

ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಶ್ರೀ ಗೋವಿಂದರಾಜ ಸ್ವಾಮಿ ದೇವಸ್ಥಾನದಲ್ಲಿ ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ಗಲಾಟೆ ನಡೆಸಿರುವ ಘಟನೆ ನಡೆದಿದೆ. ಭದ್ರತಾ ಸಿಬ್ಬಂದಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ಈತ ದೇವಸ್ಥಾನದ ಗೋಡೆ ಹತ್ತಿ ಮದ್ಯದ ಬಾಟಲಿಗೆ ಬೇಡಿಕೆ ಇಟ್ಟಿದ್ದಾನೆ.
45 ವರ್ಷದ ಕುಟ್ಟಡಿ ತಿರುಪತಿ ಎಂದು ಗುರುತಿಸಲಾದ ವ್ಯಕ್ತಿ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಕೂರ್ಮವಾಡದಲ್ಲಿರುವ ಪೆದ್ದಮಲ್ಲ ರೆಡ್ಡಿ ಕಾಲೋನಿಯ ನಿವಾಸಿ. ಕುಟ್ಟಡಿ ದೇವಾಲಯದ ಭದ್ರತೆಯಿಂದ ತಪ್ಪಿಸಿಕೊಂಡು ಗೋಡೆಗಳನ್ನು ಹತ್ತಿದ್ದಾನೆ.
ಗೋಡೆ ಹತ್ತುತ್ತಿದ್ದಂತೆ, ಜಾಗೃತ ಸಿಬ್ಬಂದಿ ಗಮನಿಸಿದ್ದಾರೆ. ದೇವಾಲಯದ ಗೋಪುರ ಹತ್ತಿ ಕಲಶ ಮುಟ್ಟಿದ್ದಾರೆ. ಕೆಳಗೆ ಬರಲು ಕೇಳಿದಾಗ, ಕುಟ್ಟಡಿ ಕ್ವಾರ್ಟರ್ ಬಾಟಲ್ ಮದ್ಯ ಕೊಡಿ ಎಂದು ಕೇಳಿದ್ದಾರೆ, ಅದು ಸಿಕ್ಕಿದರೆ ಕೆಳಗೆ ಬರುತ್ತೇನೆ ಎಂದು ಹೇಳಿದ್ದಾನೆ.
ಆತನಿಗೆ ಮದ್ಯದ ಬಾಟಲ್ ನೀಡಿ ಕೆಳಗೆ ಇಳಿಸಿ ತಿರುಪತಿ ಪೂರ್ವ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿರುಪತಿ ಪೂರ್ವ ಡಿಎಸ್ಪಿ ಎಂ ಭಕ್ತವತ್ಸಲಂ ನಾಯ್ಡು ಹೇಳಿದರು.
Advertisement