Video: ಮಹಾಪಚಾರ, ಪವಿತ್ರ ತಿರುಮಲದಲ್ಲಿ ಮಾಂಸಾಹಾರ ಸೇವಿಸಿದ 'ಸಿಬ್ಬಂದಿಗಳು', TTD ಕಠಿಣ ಕ್ರಮ

ತಿರುಮಲದ ಅಲಿಪಿರಿ ಕಾಲುದಾರಿ ಸಮೀಪ ಮಾಂಸಾಹಾರ ಸೇವಿಸಿದ ಆರೋಪದ ಮೇಲೆ ಇಬ್ಬರು ಹೊರಗುತ್ತಿಗೆ ನೌಕರರನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ವಜಾಗೊಳಿಸಿದೆ.
TTD dismisses two outsourced employees for consuming non-vegetarian food at Alipiri
ಪವಿತ್ರ ತಿರುಮಲದಲ್ಲಿ ಸಿಬ್ಬಂದಿಯಿಂದ ಮಾಂಸಾಹಾರ ಭಕ್ಷಣೆ
Updated on

ತಿರುಪತಿ: ಹಿಂದೂಗಳ ಖ್ಯಾತ ಪವಿತ್ರ ಧಾರ್ಮಿಕ ಯಾತ್ರಾತಾಣ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಮತ್ತೊಂದು ಮಹಾಪಾಚಾರ ವೆಸಗಲಾಗಿದ್ದು, ಅಲ್ಲಿನ ಸಿಬ್ಬಂದಿಗಳೇ ಪವಿತ್ರ ಬೆಟ್ಟಗಳ ಮೇಲೆ ಮಾಂಸಾಹಾರ ಸೇವಿಸಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.

ತಿರುಮಲದ ಅಲಿಪಿರಿ ಕಾಲುದಾರಿ ಸಮೀಪ ಮಾಂಸಾಹಾರ ಸೇವಿಸಿದ ಆರೋಪದ ಮೇಲೆ ಇಬ್ಬರು ಹೊರಗುತ್ತಿಗೆ ನೌಕರರನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ವಜಾಗೊಳಿಸಿದೆ. ಮಾತ್ರವಲ್ಲದೇ ಈ ಸಂಬಂಧ ತಿರುಮಲದ ಎರಡು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.

ಅಲಿಪಿರಿಯಿಂದ ತಿರುಮಲಕ್ಕೆ ಹೋಗುವ ಕಾಲುದಾರಿ ಬಳಿ ಮಾಂಸಾಹಾರ ಆಹಾರ ಸೇವಿಸಿದ ಇಬ್ಬರು ಹೊರಗುತ್ತಿಗೆ ನೌಕರರಾದ ರಾಮಸ್ವಾಮಿ ಮತ್ತು ಸರಸಮ್ಮ ಎಂಬುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ಇಬ್ಬರನ್ನೂ ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಟಿಟಿಡಿ ಅಧಿಕೃತ ಪ್ರಕಟಣೆ ತಿಳಿಸಿದೆ.

ಆಂದ್ರಪ್ರದೇಶ ದಾನ ಮತ್ತು ದತ್ತಿ ಕಾಯ್ದೆಯ ಸೆಕ್ಷನ್ 114ರ ಅಡಿಯಲ್ಲಿ ಹೊರಗುತ್ತಿಗೆ ನೈರ್ಮಲ್ಯ ಕಾರ್ಮಿಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಪ್ರಾರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

TTD dismisses two outsourced employees for consuming non-vegetarian food at Alipiri
ಚಪ್ಪಲಿ ಧರಿಸಿ ವೆಂಕಟೇಶ್ವರ ಸ್ವಾಮಿ ದೇಗುಲ ಮುಖ್ಯದ್ವಾರ ಪ್ರವೇಶ; ತಿರುಮಲ ಪಾವಿತ್ರ್ಯಕ್ಕೆ ಧಕ್ಕೆ, ಭಕ್ತರ ಆಕ್ರೋಶ, Video Viral

ಭಕ್ತರ ತೀವ್ರ ಆಕ್ರೋಶ

ಇನ್ನು ತಿರುಮಲ ಸಿಬ್ಬಂದಿಗಳೇ ಈ ರೀತಿ ಬೇಜವಾಬ್ದಾರಿ ವರ್ತನೆ ತೋರಿರುವುದು ವೆಂಕಟೇಶ್ವರಸ್ವಾಮಿಯ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಅತ್ಯಂತ ಪವಿತ್ರವಾದ ಭಗವಾನ್ ಶ್ರೀ ವೆಂಕಟೇಶ್ವರ ಸ್ವಾಮಿಯ ಪಾದಗಳ ಬಳಿಯೇ ಈ ಅನಾಹುತ ಸಂಭವಿಸಿದೆ.

ಉದ್ಧಟತನದ ಉತ್ತರ

ಭಕ್ತರ ಮಾಹಿತಿಯ ಪ್ರಕಾರ, ಕೆಲವು ಸಿಬ್ಬಂದಿ ಮೆಟ್ಟಿಲುಗಳ ಮೇಲೆ ಕುಳಿತು ಮಾಂಸಾಹಾರ ಸೇವಿಸುತ್ತಿದ್ದರು. ಚಿತ್ರವನ್ನು ನೋಡಿದ ನಂತರ, ಹಾದುಹೋಗುವ ಭಕ್ತರು ಭಗವಂತನ ಮುಂದೆ ಮಾಂಸಾಹಾರ ಸೇವಿಸಬಹುದೇ ಎಂದು ಕೇಳಿದರು.

ಆದರೆ, ತಾವು ತಪ್ಪು ಮಾಡಿದ್ದೇವೆ ಎಂದು ಒಪ್ಪಿಕೊಳ್ಳದೆ, ಸದರಿ ಗುತ್ತಿಗೆ ಸಿಬ್ಬಂದಿ ಭಕ್ತರೊಂದಿಗೆ ಅಗೌರವದಿಂದ ಮಾತನಾಡಿದರು ಮತ್ತು ಅವರಿಗೆ ಬೆದರಿಕೆ ಹಾಕಿದರು. ಆದಾಗ್ಯೂ, ಒಬ್ಬ ವ್ಯಕ್ತಿ ಅವರು ಮಾಂಸಾಹಾರ ಸೇವಿಸುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಾಗ, ಅದು ವೈರಲ್ ಆಗಿತ್ತು. ನಂತರ, ಭಕ್ತರು ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com