ನೇ ಕ್ವಾರಂಟೈನ್ ಕೇಂದ್ರಗಳಾಗಿ ಬಳಸಿಕೊಳ್ಳುವಂತೆ ಸರ್ಕಾರಕ್ಕೆ ಹೇಳಿದೆ.

published on : 7th April 2020

ಜಗತ್ತಿನ ಎಲ್ಲ ಜನರ ಆರೋಗ್ಯಕ್ಕಾಗಿ ತಿರುಮಲದಲ್ಲಿ 26 ರಿಂದ ಮೂರು ದಿನಗಳ ಧನ್ವಂತರಿ ಮಹಾಯಾಗ

ಜಗತ್ತಿನ ಎಲ್ಲ ಜನರ ಆರೋಗ್ಯರಕ್ಷಣೆಗಾಗಿ ಈ ತಿಂಗಳ 26 ರಿಂದ 28ರವರೆಗೆ ಧನ್ವಂತರಿ ಮಹಾಯಾಗ ನಡೆಸಲಾಗುವುದು ಎಂದು ತಿರುಮಲ ತಿರುಪತಿ ದೇವಸ್ಥಾನ  ಶುಕ್ರವಾರ  ಪ್ರಕಟಿಸಿದೆ. 

published on : 20th March 2020

ತಿರುಮಲದಲ್ಲಿ ಶಂಕಿತ ಸೋಂಕಿತನ ಪ್ರವೇಶ: ತಿಮ್ಮಪ್ಪನ ದೇಗುಲ ಸ್ವಚ್ಛತಾ ಕಾರ್ಯಕ್ಕೆ ಮುಸ್ಲಿಂ ಭಕ್ತನ ಸಾಥ್, ಸ್ಪ್ರೇಯರ್ ಕೊಡುಗೆ!

ಖ್ಯಾತ ಧಾರ್ಮಿಕ ಯಾತ್ರಾ ತಾಣ ತಿರುಪತಿ ತಿರುಮಲ ದೇಗುಲಕ್ಕೆ ಕೊರೋನಾ ವೈರಸ್ ಸೋಂಕಿತ ಶಂಕಿತ ವ್ಯಕ್ತಿ ಪ್ರವೇಶ ಮಾಡಿರುವ ಬೆನ್ನಲ್ಲೇ ದೇಗುಲ ಆಡಳಿತ ಮಂಡಳಿ ಟಿಟಿಡಿ, ದೇಗುಲದ ಸ್ವಚ್ಛತಾ ಕಾರ್ಯ ಆರಂಭಿಸಿದ್ದು, ಈ ಕಾರ್ಯಕ್ಕೆ ಮುಸ್ಲಿಂ ಭಕ್ತರೊಬ್ಬರು ಸಾಥ್ ನೀಡಿದ್ದಾರೆ.

published on : 20th March 2020

ತಿಮ್ಮಪ್ಪನಿಗೂ ಕೊರೋನಾ ಎಫೆಕ್ಟ್: ಶಂಕಿತ ವ್ಯಕ್ತಿ ದೇಗುಲ ಪ್ರವೇಶ, ತಿರುಮಲ ಬಂದ್

ವಿಶ್ವದ ಶ್ರೀಮಂತ ದೇಗುಲ ಮತ್ತು ಪವಿತ್ರ ಯಾತ್ರಾ ಸ್ಥಳ ತಿರುಪತಿ ತಿರುಮಲದಲ್ಲೂ ಕೊರೋನಾ ಭೀತಿ ಆರಂಭವಾಗಿದ್ದು, ಕೊರೋನಾ ಶಂಕಿತ ವ್ಯಕ್ತಿಯೊಬ್ಬರು ದೇಗುಲಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತಿಮ್ಮಪ್ಪನ ದರ್ಶನ ಬಂದ್ ಮಾಡಲು ನಿರ್ಧರಿಸಲಾಗಿದೆ.

published on : 19th March 2020

ತಿಮ್ಮಪ್ಪನಿಗೂ ಕೊರೋನಾ ಎಫೆಕ್ಟ್: ಸೋಂಕಿತನಿಂದ ದೇಗುಲ ಪ್ರವೇಶ, ಭಕ್ತರು ವಾಪಸ್, ತಿರುಮಲ ಬಂದ್?

ವಿಶ್ವದ ಶ್ರೀಮಂತ ದೇಗುಲ ಮತ್ತು ಖ್ಯಾತ ಪವಿತ್ರ ಯಾತ್ರಾ ಸ್ಥಳ ತಿರುಪತಿ ತಿರುಮಲದಲ್ಲೂ ಕೊರೋನಾ ಭೀತಿ ಆರಂಭವಾಗಿದ್ದು, ಕೊರೋನಾ ಸೋಂಕಿತ ವ್ಯಕ್ತಿ ದೇಗುಲ ಭೇಟಿ ನೀಡಿದ್ದ ಆಘಾತಕಾರಿ ಅಂಶ ಇದೀಗ ಬೆಳಕಿಗೆ ಬಂದಿದೆ.

published on : 19th March 2020

ವ್ಯಾಪಕವಾಗಿ ಹರಡಿದ ಕೊರೋನಾ: ವಿದೇಶಿಯರು, ಎನ್ಆರ್'ಐಗಳಿಗೆ ಟಿಟಿಡಿ ನಿರ್ಬಂಧ

ವಿಶ್ವದಾದ್ಯಂತ ಮಾರಕ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಕ್ರತಾ ಕ್ರಮಗಳನ್ನು ಕೈಗೊಳ್ಳುತ್ತಿರುವ ತಿರುಪತಿ ತಿರುಮಲ ದೇವಸ್ಥಾನ ಆಡಳಿತ ಮಂಡಳಿ (ಟಿಟಿಡಿ), ವಿದೇಶಿಯರು ಹಾಗೂ ಅನಿವಾಸಿ ಭಾರತೀಯರಿಗೆ ತಿರುಪತಿ ದರ್ಶನಕ್ಕೆ ನಿರ್ಬಂಧ ಹೇರಿದೆ. 

published on : 11th March 2020
1 2 3 >